Siri Vaibhava Souharda Pattina Co op Society: ಅಧಿಕ ಬಡ್ಡಿ ಆಸೆ ತೋರಿಸಿ ಸಾವಿರಾರು ಹೂಡಿಕೆದಾರರಿಂದ ನೂರಾರು ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ, ಸೂಕ್ತ ದಾಖಲೆ ಪಡೆಯದೆ ಕೋಟಿ ಕೋಟಿ ಸಾಲ ನೀಡಿರುವುದೇ ಈ ಪತನಕ್ಕೆ ಕಾರಣ ಅನ್ನಲಾಗಿದೆ
ಬೆಂಗಳೂರು : ಕೆಲ ಸಹಕಾರಿ ರಂಗದ ಬ್ಯಾಂಕ್ ಗಳಲ್ಲಿ ನಡೆಯುತ್ತಿರುವ ಅವ್ಯವಹಾರ ಸಹಕಾರಿ ರಂಗಕ್ಕೆ ಅಪಾಯಕಾರಿಯಾಗಿ ಪರಿಣಮಿಸಲಿದೆ. ಇತ್ತೀಚಿನ ದಿನಗಳಲ್ಲಿ ನಗರ ಕೇಂದ್ರಿಕೃತವಾಗಿರುವ ಸಹಕಾರಿ ಬ್ಯಾಂಕ್ ಗಳು ಮುಳುಗುವ ಹಡಗು ಅನ್ನಿಸಿಕೊಂಡಿದೆ. ಈ ಸಾಲಿಗೆ ಹೊಸ ಸೇರ್ಪಡೆ Siri Vaibhava Souharda Pattina Co op Society.
ಉತ್ತರಹಳ್ಳಿ, ಆರ್.ಆರ್.ನಗರ, ಬಿಳೆಕಳ್ಳಿ ಮತ್ತು ಬಸವೇಶ್ವನಗರ ಗಳಲ್ಲಿ ಸಿರಿವೈಭವ ಪತ್ತಿನ ಸಂಘದ ಬ್ರಾಂಚ್ ಗಳು ಕಾರ್ಯನಿರ್ವಹಿಸುತ್ತಿದೆ.ಯಾವಾಗ ಬ್ಯಾಂಕಿನ ವ್ಯವಹಾರ ಸರಿ ಇಲ್ಲ ಅನ್ನುವುದು ಗೊತ್ತಾಯ್ತೋ, ಸಂಯುಕ್ತ ಸಹಕಾರ ಬ್ಯಾಂಕ್ ಗೆ ದೂರು ನೀಡಲಾಗಿತ್ತು. ಠೇವಣಿದಾರರಿಗೆ ಬಡ್ಡಿ ಮತ್ತು ಠೇವಣಿ ಮರುಪಾವತಿಯಲ್ಲಿ ಬ್ಯಾಂಕ್ ಮಹಾಪ್ರಮಾದ ಎಸಗಿದೆ.
ಇದನ್ನೂ ಓದಿ : siddaramosthava : ರಾಹುಲ್ ಗಾಂಧಿ ಬರ್ತಾರೆ ಆದರೆ ಸರಿಯಾಗಿ ನಡೆಸಿಕೊಳ್ಳಿ : ರಾಜ್ಯ ಕಾಂಗ್ರೆಸ್ ಗೆ ಹೈಕಮಾಂಡ್ ಸೂಚನೆ
ಈ ಸಂಬಂಧ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ ಪಾಟೀಲ್ ಅವರು ಉತ್ತರಹಳ್ಳಿ ಮುಖ್ಯ ರಸ್ತೆ ಸಿರಿ ವೈಭವ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್ ನ ಹಿಂದಿನ ಆಡಳಿತ ಮಂಡಳಿ ಮತ್ತು ಪ್ರಸ್ತುತ ಆಡಳಿತ ಮಂಡಳಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದಲ್ಲಿ 14 ಮಂದಿ ವಿರುದ್ಧ FIR ದಾಖಲಾಗಿದ್ದು, ಸಿರಿವೈಭವ ಪತ್ತಿನ ಸಂಘದ ಅಧ್ಯಕ್ಷೆ ನಾಗವಲ್ಲಿ, ಹಾಗೂ ಆಕೆಯ ಪತಿ ರಾಜೇಶ್ ವಿ ಆರ್ ದಂಪತಿಯನ್ನ ಸುಬ್ರಮಣ್ಯಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಿರಿವೈಭವ ಪತ್ತಿನ ನಿಯಮಿತ ಸಹಕಾರ ಸಂಘದ (Siri Vaibhava Souharda Pattina Co operative Society) ನಾಲ್ಕು ಬ್ರಾಂಚ್ ನಿಂದ ಅಂದಾಜು 2,000 ಹೂಡಿಕೆದಾರರಿಗೆ ವಂಚನೆಯಾಗಿದೆ.
