ಡಿಕೆಶಿಯ ಪಟ್ಟದ ಶಿಷ್ಯ ನಲಪಾಡ್ ಬಗ್ಗೆ ಸಿದ್ದರಾಮಯ್ಯ ( Siddaramaiah nalapad ) ಅವರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಯುವ ಕಾಂಗ್ರೆಸ್ ಚುನಾವಣೆಯ ಬಳಿಕ ಈ ಸಂಬಂಧ ಮತ್ತಷ್ಟು ಹಳಸಿದೆ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ಬಂದ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ನಲಪಾಡ್ ( Mohammed Haris Nalapad ) ಇಂದು ಮುಜುಗರಕ್ಕೆ ಈಡಾಗಿದ್ದಾರೆ. ಸಿದ್ದರಾಮಯ್ಯ ( Siddaramaiah ) ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಸಮಯ ನಿಗದಿಗೊಳಿಸುವ ಸಲುವಾಗಿ ಸಿದ್ದರಾಮಯ್ಯ ನಿವಾಸಕ್ಕೆ ನಲಪಾಡ್ ಆಗಮಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಮೈಸೂರಿಗೆ ಹೊರಡುವ ಗಡಿಬಿಡಿಯಲ್ಲಿದ್ದರು. ಈ ವೇಳೆ ನೆರೆದಿದ್ದ ಅಭಿಮಾನಿಗಳನ್ನು ಮಾತನಾಡಿಸಿದ ಸಿದ್ದರಾಮಯ್ಯ ನಲಪಾಡ್ ಕಡೆಗೆ ತಿರುಗಿ ನೋಡದೆ ಮೈಸೂರಿನತ್ತ ಮುಖ ಮಾಡಿದ್ದಾರೆ.
ಇದನ್ನೂ ಓದಿ : ಧರ್ಮಾಧಿಕಾರಿ ರಾಜ್ಯಸಭೆಗೆ
ಸಿದ್ದರಾಮಯ್ಯ ಮನೆಯಿಂದ ಹೊರ ಬರುತ್ತಿದ್ದಂತೆ ನಲಪಾಡ್ ಮಾತನಾಡಿಸಲು ಮುಂದಾಗಿದ್ದಾರೆ, ಆಗ್ಲೂ ಸಿದ್ದರಾಮಯ್ಯ ಕ್ಯಾರೇ ಅಂದಿಲ್ಲ. ಆದಾದ ಬಳಿಕವೂ ಸಿದ್ದರಾಮಯ್ಯ ಬೆನ್ನ ಹಿಂದೆಯೇ ನಲಪಾಡ್ ನಡೆದು ಬಂದಿದ್ದಾರೆ. ಆದಾದ ಬಳಿಕ ಕಾರು ಹತ್ತಿದ ನಂತರ ಸಿದ್ದರಾಮಯ್ಯ ಅವರನ್ನು ಮಾತನಾಡಿಸಲು ನಲಪಾಡ್ ಮುಂದಾಗಿದ್ದಾರೆ. ಆಗ್ಲೂ ನೋ ರೆಸ್ಪಾನ್ಸ್. ಇದಾದ ಬಳಿಕ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರ ಬಳಿಗೆ ನಲಪಾಡ್ ಹೋಗಿದ್ದಾರೆ. ಆಪ್ತ ಸಹಾಯಕ, ನಲಪಾಡ್ ಬಂದಿದ್ದಾರೆ ಅಂದಾಗ್ಲೂ, ಸಿದ್ದರಾಮಯ್ಯ ಮತ್ತೊಬ್ಬರ ಕಡೆಗೆ ತಿರುಗಿ ಮನವಿ ಸ್ವೀಕರಿಸಿದ್ದಾರೆ.
ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ರಕ್ಷಾ ರಾಮಯ್ಯ ಪರ ಸಿದ್ದರಾಮಯ್ಯ ನಿಂತ್ರೆ, ನಲಪಾಡ್ ಪರ ಡಿಕೆಶಿ ನಿಂತಿದ್ದರು. ಕೊನೆಗೂ ರಕ್ಷ ರಾಮಯ್ಯ ಅವರಿಗೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗಿರಲಿಲ್ಲ. ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷನಾಗಿರೋದು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ ಅನ್ನಲಾಗಿದೆ.
ವೀರೇಂದ್ರ ಹೆಗ್ಗೆಡೆ ರಾಜ್ಯಸಭೆಗೆ : ಪಿಟಿ ಉಷಾ ವಿಜಯೇಂದ್ರ ಪ್ರಸಾದ್ ಇಳಯರಾಜರಿಗೂ ಗೌರವ
ನವದೆಹಲಿ : ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade), ಕೇರಳದ ಮಾಜಿ ಅಥ್ಲೀಟ್ ಪಿಟಿ ಉಷಾ (PT Usha) , ಆಂಧ್ರಪ್ರದೇಶದ ವಿ.ವಿಜಯೇಂದ್ರ ಪ್ರಸಾದ್ (V. Vijayendra Prasad ), ತಮಿಳುನಾಡಿನ ಇಳಯರಾಜ (Ilaiyaraaja) ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ( nominated for Rajya Sabha) ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದು ಎಲ್ಲರಿಗೂ ಪ್ರತ್ಯೇಕವಾಗಿ ಶುಭ ಕೋರಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಧರ್ಮಸ್ಥಳದ ದೇವಸ್ಥಾನದಲ್ಲಿ ನನಗೂ ಪ್ರಾರ್ಥನೆ ಸಲ್ಲಿಸುವ ಅವಕಾಶ ಸಿಕ್ಕಿತ್ತು. ಆರೋಗ್ಯ, ಶಿಕ್ಷಣ ಹಾಗೂ ಸಂಸ್ಕೃತಿ ವಿಚಾರದಲ್ಲಿ ಅವರು ಮಾಡುತ್ತಿರುವ ಕೆಲಸಕ್ಕೆ ನಾನು ಸಾಕ್ಷಿಯಾಗಿದ್ದೇನೆ ಅಂದಿದ್ದಾರೆ.
ಪಿಟಿ ಉಷಾ ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದಾರೆ ಅಂದಿರುವ ಪ್ರಧಾನಿ ನರೇಂದ್ರ ಮೋದಿ ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡುವ ಅವರ ಕೆಲಸ ಶ್ಲಾಘನೀಯ ಅಂದಿದ್ದಾರೆ.
ನಿರ್ದೇಶಕ ರಾಜಮೌಳಿ ಅವರ ತಂದೆ ವಿ.ವಿಜಯೇಂದ್ರ ಪ್ರಸಾದ್ ಅವರ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದಶಕಗಳಿಂದ ಸೃಜನಾತ್ಮಕ ಲೋಕದೊಂದಿಗೆ ನಂಟು ಹೊಂದಿರುವ ಅವರ ಕೆಲಸ ಭಾರತದ ವೈಭವ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಅಂದಿದ್ದಾರೆ.
ಇಳಯರಾಜ ಅವರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇಳೆಯರಾಜ ಅವರ ಸಂಗೀತ ಜನರನ್ನು ಮಂತ್ರಮುಗ್ಧರನ್ನಾಗಿಸಿದೆ ಅಂದಿದ್ದಾರೆ.
Discussion about this post