ಬೆಂಗಳೂರು : ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಬಹುದು ಎಂದು ಭಾವಿಸಲಾಗಿರುವ ಒಮಿಕ್ರೋನ್ ವೈರಸ್ ಹಾವಳಿ ನಿಧಾನವಾಗಿ ಏರತೊಡಗಿದೆ. ಕರ್ನಾಟಕದಲ್ಲಿ ಮತ್ತೊಬ್ಬರಿಗೆ ಒಮಿಕ್ರೋನ್ ವೈರಸ್ ತಗುಲಿರುವುದು ದೃಢಪಟ್ಟಿದ್ದು, ಹೀಗಾಗಿ ರಾಜ್ಯದಲ್ಲಿ ಒಮಿಕ್ರೋನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿದೆ. ಇನ್ನು ದೇಶದಲ್ಲಿ 5 ಹೊಸ ಒಮಿಕ್ರೋನ್ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಒಮಿಕ್ರೋನ್ ಸೋಂಕಿತರ ಸಂಖ್ಯೆ 38ಕ್ಕೆ ಏರಿದೆ.
ಡಿಸೆಂಬರ್ 1 ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಗೆ ತಪಾಸಣೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಬಳಿಕ ಅವರನ್ನು ಕ್ವಾರಂಟೈನ್ ಗೆ ಕಳುಹಿಸಲಾಗಿತ್ತು. ಎರಡು ದಿನಗಳ ಬಳಿಕ ಅಂದ್ರೆ ಡಿಸೆಂಬರ್ 3 ರಂದು ಸೋಂಕಿನ ಲಕ್ಷಣ ಕಾಣಿಸಿಕೊಂಡ ಕಾರಣ RTPCR Test ನಡೆಸಿದಾಗ ಕೊರೋನಾ ಪಾಸಿಟಿವ್ ಬಂದಿತ್ತು.
ವ್ಯಕ್ತಿ ಹೈರಿಸ್ಕ್ ದೇಶದಿಂದ ಬಂದ ಕಾರಣ ತಕ್ಷಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯ್ತು. ಜೊತೆಗೆ ವಂಶವಾಹಿ ಪರೀಕ್ಷೆಗೂ ಕ್ರಮ ಕೈಗೊಳ್ಳಲಾಯ್ತು. ಭಾನುವಾರ ಇದರ ವರದಿ ಬಂದಿದ್ದು ಒಮಿಕ್ರೋನ್ ದೃಢಪಟ್ಟಿದೆ. ಆದರೆ ವರದಿ ಬರುವ ಹೊತ್ತಿಗೆ ವ್ಯಕ್ತಿ ಸಂಪೂರ್ಣ ಚೇತರಿಸಿಕೊಂಡಿದ್ದು, ಯಾವುದೇ ರೋಗ ಲಕ್ಷಣಗಳು ಕೂಡಾ ಅವರಿಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ನಡುವೆ ಸೋಂಕಿತರ 5 ಪ್ರಾಥಮಿಕ ಸಂಪರ್ಕ ಹಾಗೂ 15 ದ್ವೀತಿಯ ಸಂಪರ್ಕಿತರಿಗೆ ಕೊರೋನಾ ನೆಗೆಟಿವ್ ಬಂದಿದ್ದು ಮುಂಜಾಗ್ರತ ಕ್ರಮವಾಗಿ ಒಟ್ಟು 20 ಮಂದಿಯನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದ್ದು, ಬಿಬಿಎಂಪಿಯ ಆರೋಗ್ಯ ವಿಭಾಗ ನಿಗಾ ವಹಿಸಿದೆ.
ಇನ್ನು ಮಹಾರಾಷ್ಟ್ರದಲ್ಲಿ ಒಂದು ಒಮಿಕ್ರೋನ್ ಪ್ರಕರಣ ಪತ್ತೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಬಂದ 40 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದಾರೆ. ಅಂಧ್ರದ ಅಮರಾವತಿಗೆ ಐರ್ಲೇಂಡ್ ದೇಶದಿಂದ ಬಂದ 34 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಟಲಿಯಿಂದ ಚಂಢೀಗಢಕ್ಕೆ ಬಂದ 20 ವರ್ಷದ ಯವಕ, ಜೊತೆಗೆ ಬ್ರಿಟನ್ ಪ್ರವಾಸಕ್ಕೆಂದು ಹೋದ ಕೇರಳದ 39 ವರ್ಷದ ವ್ಯಕ್ತಿ ಒಮಿಕ್ರೋನ್ ಹೊತ್ತು ತಂದಿದ್ದಾನೆ.
A 34-year old returnee from South Africa has tested positive for Omicron in Karnataka.
Discussion about this post