ನಿಖಿಲ್ 2.5 ಲಕ್ಷ ಮತದಿಂದ ಗೆಲ್ಲದಿದ್ದರೆ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದರು ಇದರ ಬೆನ್ನಲ್ಲೇ ಮೋದಿ ಪ್ರಧಾನಿಯಾದ್ರೆ ರಾಜಕೀಯ ಸನ್ಯಾಸ ಸ್ವೀಕರಿಸ್ತಿನಿ ಎಂದು ಸಚಿವ ರೇವಣ್ಣ ಹೇಳಿದ್ದರು.
ಆದರೆ ಚುನಾವಣೆ ಮುಗಿಯಿತು ನಿಖಿಲ್ ಸೋತಾಗಿದೆ, ಮೋದಿ ಪ್ರಧಾನಿಯಾಗಿದ್ದಾರೆ, ಆದರೆ ದಳಪತಿಗಳ ರಾಜಕೀಯ ನಿವೃತಿ ಸನ್ಯಾಸದ ಬಗ್ಗೆ ಸದ್ದಿಲ್ಲ.
ರಾಜಕಾರಣದಲ್ಲಿ ಹೇಳಿಕೆ ಕೊಡುವುದು ಸುಲಭ ಪಾಲನೆ ಮಾಡುವುದು ಕಷ್ಟ ಅನ್ನುವುದು ಗೊತ್ತಿದ್ದರೂ ಬಾಯಿಗೆ ಬಂದ ಹಾಗೇ ಹೇಳಿಕೆ ಕೊಟ್ಟ ದಳಪತಿಗಳು ಮೌನಕ್ಕೆ ಶರಣಾಗಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಮಂಡ್ಯ ಸಂಸದೆ ಸುಮಲತಾ ಅವರನ್ನು ಪ್ರಶ್ನೆ ಮಾಡಿದ್ರೆ ಪುಟ್ಟರಾಜು ನಿವೃತ್ತಿ ಪಡೆಯಲ್ಲ…ರೇವಣ್ಣ ದೇಶ ಬಿಟ್ಟು ಹೋಗಲ್ಲ ಅಂದಿದ್ದಾರೆ.
ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೆ ಕಾಂಗ್ರೆಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಬೇಕಾಗಿತ್ತು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಹೀನಾಯ ಸೋಲು ಕಂಡಿದ್ದು, ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಾಟದಲ್ಲಿ ತೊಡಗಿರುವಾಗಲೇ ಸುಮಲತಾ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತಿತ್ತು. ಆದರೆ, ಮೈತ್ರಿಯಿಂದಾಗಿ ಕೇವಲ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟವನ್ನು ಮತದಾರರು ಒಪ್ಪಿಕೊಂಡಿಲ್ಲ ಎಂದರು.
ಈ ವಿಚಾರವನ್ನು ತಾವು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆ. ಒಂದು ವೇಳೆ ಏಕಾಂಗಿಯಾಗಿ ಸ್ಪರ್ಧೆ ಮಾಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಎಂಬ ಮಾತನ್ನು ಹೇಳಿದ್ದೆ. ಆದರೆ, ಗೆಲ್ಲಬಹುದಾಗಿದ್ದ ಕ್ಷೇತ್ರಗಳನ್ನು ಕಾಂಗ್ರೆಸ್ ಜೆಡಿಎಸ್ ಗೆ ಬಿಟ್ಟುಕೊಟ್ಟಿತು. ಕಾಂಗ್ರೆಸ್ ನಲ್ಲಿ ಒಳ್ಳೆಯ ಅಭ್ಯರ್ಥಿಗಳಿದ್ದರೂ ಸೀಟು ಬಿಟ್ಟು ಕೊಟ್ಟಿದ್ದರಿಂದ ಬಿಜೆಪಿಗೆ ಲಾಭವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
Discussion about this post