Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Save KRS Dam : ಕನ್ನಂಬಾಡಿ ಕಟ್ಟೆಯ ರಕ್ಷಣೆಗಾಗಿ ಲೋಕಸಭಾ ಸ್ಪೀಕರ್ ಕಚೇರಿಯ ಕದ ತಟ್ಟಿದ ಸುಮಲತಾ

Radhakrishna Anegundi by Radhakrishna Anegundi
July 21, 2021
in ರಾಜ್ಯ
sumalatha delhi
Share on FacebookShare on TwitterWhatsAppTelegram

ನವದೆಹಲಿ : ಮಂಡ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆ ಆರ್ ಎಸ್ ಆಣೆಕಟ್ಟಿಗೆ ಆಗಬಹುದಾದ ಹಾನಿಯನ್ನು ತಡೆಯುವಂತೆ ಆಗ್ರಹಿಸಿ ಸಂಸದೆ ಸುಮಲತಾ ಅಂಬರೀಶ್ ನಡೆಸುತ್ತಿರುವ ಹೋರಾಟ ದೆಹಲಿಗೆ ತಲುಪಿದೆ. ಮೊನ್ನೆಯಷ್ಟೇ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಡ್ಯಾಂ ರಕ್ಷಿಸುವಂತೆ ಮನವಿ ಪತ್ರ ಸಲ್ಲಿಸಿದ್ದರು.

ಹಾಗಂತ ಅವರು ಹೋರಾಟವನ್ನು ಅಲ್ಲಿಗೆ ನಿಲ್ಲಿಸಿಲ್ಲ, ಸುಮಲತಾ ಅವರ ನಡೆ ನೋಡಿದರೆ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮನವಿ ಪತ್ರ ಕೊಟ್ಟರೂ ಅಚ್ಚರಿ ಇಲ್ಲ

ಈ ನಡುವೆ ನಿನ್ನೆ ಲೋಕಸಭಾ ಸ್ಪೀಕರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಭೇಟಿಯಾಗಿರುವ ಸುಮಲತಾ ಕಟ್ಟೆ ರಕ್ಷಿಸಿ ಎಂದು ಮನವಿ ಸಲ್ಲಿಸಿದ್ದಾರೆ.

  • ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕೊಟ್ಟ ಪತ್ರದ ಸಾರಾಂಶ

ಕೆ.ಆರ್.ಎಸ್ ಆಣೆಕಟ್ಟು ಕರ್ನಾಟಕ ಜನತೆಗೆ ಮೈಸೂರು ಮಹಾರಾಜರ ಕೊಡುಗೆ. ಅದಕ್ಕೆ ಐತಿಹಾಸಿಕ ಮಹತ್ವ ಇದೆ. ಕೋಟ್ಯಾಂತರ ಜನರ ಅನ್ನ ನೀರಿಗೆ ಅದುವೇ ಜೀವನಾಡಿ. ಅನೇಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಪೋಟಕಗಳ ಬಳಕೆಯಿಂದ ಡ್ಯಾಮ್ ಕಟ್ಟಡಕ್ಕೆ ಹಾನಿಯಾಗುತ್ತಿರುವ ವಿಷಯವನ್ನು ಸುಪ್ರೀಮ್ ಕೋರ್ಟ್ ಕೂಡ ಪ್ರಸ್ತಾಪಿಸಿದೆ.

ನಿಮ್ಮ ಗಮನಕ್ಕೆ ತರಬೇಕಾದ ಮತ್ತೊಂದು ವಿಷಯವೆಂದರೆ, ಅಕ್ರಮ ಗಣಿಗಾರಿಕೆ ಮಾಡುವವರು ಸರ್ಕಾರಕ್ಕೆ ಉಳಿಸಿಕೊಂಡಿರುವ ರಾಜಧನ ಮತ್ತು ದಂಡದ ಬಾಬ್ತು. ಅಧಿಕಾರಿಗಳು, ರಾಜಕಾರಣಿಗಳು ಮುಂತಾದವರ ಬೆಂಬಲವಿಲ್ಲದೆ ಅಕ್ರಮ ಗಣಿಗಾರಿಕೆ ಮುಂದುವರಿಸುವುದು ಅಸಾಧ್ಯ.

