ಮೊನ್ನೆ ಮೊನ್ನೆ ದರ್ಶನ್ ಒಂದೆರೆಡು ಮಾತು ತಮಿಳಿನಲ್ಲಿ ಮಾತನಾಡಿದ್ರು ಅನ್ನುವುದನ್ನು ಬಿಟಿವಿ ದೊಡ್ಡದಾಗಿ ತೋರಿಸಿತ್ತು. ಆದರೆ ಇದೇ ಸುಮಲತಾ ಅವರನ್ನು ನಾಯ್ಡು ಎಂದು ಕರೆದ ದಳಪತಿಗಳೇ, ಚಂದ್ರು ಬಾಬು ನಾಯ್ಡು ಅವರನ್ನು ನಿಖಿಲ್ ಪರ ಪ್ರಚಾರ ನಡೆಸಲು ಕರೆ ತಂದಾಗ ಇದೇ ಬಿಟಿವಿಯ ನವ ರಂಧ್ರಗಳು ಬಂದ್ ಆಗಿತ್ತು.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅದ್ಯಾವ ಭಾಷೆಯಲ್ಲಿ ಪ್ರಚಾರ ಮಾಡಿದ್ರು ಅನ್ನುವುದನ್ನು ಬಿಟಿವಿ ಕ್ಯಾಮಾರದ ಕಣ್ಣಿಗೆ ಬೀಳಲೇ ಇಲ್ಲ.
ಹೋಗ್ಲಿ ಬಿಡಿ…ಇದೀಗ ಕಲಬುರಗಿ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪರ ಪ್ರಚಾರ ಮಾಡಲು ತೆಲುಗು ಭಾಷೆಯ ಖ್ಯಾತ ನಟಿಯೊಬ್ಬರ ಮೊರೆ ಹೋಗಿದ್ದಾರೆ.
ಕರ್ನಾಟಕ-ಆಂದ್ರ ಗಡಿ ಭಾಗದ ಮತಗಳ ಮೇಲೆ ಕಣ್ಣಿಟ್ಟಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹೊಸ ಪ್ಲಾನ್ ಮಾಡಿದ್ದಾರೆ. ಗಡಿ ಭಾಗದ ಜನರ ವಿಶ್ವಾಸ ಹಾಗೂ ಮತಗಳನ್ನು ತಮ್ಮತ್ತ ಸೆಳೆದುಕೊಳ್ಳಲು ತೆಲುಗಿನ ಖ್ಯಾತ ನಟಿ ವಿಜಯಶಾಂತಿ ಅವರನ್ನು ತಮ್ಮ ಪರ ಪ್ರಚಾರಕ್ಕೆ ಕರೆ ತರಲಿದ್ದಾರೆ.
ವಿಜಯಶಾಂತಿ ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದು, ಕಾಂಗ್ರೆಸ್ ನಾಯಕಿಯಾಗಿ ಈಗ ಗುರುತಿಸಿಕೊಂಡಿದ್ದಾರೆ.
ವಿಜಯಶಾಂತಿ ಅವರು ಏಪ್ರಿಲ್ 19ರಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಾಲ್ಕು ಕಡೆಯಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಎಂದಿಗೂ ಇಂಥಹ ಪ್ರಚಾರ ತಂತ್ರಕ್ಕೆ ಮೊರೆ ಹೋದವರಲ್ಲ. ತನ್ನ ಸಾಧನೆ ಕೆಲಸಗಳ ಮೂಲಕ ಮತ ಗಳಿಸುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ತನ್ನ ಜೊತೆಗಿದ್ದವರಿಗೆ ಅನ್ಯಾಯ ಮಾಡಿದ ಕಾರಣಕ್ಕೆ ಅವರು ತಿರುಗಿ ಬಿದ್ದಿದ್ದಾರೆ. ಹೀಗಾಗಿ ಭಾಷೆಯ ಮೂಲಕ ಮತ ಕೇಳುವ ಪರಿಸ್ಥಿತಿ ಬಂದಿದೆ.
ಬೇರೆ ಯಾರೋ ಸಿನಿಮಾ ನಟಿಯರ ಪ್ರಚಾರಕ್ಕೆ ಮೊರೆ ಹೋಗಿದ್ದರೆ ತೊಂದರೆ ಇರಲಿಲ್ಲ, ಖರ್ಗೆಯಂತಹ ನಾಯಕರಿಗೆ ಇಂತಹ ಪರಿಸ್ಥಿತಿ ಬಂತಲ್ಲ ಅನ್ನುವುದೇ ದುರುಂತ. ಅದಕ್ಕೆ ವಿಷಾಧ.
Discussion about this post