2020-21 ನೇ ಸಾಲಿನಲ್ಲಿ 64.63 ಕೋಟಿ ರೂಪಾಯಿ ,ಸಾಲ ನೀಡಲಾಗಿದೆ. ಈ ಪೈಕಿ ಹೆಚ್ಚಿನ ಮೊತ್ತವನ್ನು ಸಿರಿವೈಭವ ಪತ್ತಿನ ಸಂಘದ ಅಧ್ಯಕ್ಷೆ ನಾಗವಲ್ಲಿ, ಹಾಗೂ ಆಕೆಯ ಪತಿ ರಾಜೇಶ್.ವಿ.ಆರ್ ಅವರಿಗೆ ಸೇರಿದ ಸಂಸ್ಥೆಗಳಿಗೆ ನೀಡಲಾಗಿದೆ. ಇದಕ್ಕೆ ಸೂಕ್ತ ದಾಖಲೆಗಳನ್ನು ಕೂಡಾ ನೀಡಲಾಗಿಲ್ಲ. ಈ ಸಾಲಕ್ಕೆ ಯಾವುದೇ ಭದ್ರತೆಯನ್ನೂ ನೀಡಲಾಗಿಲ್ಲ. ಜೊತೆಗೆ 64.63 ಕೋಟಿ ರೂಪಾಯಿ ಸಾಲ ಸುಸ್ತಿಯಾಗಿರುವುದು ಪತ್ತೆಯಾಗಿದೆ.
ಹೈಕೋರ್ಟ್ ಜಡ್ಜ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಲಂಚ ಪಡೆದ ಡಿಸಿ
ಸರ್ಕಾರದ ಹಿಡಿತಕ್ಕೆ ಸಿಗದ ಕೆಲ ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ರಾಜ್ಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಗಳೇ ಲಂಚ ಮೇಯುತ್ತಿದ್ದಾರೆ ಅಂದ್ರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಅನ್ನುವ ಅನುಮಾನ ಶುರುವಾಗಿದೆ.
ಬೆಂಗಳೂರು : ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ನಗರದ ಮಾಜಿ ಜಿಲ್ಲಾಧಿಕಾರಿ ಮಂಜುನಾಥ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್ ಜಡ್ಜ್ ಎಚ್.ಪಿ. ಸಂದೇಶ್ ಮಾಡಿರುವ ಟೀಕೆಯನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.
ತಮ್ಮ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ತಮ್ಮ ವಿರುದ್ಧ ಅನಪೇಕ್ಷಿತ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ತಮ್ಮ ವಿರುದ್ಧ ಮೀಡಿಯಾ ಟ್ರಯಲ್ ಶುರುವಾಗಿದೆ ಅನ್ನುವುದು ಮಂಜುನಾಥ್ ಅಳಲು.
ಹೀಗಾಗಿ ನ್ಯಾಯ ಕೊಡಿ ಎಂದು ಮಂಜುನಾಥ್ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಎಸಿಬಿಯ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿರುವ ಅರ್ಜಿಗಳ ಜೊತೆಗೆ ಮಂಜುನಾಥ್ ಅರ್ಜಿಯೂ ಇಂದು ವಿಚಾರಣೆಗೆ ಬರಲಿದೆ. ಲಂಚ ಪ್ರಕರಣದಲ್ಲಿ ಜೈಲು ಸೇರಿರುವ ಮಂಜುನಾಥ್ ಈಗಾಗಲೇ ಅಮಾನತುಗೊಂಡಿದ್ದಾರೆ. ಒಬ್ಬ ಜಿಲ್ಲಾಧಿಕಾರಿ ಅದು ಕೂಡಾ ವಿಧಾನಸೌಧದಿಂದ ಒಂದಿಷ್ಟು ದೂರದಲ್ಲೇ ಕೂತು ಲಂಚ ತಿಂದಿದ್ದಾನೆ ಅಂದ್ರೆ ಆತನ ಪ್ರಭಾವ ಎಷ್ಟರ ಮಟ್ಟಿಗೆ ಇರಬಹುದು. ಸರ್ಕಾರದ ಭಯವೇ ಇಲ್ಲದ ಅಧಿಕಾರಿ ಆತನಾಗಿರಬೇಕು ಅಥವಾ ಸರ್ಕಾರದ ಕೃಪಾಕಟಾಕ್ಷವಿರಬೇಕು.
Discussion about this post