ಕಂಟೆಂಟ್ ಬೇಸಡ್ , ಸೋಷಿಯಲ್ ಮೆಸೇಜ್ ಹೊಂದಿರುವ ಸಿನಿಮಾಗಳಿಗೆ ಅವುಗಳದ್ದೇ ಆದ ಮಹತ್ವವಿದೆ.. ಅಂತಹ ಸಿನಿಮಾಗಳಿಗಂತಲೇ ಅದೇ ವರ್ಗದ ಸಾಕಷ್ಟು ಅಭಿಮಾನಿಗಳಿದ್ದಾರೆ… ಕಮರ್ಶಿಯಲ್ ಸಿನಿಮಾಗಳ ನಡುವೆ ಕಂಟೆಂಟ್ ಸಿನಿಮಾಗಳು ಯಶಸ್ಸು ಗಳಿಸುತ್ತಿವೆ.. ಇಂತಹ ಸಿನಿಮಾಗಳಿಂದ ಸಮಾಜಕ್ಕೆ ಒಂದೊಳ್ಳೆ ಮೆಸೇಜ್ ನೀಡಲಾಗುತ್ತದೆ..
ಅಂತಹದ್ದೇ ಒಂದು ಅದ್ಭುತ ಪರಿಕಲ್ಪನೆ ಹೊತ್ತಿರುವ ನಿರ್ದೇಶಕ YK ಅವರು ತಮ್ಮದೇ ಕಲ್ಪನೆಯ ಸಿನಿಮಾ ಮಾಡಿದ್ದಾರೆ. ಇಂತಹ ಅಧ್ಬುತ ಸಿನಿಮಾಗೆ ನರಸಿಂಹ ಕುಲಕರ್ಣಿ ಅವರು ಬಂಡವಾಳ ಹೂಡಿದ್ದಾರೆ.. ಅಂದ್ಹಾಗೆ ಕನ್ನಡದ ಈ ಹೊಸ ಸಿನಿಮಾದ ಹೆಸರು ಗಿಲ್ಕಿ.. ಒಂದು ಅದ್ಭುತ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ , ಪಕ್ಕಾ ಕಂಟೆಂಟ್ ಬೇಸಡ್ ಸಿನಿಮಾ ಗಿಲ್ಕಿ. ಈ ಸಿನಿಮಾದ ಆ ದೇವರೇ ಹಾಡು ಕೆಲವೇ ದಿನಗಳ ಹಿಂದಷ್ಟೇ ರಿಲೀಸ್ ಆಗಿತ್ತು.. ಈ ಹಾಡು ಜನರ ಹೃದಯ ಕರಗಿಸುವಂತಿದೆ..
ಇದೀಗ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ.. ತೀರ ಸೇರೋ ಟೈಟಲ್ ನ ಈ ಹಾಡು ನಿಜಕ್ಕೂ ನೋಡುಗರ ಮನಸ್ಸು ನಾಟುವಂತಿದೆ.. ಪ್ರತಿಯೊಬ್ಬರ ನಟನೆ ನಮ್ಮನ್ನ ಅವರದ್ದೇ ಪ್ರಪಂಚಕ್ಕೆ ಕೊಂಡೊಯ್ಯುವಂತಿದೆ..
ಅಂದ್ಹಾಗೆ ಗಿಲ್ಕಿ ಸಿನಿಮಾದ ಹಾಡನ್ನ ಮಂಗಳೂರಿನಲ್ಲಿ ಗುರುಡ ಗಮನ ವೃಷಭ ವಾಹನ ಸಿನಿಮಾದ ನಟ ಕಮ್ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿ, ಸಿನಿಮಾಗೆ ಶುಭ ಕೋರಿದ್ರು.
ವಾಸುಕಿ ವೈಭವ್ ಅವರ ಸಾಹಿತ್ಯ , ಆದಿಲ್ ನಡಾಫ್ ಅವರ ಸಂಗೀತ ಸಂಯೋಜನೆ ಅಧ್ಬುತವಾಗಿದೆ. ಹಾಡಿಗೆ ಭರತ್ ನಾಯಕ್ ಅವರ ಇಂಪಾದ ಧ್ವನಿ ಜೀವ ತುಂಬಿದೆ..
ಸಮಾಜದಿಂದ ದೂರ ಇರುವ ಮೂವರು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯಲ್ಲಿ ನಿರ್ದೇಶಕ YK ಅವರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.. ಮಾನಸಿಕ ಅಸ್ವಸ್ಥ ಪಾತ್ರಧಾರಿ , ವಿಶೇಚ ಚೇತನ ಪಾತ್ರಧಾರಿಯ ಪಾತ್ರಗಳಲ್ಲಿ ನಟ ತಾರಕ್ ಪೊನ್ನಪ್ಪ , ನಟಿ ಚೈತ್ರಾ ಅಧ್ಬುತವಾಗಿ ನಟಿಸಿದ್ದಾರೆ.
AS ಕಾಮಧೇನು ಫಿಲಮ್ಸ್ ಬ್ಯಾನರ್ ನಡಿ ಮೂಡಿಬಂದಿರುವ ಸಿನಿಮಾಗೆ ನರಸಿಂಹ ಕುಲಕರ್ಣಿ ಅವರು ಬಂಡವಾಳ ಹೂಡಿದ್ದಾರೆ.. ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್ , ಗೌತಮ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಸಿನಿಮಾದಲ್ಲಿ ಅನೇಕರ ತಾರಾಬಳಗವಿದೆ.
Discussion about this post