Tuesday, March 9, 2021

tv9 news ಗೆ ಸ್ವಾಗತ ನಾನು ರೆಹಮಾನ್…. ಅಲ್ಲಲ್ಲ Btvಗೆ ಸ್ವಾಗತ…

Must read

- Advertisement -
- Advertisement -

tv9 news ಗೆ ಸ್ವಾಗತ ನಾನು ರೆಹಮಾನ್ ಅನ್ನುತ್ತಾ ತನ್ನ ಸುಮದುರ ಕಂಠದಿಂದ ಇಡೀ ಕನ್ನಡಿಗರ ಮನಗೆದ್ದು ಸುದ್ದಿ ಓದುವಿಕೆಗೆ ಒಂದು ಹೊಸ ಭಾಷೆ ಬರೆದಿದ್ದ stylish anchor great human being ರೆಹಮಾನ್ ಟಿವಿ9 ತೊರೆದು ಸರಿ ಸುಮಾರು ನಾಲ್ಕು ವರ್ಷಗಳು ಸಂದಿದೆ.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಟಿವಿ9ಗೆ ರಾಜೀನಾಮೆ ಕೊಟ್ಟಿದ್ದ ಅವರು, ಸುದ್ದಿ ಓದಿದ್ದು ಸಾಕು, ಮುಂದೇನೋ ಸಾಧಿಸಬೇಕು ಎಂದು ಹೆಜ್ಜೆ ಇಟ್ಟಿದ್ದರು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಜನ ರಂಜಿಸಿದ ಬಳಿಕ ಮತ್ತೆ ಕಿರುತೆರೆಯ ಕಾರ್ಯಕ್ರಮ ನಿರೂಪಣೆಗಳಲ್ಲಿ ಕಾಣಿಸಿಕೊಂಡಿದ್ದ ರೆಹಮಾನ್ ಇದೇ ಸಂದರ್ಭದಲ್ಲಿ ಚಂದನವನದಲ್ಲೂ ಅದೃಷ್ಟ ಪರೀಕ್ಷೆ ನಡೆಸಿದ್ದರು. ದೊಡ್ಡ ಮಟ್ಟದ ಯಶಸ್ಸು ಹುಡುಕಿಕೊಂಡು ಬಾರದಿದ್ದರೂ, ಕನ್ನಡಿಗರು ಕೈ ಬಿಟ್ಟಿರಲಿಲ್ಲ.

ಇದೀಗ ಟಿವಿ9 ತೊರೆದ ರೆಹಮಾನ್ ಬಿಟಿವಿಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಇದೇನಿದು ಇನ್ಮುಂದೆ ಸುದ್ದಿ ಓದಲ್ಲ ಅಂದವರು ಮತ್ತೆ ಅದೇ ಕೆಲಸಕ್ಕೆ ಮರಳಿದ್ರಲ್ಲ ಎಂದು ಅಚ್ಚರಿಗೊಂಡವರು ಸಾಕಷ್ಟು ಜನ.

ಗಾಬರಿಯಾಗಬೇಡಿ, ರೆಹಮಾನ್ ಇಂದು ಬಿಟಿವಿಯಲ್ಲಿ ಕಾಣಿಸಿಕೊಂಡಿದ್ದು ಉದ್ಯೋಗಿಯಾಗಿ ಅಲ್ಲ. ಇದೇ ಶುಕ್ರವಾರ ಅವರ ಅಭಿನಯದ ‘ಗರ’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅದರ ಪ್ರಚಾರದ ಭಾಗವಾಗಿ ಸೂಟ್ ಹಾಕಿಕೊಂಡು ಬ್ರೇಕಿಂಗ್ ಸುದ್ದಿ ಓದಿದ್ದಾರೆ.

ಇದಾದ ನಂತ್ರ ಗರ ಸಿನಿಮಾ ಕುರಿತ ವಿಶೇಷ ಕಾರ್ಯಕ್ರಮದಲ್ಲಿ Anchoring ಕಾರ್ಯವನ್ನು ಮಾಡಿ ಮುಗಿಸಿದ್ದಾರೆ.

ಇನ್ನು ರೆಹಮಾನ್ ಬಿಟಿವಿಯಲ್ಲಿ ಕಾಣಿಸಿಕೊಂಡ ತಕ್ಷಣ ಅವರ ಅಭಿಮಾನಿ ಬಳಗ welcome ಅಂದ್ರೆ, ಮತ್ತೆ ಕೆಲವರು ಈ ಟಿವಿಗ್ಯಾಕೆ ಬಂದ್ರಿ ಸಾರ್, ಬೇರೆ ಕಡೆ ಎಲ್ಲೂ ಅವಕಾಶ ಇರಲಿಲ್ವ ಅಂದಿದ್ದಾರೆ.

ಒಟ್ಟಿನಲ್ಲಿ ಇನ್ಮುಂದೆ ಟಿವಿ9 ನಲ್ಲಿ ನಮಗೆ ಕಾಣಿ ಸಿಗೋಲ್ಲ ಅವರ ಧ್ವನಿಯು ಕೇಳಿಸಲ್ಲ, 10 ವರ್ಷಗಳ ಟಿವಿ9 ನೊಂದಿಗಿನ ಪಯಣವನ್ನು ಅಂತ್ಯಗೊಳಿಸದ ರೆಹಮಾನ್ ಸುದ್ದಿ ವಾಚಕರಾಗಿ ಕಾಣಿಸಿಕೊಳ್ಳಲ್ಲ ಎಂದು ಬೇಸರಗೊಂಡಿದ್ದವರಿಗೆ ಒಂದೈದು ನಿಮಿಷ ಮತ್ತೆ ಸುದ್ದಿ ವಾಚಕರಾಗಿ ರೆಹಮಾನ್ ಕಾಣಿಸಿಕೊಂಡಿದ್ದಾರೆ.

ಅಂದ ಹಾಗೇ ಗರ ಸಿನಿಮಾ ‘ತುಂಬಾ ಒಳ್ಳೆಯ ಉದ್ದೇಶದೊಂದಿಗೆ ಮಾಡಿರುವ ಸಿನಿಮಾವಾಗಿದೆ.ಆರ್‌ ಕೆ ನಾರಾಯಣ್‌ ಅವರ ಅಸ್ಟ್ರಾಲಜಿ ಡೇ ಅನ್ನುವ ಕತೆಯನ್ನು ಓದಿ ಅದು ಹುಟ್ಟಿಸಿದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ಹುಟ್ಟಿಕೊಂಡ ಚಿತ್ರವೇ ಗರ.

- Advertisement -
- Advertisement -
- Advertisement -

Latest article