ಉಳ್ಳಾಲ ಕ್ಷೇತ್ರದಲ್ಲಿ ಈ ಬಾರಿ ಅಭಿವೃದ್ಧಿ ವಿಚಾರದಲ್ಲಿ ಮತ ಸಮರ ನಡೆಯುವ ಲಕ್ಷಣ ಗೋಚರಿಸುತ್ತಿದೆ ( UT Khader)
ಮುಡಿಪು : ಲಾರಿ, ಬಸ್ಸು ಚಲಾಯಿಸಿ ಸುದ್ದಿಯಾಗಿದ್ದ ಶಾಸಕ ಯುಟಿ ಖಾದರ್ ( UT Khader)ಇದೀಗ ಆಟೋ ಚಲಾಯಿಸಿ ಸುದ್ದಿಯಲ್ಲಿದ್ದಾರೆ.
ಮಳೆಯಿಂದ ಹಾನಿಯಾದ ಪ್ರದೇಶಗಳ ಸಮೀಕ್ಷೆ ಸಲುವಾಗಿ ರಿಕ್ಷಾ ಚಲಾಯಿಸಿಕೊಂಡು ಹೋಗಿರುವ ಶಾಸಕರು, ಮಳೆಯಿಂದ ಮನೆ ಕಳೆದುಕೊಂಡವರಿಗೆ ಸಾಂತ್ವಾನ ಹೇಳಿದ್ದಾರೆ.
ಇದನ್ನು ಓದಿ : mysore dasara 2022 : ಅರಮನೆಗೆ ಗಜಪಡೆ : ಮೈಸೂರು ದಸರಾಗೆ ಭರ್ಜರಿ ಸಿದ್ದತೆ
ಪಜೀರು ಪಾನೇಲ ಗ್ರಾಮದ ಮಿಂಗಲ್ ವೇಗಸ್ ಅನ್ನುವವರ ಮನೆ ಮಳೆಯಬ್ಬರಕ್ಕೆ ಹಾನಿಯಾಗಿದ್ದು, ಈ ವೇಳೆ ಪಕ್ಷದ ಸದಸ್ಯರೊಬ್ಬರ ರಿಕ್ಷಾ ಪಡೆದು ತಾವೇ ಚಲಾಯಿಸಿಕೊಂಡು ಹೋಗಿದ್ದಾರೆ.
ಈ ವೇಳೆ ಅನೇಕ ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು. ಮುಂದಿನ ಚುನಾವಣೆಯಲ್ಲಿ ಖಾದರ್ ( UT Khader ) ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿಯಲಿರುವ ಸಂತೋಷ್ ಕುಮಾರ್ ರೈ ಬೋಳಿಯಾರ್ ಕೂಡಾ ಮಳೆ ಹಾನಿ ವೀಕ್ಷಣೆಯಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯನ್ನು ಗಮನಿಸಿದರೆ ಉಳ್ಳಾಲ ಕ್ಷೇತ್ರದಲ್ಲಿ ಈ ಬಾರಿ ಜಾತಿ ಧರ್ಮ ಮತ ಆಧಾರಿತ ಚುನಾವಣೆ ನಡೆಯುವ ಲಕ್ಷಣಗಳಿಲ್ಲ. ಬದಲಾಗಿ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ನಡೆಯುವ ಸಾಧ್ಯತೆಗಳಿದೆ. ಇದೊಂದು ಒಳ್ಳೆಯ ಬೆಳವಣಿಗೆ ಅನ್ನುವುದರಲ್ಲಿ ಎರಡು ಮಾತಿಲ್ಲ.
Discussion about this post