ಸುಮಲತಾ ಅಂಬರೀಶ್ ಅವರು ಮಂಡ್ಯದ ಚುನಾವಣೆ ಸಲುವಾಗಿಯೇ ಪ್ರಾರಂಭಿಸಿದ ಫೇಸ್ ಬುಕ್ ಪೇಜ್ ಬ್ಲಾಕ್ ಆಗಿದೆ. ಈ ಬಗ್ಗೆ ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದು, ಐಟಿ ಟೀಂ ಈ ಬಗ್ಗೆ ಕೆಲಸ ಮಾಡುತ್ತಿದೆ. ಶೀಘ್ರದಲ್ಲೇ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ ಅಂದಿದ್ದಾರೆ.


ಈ ನಡುವೆ ಸುಮಲತಾ ಅಂಬರೀಶ್ ಹೆಸರಿನಲ್ಲಿ ನಕಲಿ ಖಾತೆಯೊಂದು ಪ್ರಾರಂಭವಾಗಿದ್ದು, ಆದರಲ್ಲಿ ಸುಮಲತಾ ಅವರು ತಮಿಳು ಪ್ರೇಮಿ ಅನ್ನುವಂತೆ ಬಿಂಬಿಸಲಾಗುತ್ತಿದೆ. ಈ ಬಗ್ಗೆಯೂ ಬರೆದುಕೊಂಡಿರುವ ಅವರು ಇದು ನನ್ನ ಖಾತೆಯಲ್ಲ. ಈ ಸಂಬಂಧ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಡುತ್ತೇನೆ ಅಂದಿದ್ದಾರೆ.

Discussion about this post