ಟೊಮ್ಯಾಟೊ ದರ ಏರಿಕೆಯಿಂದ ಬರೀ ಗ್ರಾಹಕರಿಗೆ ಮಂಡೆ ಬಿಸಿ ಅಂದುಕೊಳ್ಳಬೇಡಿ, ಟೊಮ್ಯಾಟೊ ಬೆಳೆದ ರೈತನಿಗೂ ಮಂಡೆ ಬಿಸಿ, ಮಂಡಿಯ ವ್ಯಾಪಾರಿಗೂ ಮಂಡೆ ಬಿಸಿ ಯಾಕಪ್ಪ ಅಂತೀರಾ, ಇಲ್ಲೊಬ್ಬ ವ್ಯಾಪಾರಿ 21 ಲಕ್ಷ ರೂಪಾಯಿ ಮೊತ್ತದ ಟೊಮೆಟೋ ಕಳೆದುಕೊಂಡ ಆತಂಕದಲ್ಲಿದ್ದಾರೆ
ಕೆಲ ದಿನಗಳ ಹಿಂದೆ ಕೋಲಾರ ಮಾರುಕಟ್ಟೆಯಲ್ಲಿ ಕಳ್ಳನೊಬ್ಬ ಟೊಮ್ಯಾಟೊ ಬಾಕ್ಸ್ ಕಳ್ಳತನ ಮಾಡಿದ್ದ. ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿತ್ತು. ಇನ್ನು ಟೊಮೆಟೋ ದರ ಏರಿಕೆಯಾದ ಬೆನ್ನಲ್ಲೇ, ಇದೇ ರೀತಿಯ ಅನೇಕ ಪ್ರಕರಣ ಪದೇ ಪದೇ ಬೆಳಕಿಗೆ ಬಂದಿತ್ತು.
ಈ ನಡುವೆ ಕೋಲಾರದಲ್ಲಿ ಟೊಮ್ಯಾಟೊ ಲೋಡ್ ಮಾಡಿ ರಾಜಸ್ಥಾನದ ಜೈಪುರಕ್ಕೆ ಹೊರಟಿದ್ದ ಲಾರಿ ನಾಪತ್ತೆಯಾಗಿರುವ ಸುದ್ದಿ ಬಂದಿದೆ. ಪ್ರಸ್ತುತ ಡ್ರೈವರ್ ನಂಬರ್ ವ್ಯಾಪ್ತಿ ಪ್ರದೇಶದ ಹೊರಗಿದ್ದು, ಮಾಲೀಕರು ಕಂಗಲಾಗಿದ್ದಾರೆ.
ಕೋಲಾರದಿಂದ ರಾಜಸ್ಥಾನಕ್ಕೆ ಟೊಮೆಟೋ ತುಂಬಿ ಹೊರಟಿದ್ದ ಲಾರಿ ಚಾಲಕ ಟೊಮೆಟೋ ಸಮೇತ ಲಾರಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಹೀಗಾಗಿ ಕಂಗಾಲಾದ ಮಂಡಿ ಮಾಲೀಕರು ಈ ಕುರಿತು ಕೋಲಾರ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
Discussion about this post