ಶ್ರೀರಸ್ತು ಶುಭಮಸ್ತು, (Srirastu Subhamastu ) ಆರೇಳು ವರ್ಷದ ಹಿಂದೆ ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದ ಧಾರಾವಾಹಿ
Srirastu Subhamastu ಧಾರಾವಾಹಿಯ ಕಥೆಯೇ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಜೊತೆಗೆ ರಮೇಶ್ ಇಂದಿರಾ ಮತ್ತು ಶ್ರುತಿ ನಾಯ್ಡು ಈ ಧಾರಾವಾಹಿಯನ್ನು ಅಚ್ಚು ಕಟ್ಟಾಗಿ ನಿರ್ಮಿಸಿದ್ದರು. ಏಳು ಅಮ್ಮಂದಿರ ಕಥೆಯೊಂದಿಗೆ ಮೂಡಿ ಬಂದ ಈ ಧಾರಾವಾಹಿಯಲ್ಲಿ ಶ್ರೀಮಹಾದೇವ್ ರು ಶ್ರೀನಿಧಿ ಪಾತ್ರ ನಿರ್ವಹಿಸಿದ್ದರೆ, ಶ್ವೇತಾ ಆರ್ ಪ್ರಸಾದ್ ಅವರು ಜಾಹ್ನವಿ ಪಾತ್ರ ಮಾಡಿದ್ದರು. ಆಗ ಜಾಹ್ನವಿಯ ತಾಯಿ ತುಳಸಿ ಬದುಕಿರಲಿಲ್ಲ.
ಇದೀಗ ತುಳಸಿ ಅಂದ್ರೆ ಜಾಹ್ನವಿಯ ತಾಯಿ ಬದುಕಿರುವ ಕಥೆಯೊಂದಿಗೆ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಡಿ ಬರಲಿದೆ. ಹೌದು ಅದೇ ಟೈಟಲ್ ಆದರೆ ಹೊಸ ಕಥೆಯೊಂದಿಗೆ ಶ್ರೀರಸ್ತು ಶುಭಮಸ್ತು ಮತ್ತೆ ಮೂಡಿ ಬರಲಿದೆ.
ಇದನ್ನು ಓದಿ : lakshmi hebbalkar : ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಮನೆ ಇಲ್ಲ : ದಾವಣಗೆರೆಯಲ್ಲಿ ಸುಳ್ಳು ಹೇಳಿದ್ರ ಲಕ್ಷ್ಮಿ ಹೆಬ್ಬಾಳ್ಕರ್
ಅತ್ತೆ – ಸೊಸೆ ನಡುವಿನ ಕಿರಿಕ್‌ಗಳ ವೈಭವದ ಬಳಿಕ ಕನ್ನಡ ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಧಾರಾವಾಹಿಗಳಲ್ಲೂ ಕಾಮನ್ ಸ್ಟೋರಿಯನ್ನೇ ಹೊಂದಿದೆ. ಒಂದು ಲವ್ ಸ್ಟೋರಿ, ಮನೆಯಲ್ಲಿ ಒಂದು ವಿಲನ್, ಅದೂ ಕೂಡಾ ಮಹಿಳಾ ವಿಲನ್. ತೋರಿಸಲಾಗುತ್ತದೆ. ಈ ಎಲ್ಲಾ ಫಾರ್ಮುಲಾಗಳನ್ನ ಬದಿಗಿಟ್ಟು, ವಿನೂತನ ರೀತಿಯಲ್ಲಿ ಕಥೆ ಹೆಣೆದಿರುವ ಹೊಸ ಧಾರಾವಾಹಿಯೇ ಶ್ರೀರಸ್ತು ಶುಭಮಸ್ತು.
ಇದೇ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ತಮ್ಮ ಪಾತ್ರದ ಬಗ್ಗೆ ಅವರೇ ಹೇಳಿಕೊಂಡಿದ್ದು , ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.
ಅಲ್ಲಿಗೆ ಹಳೆಯ ಶ್ರೀರಸ್ತು ಶುಭಮಸ್ತು ಕಥೆಗೂ ಹೊಸ ಕಥೆಗೂ ಸಂಬಂಧವಿಲ್ಲ ಅನ್ನುವುದು ಸ್ಪಷ್ಟವಾಗಿದೆ.
Read More : Mangaluru : ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ : ಯು ಟರ್ನ್ ಹೊಡೆದ ಮಂಗಳೂರು ಪೊಲೀಸರು
Discussion about this post