ಬಿಗ್ ಬಾಸ್ ಮನೆಯಲ್ಲಿ ಒಂಟಿ ಭೂತದಂತಿದ್ದ ರಘುಗೆ ಜೊತೆಯಾಗಿದ್ದು ವೈಷ್ಣವಿ ಗೌಡ. ಒಂಟಿಯಾದಿ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆಯುತ್ತಿದ್ದ ರಘು ಯಾರೊಂದಿಗೂ ಆತ್ಮೀಯತೆ ಬೆಳೆಸಿಕೊಂಡಿರಲಿಲ್ಲ.
ಚಂದ್ರಚೂಡ್ ಬಿಗ್ ಬಾಸ್ ಮನೆಗೆ ಬಂದ ಬಳಿಕ, ನಿನ್ನ ತಾಯಿಯನ್ನು ವೈಷ್ಣವಿ ಮುಖದಲ್ಲಿ ನೋಡು, ನಿನಗೆ ಹೇಳಬೇಕಾಗಿರುವುದನ್ನು ಹೇಳು ಎಂದು ಸಲಹೆ ಕೊಟ್ಟಿದ್ದರು. ರಘು ಹಾಗೇ ಮಾಡಿದ್ದರೂ ಕೂಡಾ. ಇದಾದ ಬಳಿಕ ವೈಷ್ಣವಿ ಮತ್ತು ರಘು ನಡುವೆ ಗಟ್ಟಿಯಾದ ಬಾಂಧವ್ಯ ಬೆಳೆದಿತ್ತು.
ಇದಾದ ಬಳಿಕ ಕೊರೋನಾ ಅಬ್ಬರ ಹೆಚ್ಚಾಗಿದ್ದು, ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತಿದ್ದು ಈಗ ಇತಿಹಾಸ. ಈ ನಡುವೆ ಮನೆಯಿಂದ ಹೊರ ಬಂದಿರುವ ಸದಸ್ಯರು ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದು, ಪರಸ್ಪರ ಕಾಲೆಳೆಯುತ್ತಿದ್ದಾರೆ. ಅದರಲ್ಲಿ ಕೆಲ ಹಿರಿಯ ಸದಸ್ಯರಿಗೆ ಅವಕಾಶ ನೀಡಲಾಗಿಲ್ಲ ಅನ್ನುವ ದೂರುಗಳು ಕೂಡಾ ಇದೆ.
ಈ ನಡುವೆ ಇನ್ಸ್ಟಾದಲ್ಲಿ ಸ್ಟೋರಿ ಹಾಕಿರುವ ರಘು, ಓರ್ವ ಅದ್ಭುತ ವ್ಯಕ್ತಿಯನ್ನು ಗೆಳತಿಯಾಗಿ ಪಡೆದಿದ್ದಕ್ಕೆ ನಿಮಗೆ ಅಭಿನಂದನೆ ಎಂದು ವೈಷ್ಣವಿಯನ್ನು ಟ್ಯಾಗ್ ಮಾಡಿದ್ದರು. ಇದನ್ನು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದ ವೈಷ್ಣವಿ ಈತ ನೋಡಲು ತುಂಬಾ ಫನ್ನಿಯಾಗಿ ಅನ್ನಿಸುತ್ತದೆ. ಆದಷ್ಟು ಬೇಗ 3 ಲಕ್ಷ ಹಿಂಬಾಲಕರನ್ನು ಹೊಂದೋ ಸಲುವಾಗಿ ಈತ ಹೀಗೆ ಮಾಡುತ್ತಿದ್ದಾನೆ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಘು ದುಷ್ಮನ್ ಕಹಾ ಹೈ ಅಂದ್ರೆ ಬಗಲ್ ಮೇ ಹೈ ಅಂತಾ ಸ್ಟೋರಿ ಹಾಕಿಕೊಂಡಿದ್ದಾರೆ.
Discussion about this post