ಮಳೆಗಾಗಿ ಹೋಮ ಯಾಗ ನಡೆಸಿದ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಇದೀಗ ಮಳೆ ನಿಲ್ಲಿಸಲು ಯಾಗ ಮಾಡಬೇಕಾದ ಪರಿಸ್ಥಿತಿ ಬಂದಿದೆ.
ಅತಿವೃಷ್ಟಿ, ಜಲಪ್ರಳಯ, ಭೂ ಕುಸಿತ ಸೇರಿದಂತೆ ಅನೇಕ ಜಲಗಂಡಾಂತರ ನಿವಾರಣೆಗಾಗಿ ಸುಳ್ಯದ ಚೆನ್ನಕೇಶವ ದೇವಾಲಯದಲ್ಲಿ ವರುಣ ಮಹಾಯಾಗ ನಡೆಯಿತು.
ಮಳೆಗಾಗಿ ಪರ್ಜನ್ಯ ಯಾಗ ನಡೆಸಿ ಫಲ ಕಂಡಿರುವ ಸುಳ್ಯ ಕೇಶವ ಕೃಪಾ ವೇದ ಶಾಲೆಯ ಬ್ರಹ್ಮಶ್ರೀ ಪುರೋಹಿತ ನಾಗರಾಜ್ ಭಟ್ ನೇತೃತ್ವದಲ್ಲಿ ಜಲಗಂಡಾಂತರ ನಿವರಣಾ ಯಾಗಗಳು ನಡೆದಿದ್ದು, ಶೀಘ್ರದಲ್ಲೇ ವರುಣ ದೇವ ವಿರಾಮ ನೀಡುವ ಸಾಧ್ಯತೆಗಳಿದೆಯಂತೆ.
ವಿಶೇಷ ಅಂದರೆ ಇಂತಹುದೊಂದು ಯಾಗ ನಡೆದು 70 ವರ್ಷಗಳು ಕಳೆದು ಹೋಗಿದೆ. 70 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಇದೇ ತರಹದ ಯಾಗ ನಡೆದಿತ್ತು. ಅಲ್ಲಿ ಅತಿವೃಷ್ಟಿಯಾದ ಸಂದರ್ಭದಲ್ಲಿ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿ ಇಂತಹುದೊಂದು ಯಾಗ ಫಲ ಕಂಡಿದ್ದರಂತೆ. ಹೀಗಾಗಿ ಅಲ್ಲಿ ಬಳಸಿದ ವೇದ ಮಂತ್ರಗಳನ್ನು ಸುಳ್ಯದಲ್ಲೂ ಬಳಸಲಾಗಿದೆ ಎಂದು ನಾಗರಾಜ್ ಭಟ್ ಹೇಳಿದ್ದಾರೆ.
Discussion about this post