ಮನೆಗೆ ಸಿಡಿಲು ಬಡಿದು 2 ವರ್ಷದ ಹೆಣ್ಣು ಮಗುವಿಗೆ ಶಾಕ್ ಹೊಡೆದ ಘಟನೆ ವರದಿಯಾಗಿದೆ. ದುರ್ಘಟನೆಯಲ್ಲಿ ಶಾಕ್ ಹೊಡೆದ ಮಗುವಿಗೆ ಪ್ರಜ್ಞೆ ತಪ್ಪಿದೆ.
ಬೆಳ್ತಂಗಡಿ / ಮಂಗಳೂರು : ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಸಂಜೆ ಹೊತ್ತಿಗೆ ಗುಡುಗು ಸಿಡಿಲು ಸಹಿತ ಭರ್ಜರಿ ಮಳೆಯಾಗುತ್ತಿದೆ. ಈ ನಡುವೆ ಅಲ್ಲಲ್ಲಿ ಸಿಡಿಲು ಅಘಾತದ ಘಟನೆಗಳು ಕೂಡಾ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಜೇಯ ನಗರ ಎಂಬಲ್ಲಿ ಮನೆಗೆ ಸಿಡಿಲು ಬಡಿದು 2 ವರ್ಷದ ಹೆಣ್ಣು ಮಗುವಿಗೆ ಶಾಕ್ ಹೊಡೆದ ಘಟನೆ ವರದಿಯಾಗಿದೆ. ದುರ್ಘಟನೆಯಲ್ಲಿ ಶಾಕ್ ಹೊಡೆದ ಮಗುವಿಗೆ ಪ್ರಜ್ಞೆ ತಪ್ಪಿದೆ.
ತಕ್ಷಣ ಮಗುವನ್ನು ಲಾಯಿಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಗು ಅಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮನೆಯ ವಿದ್ಯುತ್ ವಯರಿಂಗ್ ಸುಟ್ಟು ಹೋಗಿದೆ.
ಮತ್ತೊಂದು ಕಡೆ ಸಿಡಿಲು ಬಡಿದು ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ಮಂಗಳೂರು ಹೊರವಲಯದ ವಾಮಂಜೂರಿನ ಅಮೃತ ನಗರದಲ್ಲಿ ನಡೆದಿದೆ.
ಗೋಪಾಲ ಪೂಜಾರಿ ಅನ್ನುವವರ ಮನೆಗೆ ಬಡಿದ ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ಉಪಕರಣಗಳು ಸಂಪೂರ್ಣ ಸುಟ್ಟು ಹೋಗಿವೆ. ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ಗೆ ಬೆಂಕಿ ಬಿದ್ದಿದೆ. ಮನೆಯಲ್ಲಿ ಮಲಗಿದ್ದ ಶ್ವೇತಾ ಹಾಗೂ 5 ವರ್ಷದ ಮಗುವಿನ ಕಿವಿಗೆ ಸಿಡಿಲಿನ ಭಾರೀ ಸದ್ದಿನಿಂದ ಹಾನಿ ಉಂಟಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ದುರ್ಘಟನೆ ವೇಳೆ ಮನೆಯಲ್ಲಿದ್ದ ನಾಲ್ವರು ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Discussion about this post