ಆದಿಚುಂಚನಗಿರಿ ಶ್ರೀಗಳಿಗೆ ಸತ್ಯವೇನು ಅನ್ನುವುದನ್ನು ಮನದಟ್ಟು ಮಾಡಿದ್ದ ಸರ್ಕಾರ ಇದೀಗ ಮಾಜಿ ಪ್ರಧಾನಿ ದೇವೇಗೌಡರಿಗೆ ಪಠ್ಯ ಪುಸ್ತಕ ಹೋರಾಟದ ಅಸಲಿ ರಹಸ್ಯವನ್ನು ವಿವರಿಸಲು ಮುಂದಾಗಿದೆ
ಬೆಂಗಳೂರು : ರಾಜ್ಯದಲ್ಲಿ ಪ್ರಾರಂಭವಾಗಿರುವ ಪಠ್ಯಪುಸ್ತಕ ವಿರೋಧಿ ಹೋರಾಟದ ಅಸಲಿ ಸತ್ಯವನ್ನು ರಾಜ್ಯದ ಜನತೆಗೆ ತಿಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಮಾತ್ರವಲ್ಲದೆ ಬರಗೂರು ಸಮಿತಿಯ ತಪ್ಪುಗಳನ್ನು ಒಪ್ಪಿಕೊಂಡ ಮಂದಿ, ರೋಹಿತ್ ಚಕ್ರತೀರ್ಥ ಸಮಿತಿ ವಿರುದ್ಧ ತಿರುಗಿ ಬೀಳಲು ಕಾರಣವೇನು ಅನ್ನುವುದನ್ನು ವಿವರಿಸಿದೆ.
ಈ ನಡುವೆ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉತ್ತರಿಸಲಿದ್ದಾರೆ. ಈ ಬಗ್ಗೆ ಸಚಿವ ಆರ್.ಅಶೋಕ್ ಅವರು ಸ್ಪಷ್ಟನೆ ಕೊಟ್ಟಿದ್ದು, ದೇವೇಗೌಡರು ಜನಾಂಗದ ಹಿರಿಯರಾಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳೇ ಈ ಬಗ್ಗೆ ಉತ್ತರಿಸಲಿದ್ದಾರೆ. ಇನ್ನು ಪಠ್ಯ ಪರಿಷ್ಕರಣೆ ಕುರಿತಂತೆ ಆದಿಚುಂಚನಗಿರಿ ಶ್ರೀಗಳಿಗೆ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿ ದೇವೇಗೌಡರನ್ನೂ ಭೇಟಿಯಾಗಿರುವ ಸಚಿವ ಬಿಸಿ ನಾಗೇಶ್, ಈ ಬಗ್ಗೆ ವಿವರಣೆ ನೀಡಿದ್ದಾರೆ ಅಂದಿದ್ದಾರೆ.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಠ್ಯ ಪುಸ್ತಕ ಹರಿದಿರುವುದನ್ನು ಖಂಡಿಸಿದ ಆಶೋಕ್, ಕೆಂಪೇಗೌಡರ ಚಿತ್ರವನ್ನೇ ಹಾಕದ ಬರಗೂರು ಪಠ್ಯವನ್ನು ಯಾಕೆ ಹರಿದಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತ ಕವಿ ಅನಿಸಿಕೊಂಡರು ಎಂಬ ಸಾಲುಗಳನ್ನು ಬರಗೂರು ಸಮಿತಿ ಸೇರಿಸಿತ್ತು. ರೋಹಿತ್ ಚಕ್ರತೀರ್ಥ ಸಮಿತಿ ಇದನ್ನೇ ಮುಂದುವರಿಸಿದೆ. ಆದರೆ ಸಿದ್ದರಾಮಯ್ಯ ಕಾಲದಲ್ಲಿ ಈ ಬಗ್ಗೆ ಬಾಯಿ ಮುಚ್ಚಿಕೊಂಡಿದವರು, ಈಗ ಮಾತನಾಡುತ್ತಿದ್ದಾರೆ ಎಂದು ಸಚಿವ ಆಶೋಕ್ ಹೋರಾಟಗಾರರ ಕಾಲೆಳೆದಿದ್ದಾರೆ.
Discussion about this post