ತುಮಕೂರು : ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದಿದೆ. ಒಂದು ಕಡೆ ಎಡಪಂಥೀಯ ಸಾಹಿತಿಗಳು ತಮ್ಮ ಬರಹಗಳನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ಪತ್ರ ಬರೆಯುತ್ತಿದ್ರೆ, ಮತ್ತೊಂದು ಕಡೆ ಕಾಂಗ್ರೆಸ್ ಬೀದಿ ಹೋರಾಟ ಪ್ರಾರಂಭಿಸಿದೆ.
ಈ ನಡುವೆ ತುಮಕೂರು ತಿಪಟೂರು ನಗರದಲ್ಲಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದ NSUI ಕಾರ್ಯಕರ್ತರು ಸಚಿವರ ಮನೆಗೆ ಬೆಂಕಿಗೆ ಹಾಕಲು ಮುಂದಾದ ಘಟನೆಯೂ ನಡೆದಿದೆ.
ಈ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಸ್ಪಷ್ಟನೆ ಕೊಟ್ಟಿದ್ದು, NSUI ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ನಾಗೇಶ್ ಅವರ ಮನೆಗೆ ಬೆಂಕಿ ಹಾಕಲು ಮುಂದಾಗಿದ್ದರು ಅಂದಿದ್ದಾರೆ.
ಇನ್ನು ನಾಗೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದ್ದಾರೆ.
Tension prevailed in Tumakuru when members of NSUI, the student wing of Congress, laid siege to the residence of Primary and Secondary Education Minister BC Nagesh at his hometown Tiptur on Wednesday.
Discussion about this post