ಬೆಂಗಳೂರು : ರಾಜ್ಯ ಮಂಡಲ ಅಧಿವೇಶನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಎತ್ತಿನ ಬಂಡಿಯಲ್ಲಿ ಆಗಮಿಸಿದ್ದಾರೆ. ಬೆಂಗಳೂರು ಸದಾಶಿವನಗರದ ತಮ್ಮ ನಿವಾಸದಿಂದ ಕಾರ್ಯಕರ್ತರೊಂದಿಗೆ ಎತ್ತಿನ ಬಂಡಿ ಏರಿದ ಅವರು ಮುಖ್ಯ ರಸ್ತೆಗಳಲ್ಲಿ ವಿಧಾನಸೌಧಕ್ಕೆ ಸಾಗಿದ್ದಾರೆ.
ಈ ವೇಳೆ ಕೊರೋನಾ ನಿಯಮಗಳನ್ನು ಗಾಳಿ ತೂರಲಾಗಿತ್ತು, ಮಾಸ್ಕ್, ಸಾಮಾಜಿಕ ಅಂತರವನ್ನು ಹುಡುಕಬೇಕಾಗಿತ್ತು. ಬೊಮ್ಮಾಯಿ ಸರ್ಕಾರ ಬಿಸಿ ಮುಟ್ಟಿಸಲು ಹಮ್ಮಿಕೊಂಡ ಈ ಪ್ರತಿಭಟನೆ ವಾರದ ಮೊದಲ ದಿನವೇ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದೆ. ಈ ಹಿಂದೆ ಬಿಜೆಪಿ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲೂ ಕೊರೋನಾ ನಿಯಮಗಳನ್ನು ಉಲ್ಲಂಘಿಸಿದಂತೆ, ಈ ಬಾರಿ ಕಾಂಗ್ರೆಸ್ ನಾಯಕರು ಎತ್ತಿನಗಾಡಿ ಚಲೋ ಹೆಸರಿನಲ್ಲಿ ಕೊರೋನಾ ನಿಯಮಕ್ಕೆ ಗೋಲಿ ಹೊಡೆದಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ತೈಲ ಬೆಲೆ, ಅಡುಗೆ ಅನಿಲ ದರ ಏರಿಕೆ ಹೀಗೆ ಜನಸಾಮಾನ್ಯರ ಬದುಕು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದೆ. ಇವೆಲ್ಲವೂ ಬಿಜೆಪಿ ನಾಯಕರ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
Discussion about this post