ಬೆಂಗಳೂರು : ರಸ್ತೆ ಗುಂಡಿ ಮುಚ್ಚದಿದ್ರೂ ಪರವಾಗಿಲ್ಲ, ರಸ್ತೆ ಗುಂಡಿಗೆ ಅದೆಷ್ಟು ಮಂದಿ ಬಲಿಯಾದರೂ ಪರವಾಗಿಲ್ಲ, ದಂಡ ವಸೂಲಿ ಅನ್ನುವ ಕಾರ್ಯಕ್ರಮ ಮಾತ್ರ ನಿಲ್ಲುವುದಿಲ್ಲ. ದೊಡ್ಡವರ ಮಕ್ಕಳು ಕುಡಿದು ಗಾಡಿ ಓಡಿಸಿದರೆ ಪರವಾಗಿಲ್ಲ, ಪುಂಡು ಪೋಕರಿಗಳು ನಡು ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದರೂ ಕಾಣಿಸುವುದಿಲ್ಲ. ದಂಡ ವಸೂಲಿ ಮಾತ್ರ ನಿಲ್ಲೋದಿಲ್ಲ.
ಇದೀಗ ಬೆಂಗಳೂರು ಟ್ರಾಫಿಕ್ ಪೊಲೀಸರು ರಾಜ್ಯದ ಬೊಕ್ಕಸ ತುಂಬಿಸಲು ಹೊಸ ಐಡಿಯಾ ಹುಡುಕಿದ್ದಾರೆ. ಇಷ್ಟು ದಿನಗಳ ಕಾಲ ಲೈಸೆನ್ಸ್, ಆರ್ ಸಿ, ವಿಮೆ ಮೊಬೈಲ್ ಫೋನ್ ಬಳಕೆ, ಮಿರರ್ ಎಂದು ದಂಡ ಹಾಕುತ್ತಿದ್ದವರು ಇನ್ನು ಮುಂದೆ ವಾಹನ ಚಾಲನೆ ಮಾಡುವಾಗ ಇಯರ್ ಫೋನ್, ಬ್ಲೂ ಟೂತ್ ಬಳಸಿದರೂ ದಂಡ ಹಾಕಲಿದ್ದಾರೆ.
ಮೊಬೈಲ್ ಫೋನ್ ಬಳಕೆ ಬಗ್ಗೆ ಪೊಲೀಸರು ನಿಗಾ ವಹಿಸಿದ ಬಳಿಕ ವಾಹನ ಸವಾರರು ಇಯರ್ ಫೋನ್, ಹೆಡ್ ಫೋನ್, ಬ್ಲೂ ಟೂತ್ ಬಳಸಲಾರಂಭಿಸಿದ್ದಾರೆ. ಹೀಗಾಗಿ ಈ ಎಲ್ಲವನ್ನೂ ಇದೀಗ ಮೊಬೈಲ್ ಫೋನ್ ಬಳಕೆ ಎಂದೇ ಪರಿಗಣಿಸಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಮೊದಲ ಬಾರಿ 1 ಸಾವಿರ ರೂಪಾಯಿ ಹಾಗೂ ಎರಡನೆ ಬಾರಿ 2 ಸಾವಿರ ರೂಪಾಯಿ ದಂಡ ಬೀಳಲಿದೆ. ಆಧುನಿಕ ಸಂವಹನ ಮಾಧ್ಯಮ ಬಳಸಿ ಕರೆ ಸ್ವೀಕಾರ, ಸಂಗೀತ ಕೇಳುವುದು ಮಾತ್ರವಲ್ಲದೆ, ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಗೂಗಲ್ ಮ್ಯಾಪ್ ಬಳಸುವುದು ಕೂಡಾ ಅಪರಾಧವಾಗಲಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಮಾತನಾಡಿದ್ದು, ಚಾಲನೆ ವೇಳೆ ಇಯರ್ ಫೋನ್ ಬಳಸಿ ಸಂಗೀತ ಆಲಿಸುತ್ತಾ ವಾಹನ ಚಲಾಯಿಸುತ್ತಾರೆ ಎಂದು ಅಪಾಯಕಾರಿ ಅಂದಿದ್ದಾರೆ.
ಟ್ರಾಫಿಕ್ ಪೊಲೀಸರ ನಿರ್ಧಾರ ಸರಿಯಾಗಿದೆ. ಆದರೆ ಇದರಿಂದ ಫುಡ್ ಡೆಲಿವರಿ ಹುಡುಗರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಇನ್ನು ಹೀಗೆ ಇಯರ್ ಫೋನ್ ಬಳಕೆಯಿಂದ ಸಾಕಷ್ಟು ಅಪಾಯ ಕೂಡಾ ಇದೆ. ಆದರೆ ಟೋಯಿಂಗ್ ಅನ್ನುವ ದಂಧೆಗೆ ಬ್ರೇಕ್ ಹಾಕಿ ಬಳಿಕ ಈ ಎಲ್ಲಾ ನಿಯಮಗಳನ್ನು ಜಾರಿಗೊಳಿಸಿದ್ರೆ ಚೆನ್ನಾಗಿತ್ತು. ಟೋಯಿಂಗ್ ಮಾಡುವ ವೇಳೆ ಪಾಲನೆಯಾಗದ ನಿಯಮ, ವಾಹನ ಚಾಲನೆ ಸಂದರ್ಭದಲ್ಲಿ ಪಾಲನೆಯಾಗಬೇಕು ಎಂದು ಬಯಸುವುದರಲ್ಲಿ ಅದ್ಯಾವ ನೈತಿಕತೆ ಇದೆ.
ith the availability of modern devices like Bluetooth handsfree and infotainment systems, many of us do not know if we can use them legally while riding or driving. Bangalore Police have made these rules clear and will start issuing challans to anyone who is not following these laws properly
Discussion about this post