ಮಂಗಳೂರು : ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಆಟ ಸಿಕ್ಕಾಪಟ್ಟೆ ಕಲರ್ ಫುಲ್ ಆಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನಿಲ್ಲದ ಪ್ರಯೋಗಗಳು ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ.
ಬಿಸಿಸಿಐ, ಐಸಿಸಿ ದಿಗ್ಗಜರಿಗೂ ಹೊಳೆಯದ ಐಡಿಯಾಗಳನ್ನು ಗ್ರಾಮೀಣ ಪ್ರತಿಭೆಗಳು ಪರಿಚಯಿಸುತ್ತಿದೆ.
ಗಜಗಳ ಲೆಕ್ಕದಲ್ಲಿ ಒಂದು ಕಡೆ ಆಟ ನಡೆದರೆ, ಮತ್ತೊಂದು ಕಡೆ ಬಹುಮಾನಗಳ ಮೂಲಕ ಕ್ರಿಕೆಟ್ ಪಂದ್ಯಗಳು ಗಮನ ಸೆಳೆಯುತ್ತಿದೆ.
ಮೊನ್ನೆ ಮೊನ್ನೆ ಎಣ್ಣೆ ಬಾಟ್ಲಿ ಬಹುಮಾನ ಘೋಷಿಸಿದ್ದ ಆಯೋಜಕರು ಕೊನೆಗೆ ಪಂದ್ಯವನ್ನೇ ರದ್ದುಗೊಳಿಸಿದ್ದರು.
ಇದನ್ನೂ ಓದಿ : ಅಮ್ಮ ಪೇರು ಎಟ್ಲುಂದಿ…. ಟಗರು ಸರೋಜಾ ಹೆಸರಿನಲ್ಲಿ ಕ್ರಿಕೆಟ್ ಟೀಮ್ ಕಟ್ಟಿದ ಹುಡುಗರು….
ಇದಾದ ಬಳಿಕ ಕುರಿ ಕೋಳಿಯನ್ನು ಬಹುಮಾನವಾಗಿ ನೀಡುವುದಾಗಿ ಹೇಳಿ ಕ್ರಿಕೆಟ್ ಪಂದ್ಯ ಘೋಷಿಸಿದ್ದ ಆಯೋಜಕರು, ಕ್ರಿಕೆಟ್ ಟೀಮ್ ಗಳ ಹೆಸರು ನೋಂದಣಿ ನೋಡಿ ಗಾಬರಿ ಬಿದ್ದು ಪಂದ್ಯವನ್ನೇ ಮುಂದೂಡಿದ್ದರು.
ಇದೀಗ ಉಡುಪಿಯಲ್ಲಿ ಫ್ರೆಂಡ್ಸ್ ಎಂಜಿಎಂ ಹೆಸರಿನ ಗುಂಪೊಂದು 30 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿದೆ.
ಇದನ್ನು ಓದಿ : ಸ್ಪೆಷಲ್ ಪ್ರೈಸ್ ಕ್ರಿಕೆಟ್ ಮ್ಯಾಚ್ ಹೊಗೆ ಹಾಕಿಸಿಕೊಂಡಿದ್ಯಾಕೆ ಗೊತ್ತಾ…?
ಇಲ್ಲಿ ಗೆದ್ದ ಮೊದಲ ತಂಡಕ್ಕೆ 10 ಲಿ ಪೆಟ್ರೋಲ್ ಬಹುಮಾನ ನೀಡಲಾಗುತ್ತದೆ.ದ್ವೀತಿಯ ಬಹುಮಾನ 5 ಲೀ ಡಿಸೇಲ್, ತೃತೀಯ ಬಹುಮಾನವಾಗಿ 3ಲೀ ಗ್ಯಾಸ್ ಸಿಗಲಿದೆ.
ಏರುತ್ತಿರುವ ಇಂಧನ ದರವನ್ನು ಈ ಮೂಲಕ ಬಳಸಿಕೊಂಡಿರುವುದಕ್ಕೂ ನಿಜಕ್ಕೂ ಗ್ರೇಟ್ ಅಂದ್ರೆ ತಪ್ಪಿಲ್ಲ.
Discussion about this post