ಸೆಲೆಬ್ರೆಟಿಗಳ ಖಾಸಗಿ ಜೀವನದ ಬಗ್ಗೆ ಜನಸಾಮಾನ್ಯರಿಗೆ ಇನ್ನಿಲ್ಲದ ಕುತೂಹಲ. ಪಕ್ಕದ ಮನೆಯಲ್ಲಿ ಏನಾಗುತ್ತಿದೆ ಎಂದು ಇಣುಕುವ ನಾವು ಸೆಲೆಬ್ರೆಟಿಗಳ ಜೀವನ ಬಿಡ್ತೀವಾ. ಹೀಗಾಗಿಯೇ ಇತ್ತೀಚಿನ ದಿನಗಳ ಸಿನಿಮಾ ನಟಿಯರ, ಧಾರವಾಹಿ ನಟಿಯರ ಬ್ಯಾಗ್ ನಲ್ಲಿ ಏನಿದೆ ಎಂದು ಕಣ್ಣು ಹಾಯಿಸುವವರ ಸಂಖ್ಯೆ ಹೆಚ್ಚಾಗಿದೆ. ಅರೇ ನೀವೆಲ್ಲಾ ವ್ಯಾನಿಟಿ ಬ್ಯಾಗ್ ನಲ್ಲಿ ಏನು ಹಾಕ್ತೀರೋ ಅದನ್ನೇ ನಟಿಯರು ತುರುಕಿರುತ್ತಾರೆ.
ಆದ್ರೂ ಕುತೂಹಲ ತಣಿಯುತ್ತದೆಯೇ.. ಹೋಗ್ಲಿ ಬಿಡಿ ಅಗ್ನಿಸಾಕ್ಷಿ ಧಾರಾವಾಹಿಯ ಅಂಜಲಿ, ಲಕ್ಷಣ ಧಾರವಾಹಿಯ ಸ್ವಾತಿಯ ಖ್ಯಾತಿಯ ಸುಕೃತಾ ಬ್ಯಾಗ್ ನಲ್ಲಿ ಏನಿದೆ ಅನ್ನುವುದನ್ನು ನಾವು ಹೇಳ್ತಿವಿ. ಸದಾ ಕೋಲ್ಡ್ ನಿಂದ ಬಳಲುತ್ತಿರುವ ಸುಕೃತಾ ಮಾತ್ರೆಗಳನ್ನು ಬ್ಯಾಗ್ ನಲ್ಲಿ ಸದಾ ತುಂಬಿಸಿರುತ್ತಾರಂತೆ. ಇದೇ ಕಾರಣಕ್ಕಾಗಿ ಶೂಟಿಂಗ್ ಸ್ಪಾಟ್ ನ ಮೆಡಿಕಲ್ ಶಾಪ್ ಆಗಿಯೂ ಇವರು ಕಾರ್ಯನಿರ್ವಹಿಸುತ್ತಾರೆ.
Discussion about this post