ವಿಜಯಪುರ: ನಗರದ ಸುಕೂನ್ ಲೇಔಟ್ ನಲ್ಲಿರುವ ಕೆಪಿಟಿಸಿಎಲ್ ಎಇಇ ಸಿದ್ದರಾಮ ಬಿರಾದಾರ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಿದ್ದರಾಮ ಬಿರಾದಾರ ಅವರ ಅಳಿಯ ಅರ್ಜುನ್ ಬಿರಾದಾರ ನಿವಾಸದ ಮೇಲೂ ದಾಳಿ ನಡೆಸಿದ ಎಸಿಬಿ ತಂಡ ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರ ನಗರದ ಕೆಪಿಟಿಸಿಎಲ್ ಕಚೇರಿಯಲ್ಲೂ ಎಸಿಬಿ ತಂಡ ಪರಿಶೀಲನೆ ನಡೆಸಿದೆ.
ಎಸಿಬಿ ಡಿಎಸ್ಪಿ ಮಂಜುನಾಥ ಗಂಗಲ್ ನೇತೃತ್ವದಲ್ಲಿ ವಿಜಯಪುರ ಧಾರವಾಡ, ಬೆಳಗಾವಿ ಹಾಗೂ ಬಾಗಲಕೋಟೆ ಎಸಿಬಿ ಇನ್ಸಪೆಕ್ಟರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Discussion about this post