ಸತ್ಯಾಸತ್ಯತೆಯನ್ನು ತಿಳಿಯಲು ಮತ್ತು ಅಕ್ರಮ ಗಣಿಗಾರಿಕೆಯ ವ್ಯಾಪಕತೆ ಕಂಡುಹಿಡಿಯಲು ಡ್ರೋನ್ ಸರ್ವೇ ಮಾಡಲು ಮನವಿ ಮಾಡುತ್ತೇನೆ.ಅಕ್ರಮ ಗಣಿಗಾರಿಕೆಯ ವಿರುದ್ಧ ಕಠಿಣವಾದ ನಿಲುವನ್ನು ತಳೆದು, ಸರ್ಕಾರಕ್ಕೆ ಸಲ್ಲಬೇಕಾದ ಎಲ್ಲಾ ಬಾಬ್ತು ವಸೂಲಿಗೆ ಅಧಿಕಾರಿಗಳಿಗೆ ಸೂಚಿಸಲು ಮನವಿ ಮಾಡುತ್ತೇನೆ. ಜನರಿಗೆ, ಅಣೆಕಟ್ಟೆಗೆ ತೊಂದರೆ ಉಂಟುಮಾಡುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಲು ಕ್ರಮ ಕೈಗೊಳ್ಳಲು ಮನವಿ ಮಾಡುತ್ತೇನೆ.”

*ಸನ್ಮಾನ್ಯ ಲೋಕಸಭಾ ಸ್ಪೀಕರ್ ಶ್ರೀ. ಓಂ ಬಿರ್ಲಾ ಅವರಿಗೆ ಕೊಟ್ಟ ಪತ್ರದ ಸಾರಾಂಶ*

“ಸುಪ್ರೀಂ ಕೋರ್ಟ್ ಸೂಚನೆಯ ಹೊರತಾಗಿಯೂ ಕೆ.ಆರ್.ಎಸ್ ಅನೇಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಗೆಯ ಚಟುವಟಿಕೆಗಳು ಮುಂದುವರೆದಿದೆ.

ಅಲ್ಲಿನ ಸ್ಥಳೀಯ ಜನರು, ರೈತರು ಇದರ ಬಗ್ಗೆ ನನಗೆ ಸಾಕಷ್ಟು ದೂರು ಕೊಟ್ಟಿದ್ದಾರೆ. ಅವರು ಹೇಳುವಂತೆ, ಸ್ಪೋಟಕಗಳ ಬಳಕೆಯಿಂದ ಅಣೆಕಟ್ಟೆಯಲ್ಲಿ ಬಿರುಕು ಬಿಡುವ ಅಪಾಯವಿದೆ. ಗಣಿಗಾರಿಕೆಯಿಂದ ಪರಿಸರದ ಮೇಲೆ ಸಾಕಷ್ಟು ಹಾನಿಯಾಗಿ, ಮನುಷ್ಯರು ಮತ್ತು ಜಾನುವಾರುಗಳಿಗೆ ತೊಂದರೆಯಾಗಿದೆ. ಗರ್ಭಪಾತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ.

