ಮದುಮಗಳು ಹಲವು ವರ್ಷಗಳ ಹಿಂದೆ ಉದಯಟಿವಿಯಲ್ಲಿ ಪ್ರಸಾರವಾಗಿದ್ದ ಧಾರವಾಹಿ. ಆಗ ಸೀರಿಯಲ್ ಜಮಾನ ಈಗಿನಷ್ಟು ಬೆಳೆದಿರಲಿಲ್ಲ. ಹೀಗಾಗಿ ಉದಯಟಿವಿಯ ಆಗಿನ ಮದಮಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದಳು.
ಕನಸಲಿ ಕಂಡ ರಾಜಕುಮಾರನ ಕನ್ನಡಿಯೊಳಗೂ ಕಂಡಳು…. ಬಿಸಿಲು ಕುದುರೆ ಎಂದರಿಯದೆ ಬೆನ್ನ ಹಿಂದೆಯೇ ಹೊರಟಳು. ಮಾಯಾ ಮೃಗಕೆ ಮನಸೋತು ವನವಾಸವಿದ್ದ ಹೆಣ್ಣು ಮಗಳ ವ್ಯಥೆಯದು. ಮದುವೆಯಾಗದೆ ಸೊಸೆಯಾಗಿ ಬಾಳುವ ಮದುಮಗಳ ಕಥೆಯಿದು… ಅನ್ನುವ ಸಾಲಿನ ಟೈಟಲ್ ಸಾಂಗ್ ಹೊಂದಿದ್ದ ಈ ಧಾರವಾಹಿಯನ್ನು ಬಲವಳ್ಳಿ ದರ್ಶಿತ್ ಭಟ್ ನಿರ್ದೇಶಿಸಿದ್ದರು.
ಇದೀಗ ಇದೇ ಟೈಟಲ್ ನಲ್ಲಿ ಧಾರವಾಹಿ ಉದಯಟಿವಿಯಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಕಾವ್ಯಾಂಜಲಿ ಧಾರವಾಹಿ ತಂಡವೇ ನಿರ್ಮಾಣ ಮತ್ತು ನಿರ್ದೇಶನದ ಹೊಣೆ ಹೊತ್ತಿದೆ. ವಿಶೇಷ ಅಂದ್ರೆ ಹಳೆಯ ಮದುಮಗಳ ಕಥೆಗೂ ಹೊಸ ಮದುಮಗಳ ಕಥೆಗೂ ಸಾಕಷ್ಟು ಸಾಮ್ಯತೆ ಇರುವಂತಿದೆ. ಆದರೆ ಇದು ತೆಲುಗಿನ ಅತು ಅತ್ತಮ್ಮ ಕೂತುರು ಸೀರಿಯಲ್ ನ ರಿಮೇಕ್. ಇನ್ನು ಆಗಿನ ಮದುಮಗಳ ಧಾರವಾಹಿಯಲ್ಲಿ ನಟಿಸಿದ್ದ ಸಿರಿ, ಈ ಬಾರಿ ಖಡಕ್ಕ್ ಅತ್ತೆಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಮತ್ತೆ ಬ್ಯುಸಿ ನಟಿಯಾಗಿ ಸಿರಿ ಹೊಮ್ಮಿದ್ದಾರೆ.
Discussion about this post