2019ರಲ್ಲಿ ಮೊಟ್ಟ ಮೊದಲು ವುಹಾನ್ ನಲ್ಲಿ ಕೊರೋನಾ ಪತ್ತೆಯಾಗಿತ್ತು. ಕಳೆದ ಒಂದು ವರ್ಷದಿಂದ ಚೀನಾದಲ್ಲಿ ಒಂದೇ ಒಂದು ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ವರದಿಯಾಗಿಲ್ಲ
ನವದೆಹಲಿ : 2 ವರ್ಷಗಳ ಕಾಲ ಭಾರತ ಸೇರಿದಂತೆ ವಿಶ್ವವನ್ನು ಕಾಡಿದ್ದ ಕೊರೋನಾ ಮಹಾಮಾರಿ ಇನ್ನೇನು ಮುಗಿಯಿತು ಅನ್ನುವ ಹೊತ್ತಿಗೆ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಮತ್ತೆ ಅಬ್ಬರಿಸಲಾರಂಭಿಸಿದೆ. ಕಳೆದ ಕೆಲವು ದಿನಗಳಿಂದ ಈ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಲಾರಂಭಿಸಿದೆ.
ದಕ್ಷಿಣ ಕೊರಿಯಾದಲ್ಲಿ ಬುಧವಾರ ಒಂದೇ ದಿನ 4 ಲಕ್ಷಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 76.2 ಲಕ್ಷಕ್ಕೆ ಏರಿದೆ. 293 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ನು ಕೊರೋನಾ ತವರೂರು ಚೀನಾದಲ್ಲೂ ಕೊರೋನಾ ಅಬ್ಬರ ತೀವ್ರವಾಗತೊಡಗಿದೆ. ಈಗಾಗಲೇ ಶೆನ್ ಜೆನ್ ಸೇರಿ 13 ನಗರಗಳನ್ನು ಲಾಕ್ ಡೌನ್ ಮಾಡಲಾಗಿದ್ದು, ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಮಾಹಿತಿಗಳ ಪ್ರಕಾರ ಈ ಎರಡೂ ದೇಶಗಳಲ್ಲಿ ಒಮಿಕ್ರೋನ್ ರೂಪಾಂತರಿ ವೈರಸ್ ಅಟ್ಟಹಾಸಗೈಯುತ್ತಿದೆ ಎನ್ನಲಾಗಿದೆ.
Discussion about this post