ರಂಗನತಿಟ್ಟು ಪಕ್ಷಿಧಾಮ ಮುಂತಾದ ಕಡೆ ವನ್ಯಜೀವಿಗಳಿಗೂ ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ. ಕುಡಿಯುವ ನೀರು ಕಲುಷಿತವಾಗಿದೆ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದಲ್ಲದೆ ಸುತ್ತಲಿನ ಹಳ್ಳಿಗಳಲ್ಲಿ ಮನೆಗಳಿಗೆ ದಕ್ಕೆಯಾಗಿದೆ. ಇದೆಲ್ಲದರಿಂದ ಬೇಸತ್ತ ಹಳ್ಳಿಯ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಈ ಎಲ್ಲಾ ಸನ್ನಿವೇಶದಲ್ಲಿ ನೀವು ಸಿ.ಬಿ.ಐ ರೀತಿಯ ಯಾವುದಾದರೂ ಕೇಂದ್ರೀಯ ತನಿಖಾ ತಂಡದಿಂದ ಕೂಲಂಕುಷವಾಗಿ ತನಿಖೆಗೆ ಆದೇಶಿಸಬೇಕೆಂದು ಕೋರುತ್ತೇನೆ. ಇದು ಕೋಟ್ಯಾಂತರ ಜನರ ಜೇವನ ಮತ್ತು ಜೀವನೋಪಾಯದ ಪ್ರಶ್ನೆಯಾಗಿದೆ.” ಇನ್ನು ಲೋಕಸಭಾ ಅಧಿವೇಶನ ಮುಗಿಯುವಷ್ಟು ಹೊತ್ತಿಗೆ ಮತ್ತಷ್ಟು ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿಯಾಗಿ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ಲಕ್ಷಾಂತರ ಜನರ ಜೀವನ ಮತ್ತು ಜೀವನೋಪಾಯದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ನಾವೆಲ್ಲರೂ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ.
Our lifeline is threatened and nothing less than the complete implementation of rules against illegal mining will do now.#SaveKRSdam #stopillegalmining pic.twitter.com/Nt5t1iPNqA

— Sumalatha Ambareesh ?? ಸುಮಲತಾ ಅಂಬರೀಶ್ (@sumalathaA) July 20, 2021

Met Hon'ble @loksabhaspeaker Sri @ombirlakota, and also Hon'ble Minister of Coal, Mines and Parliamentary Affairs Sri @JoshiPralhad, & brought to their notice , the potential damage to our #KRS dam due to illegal mining around the reservoir.#savekrsdam #stopillegalmining pic.twitter.com/SlzfZdY0KW

— Sumalatha Ambareesh ?? ಸುಮಲತಾ ಅಂಬರೀಶ್ (@sumalathaA) July 20, 2021
Tags: sumalatha ambarish
ShareTweetSendShare

Discussion about this post

Related News

nikhil kumaraswamy Karnataka polls Nikhil to contest from Ramanagara

Nikhil kumaraswamy:ಮಂಡ್ಯಕ್ಕೆ ಕೈ ಕೊಟ್ಟ ನಿಖಿಲ್ : ರಾಮನಗರದಿಂದ ಕುಮಾರಸ್ವಾಮಿ ಪುತ್ರ ಕಣಕ್ಕೆ

zika virus First case detected in Karnataka Health Minister

Zika Virus  : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ

Shashi Kumar BJP  : ಚಿತ್ರನಟ ಶಶಿಕುಮಾರ್ ಬಿಜೆಪಿಗೆ :  ಸೋಲಿನ ಭೀತಿಯ ಪಕ್ಷಕ್ಕೆ ಪಕ್ಷಾಂತರಿ ಎಕ್ಸ್ ಪರ್ಟ್

lokayukta : ಮೊದಲು ಎಸಿಬಿ ಈಗ ಲೋಕಾಯುಕ್ತ : ಬೆಸ್ಕಾಂ ಎಇ ತಿಂದು ತೇಗಿದೆಷ್ಟು..?

praveen nettar : ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಉದ್ಯೋಗ : ಆಕ್ರೋಶ ಶಮನಕ್ಕೆ ಕಣ್ಣೊರೆಸುವ ತಂತ್ರ

