ಕಿರುತೆರೆ ದುನಿಯಾದಲ್ಲಿ ಓಡೋ ಕುದುರೆಗಳಿಗೆ ಅವಕಾಶ. ಹೀಗಾಗಿ ಅನೇಕ ಸೀರಿಯಲ್ ಗಳು ಬಂದಷ್ಟೇ ವೇಗದಲ್ಲಿ ಮರೆಯಾಗುತ್ತದೆ. ಇನ್ನು ಕೆಲ ಸೀರಿಯಲ್ ಗಳು ಟಿಆರ್ಪಿ ಪಟ್ಟಿಯಲ್ಲಿ ಇದ್ದಷ್ಟು ದಿನ ಓಡುತ್ತಿರುತ್ತದೆ. ರೇಟಿಂಗ್ ಗಳಿಸುವಲ್ಲಿ ವಿಫಲವಾಯ್ತೋ ಆಫ್ ಏರ್ ಮಾಡಲು ಚಾನೆಲ್ ಗಳು ಹಿಂದೆ ಮುಂದೆ ನೋಡೋದಿಲ್ಲ.
ಈ ಪೈಕಿ ಇದೀಗ ಮಿಥುನರಾಶಿ ಸರದಿ. ವಿಭಿನ್ನ ಕಥೆಯೊಂದಿಗೆ ಬಂದಿದ್ದ ಮಿಥುನರಾಶಿ ಹಲವು ತಿಂಗಳ ಕಾಲ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆಟೋ ರಾಣಿಯೊಂದಿಗೆ ಬಂದ ಧಾರವಾಹಿಯನ್ನು ಜನ ಮೆಚ್ಚಿಕೊಂಡಿದ್ದರೂ ಕೂಡಾ.
ಸತತ ಮೂರುವರ್ಷಗಳ ಕಾಲ ಯಶಸ್ವಿಯಾಗಿ ಪ್ರಸಾರವಾದ ಧಾರವಾಹಿ ಇತ್ತೀಚಿನ ದಿನಗಳಲ್ಲಿ ಸಪ್ಪೆಯಾಗಿತ್ತು. ಸಪ್ಪೆಯಾಗುವುದಕ್ಕೆ ಕಾರಣವೂ ಇದೆ. ಮೂರು ವರ್ಷಗಳ ಕಾಲ ಕಥೆಯನ್ನು ನಿರ್ದೇಶಕರು ಎಳೆದಿದ್ದಾರೆ ಅಂದ್ರೆ ಅದು ಗ್ರೇಟ್ ಅಂದ್ರೆ ತಪ್ಪಲ್ಲ. ಮಾತ್ರವಲ್ಲದೆ ಮಿಥುನರಾಶಿ ಪ್ರಸಾರವಾಗುವ ವೇಳೆಯಲ್ಲೇ ಬೇರೆ ವಾಹಿನಿಗಳು ಗಟ್ಟಿ ಕಥೆ ಹೊಂದಿರೋ ಧಾರವಾಹಿ ಪ್ರಸಾರ ಪ್ರಾರಂಭಿಸಿತ್ತು. ಹೀಗಾಗಿ ಸಹಜವಾಗಿಯೇ ಮಿಥುನರಾಶಿಯ ವೀಕ್ಷಕರು ಆ ಕಡೆ ವಲಸೆ ಹೋಗಿದ್ದಾರೆ. ಹೀಗಾಗಿ ಟಿಆರ್ಪಿ ಬಿದ್ದಿದೆ. ವಾಹಿನಿ ಧಾರವಾಹಿಯನ್ನು ವೈಂಡಪ್ ಮಾಡಲು ನಿರ್ಧರಿಸಿದೆ.
Discussion about this post