Karnataka Politics : ಕಟೀಲ್ ವಿದೂಷಕ : ಸಿದ್ದರಾಮಯ್ಯ ನರಹಂತಕ : ಪಾವನವಾಯ್ತು ಕರ್ನಾಟಕ

BJP Meeting : ಕಾಂಗ್ರೆಸ್ ಗೆ ತನಿಖೆ ಬೆದರಿಕೆ : ಕೈ ನಾಯಕರ ಬಾಯಿ ಮುಚ್ಚಿಸಲು ಬಿಜೆಪಿ ಹೊಸ ನಾಟಕ

Murugha Shree Arrest : ಕೊನೆಗೂ 6 ದಿನಗಳ ಬಳಿಕ ಮುರುಘಾ ಶ್ರೀಗಳನ್ನು ವಶಕ್ಕೆ ಪಡೆದ ಪೊಲೀಸರು

Muddahanume gowda : ಇದಪ್ಪ ರಾಜೀನಾಮೆ ಅಂದ್ರೆ : ಗೌರವಯುತವಾಗಿ ಕಾಂಗ್ರೆಸ್ ನಿಂದ ಹೊರ ಬರಲು ನಿರ್ಧರಿಸಿದ ಮುದ್ದಹನುಮೇ ಗೌಡ

Pramod muthalik :ಎಡಿಜಿಪಿ ಅಲೋಕ್ ಕುಮಾರ್ ಅವರೇ ಕ್ಷಮೆ ಕೇಳಿ : ಮುತಾಲಿಕ್ ಆಗ್ರಹದ ಕಾರಣ ಗೊತ್ತಾ…?

Latest News

padma-award-2023-winners-list-check-out-the-awardees-list-for-padma-puraskar-bharat-ratna-and-more-in-kannada

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Haryana hospital ncome-cap-for-eligibility-to-get-free-treatment

Haryana hospital: ಖಾಸಗಿ ಆಸ್ಪತ್ರೆಗಳಲ್ಲಿ ಕಡು ಬಡವರಿಗೆ ಉಚಿತ ಚಿಕಿತ್ಸೆ

Rishabh pant car accident near-roorkee-details-inside

Rishabh pant car accident : ರಿಷಬ್ ಪಂತ್ ಕಾರು ಅಪಘಾತ : ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

murder case-konanakunte-murdered-in-chikkaballapur-karave leader

Murder Case : ಪುತ್ರನ ಜೊತೆ ಸೇರಿ ವ್ಯಕ್ತಿಯನ್ನು ಕೊಲೆಗೈದ ಕರವೇ ಜಿಲ್ಲಾಧ್ಯಕ್ಷ

ma ramamurthy bommai govt veeraloka srinivas

Ma ramamurthy : ತಾಯಿ ಒಪ್ಪಿದರೆ ನಾನೇ ನೋಡಿಕೊಳ್ಳುವೆ : ಬೊಮ್ಮಾಯಿ ಸರ್ಕಾರಕ್ಕೆ ಸೆಡ್ಡು ಹೊಡೆದ ವೀರಲೋಕದ ಶ್ರೀನಿವಾಸ್

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

Nirani Bike : ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿ ಸಚಿವ ನಿರಾಣಿ ಸಂಚಾರ : ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ

PDO Arrest snake sale tiptur

PDO Arrest :ಎರಡು ತಲೆ ಹಾವು ಮಾರಾಟಕ್ಕಿಳಿದಿದ್ದ ಪಿಡಿಒ ಅಂದರ್

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ganja arrest : ಬೆಂಗಳೂರಿನಿಂದ ಕೇರಳಕ್ಕೆ ಗಾಂಜಾ : ಕೊಣಾಜೆ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

Pen drive Arrest bengaluru-woman-loses-pen-drive-with-private-photos-blackmailer-demands

Pen drive Arrest : ರಸ್ತೆಯಲ್ಲಿ ಬಿದ್ದಿದ್ದ ಪೆನ್ ಡ್ರೈವ್ ಹೆಕ್ಕಿ ಕಾಸು ಸಂಪಾದಿಸಲು ಹೋದವನ ಬಂಧನ

tirumala

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್