ಅಲೋಕ್ ಲಾಠಿ ಹಿಡಿದಿದ್ದಾರೆ ಅಂದ್ರೆ ದುಷ್ಕರ್ಮಿಗಳಿಗೆ ಮಾರಿಹಬ್ಬ ಕಾದಿದೆ ಅನ್ನುವುದರಲ್ಲಿ ಸಂಶಯವಿಲ್ಲ ( Shivamogga)
ಶಿವಮೊಗ್ಗ : Shivamogga ನಗರದಲ್ಲಿ ಅಮಾಯಕನೊಬ್ಬನ ಮೇಲೆ ದುಷ್ಕರ್ಮಿಗಳು ಚೂರಿ ಇರಿದ ಪ್ರಕರಣದಿಂದ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಕಾಂಗ್ರೆಸ್ ಮುಖಂಡನೊಬ್ಬ ಸಾವರ್ಕರ್ ಫೋಟೋ ಕುರಿತಂತೆ ತೆಗೆದ ತಗಾದೆಯಿಂದ ಪ್ರಾರಂಭವಾದ ಗಲಾಟೆ ಇದೀಗ ದಿಕ್ಕು ದೆಸೆಯಿಲ್ಲದೆ ಬೆಳೆಯುತ್ತಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯವನ್ನು ಕಾನೂನು ರೀತಿಯಲ್ಲಿ ಕಾಂಗ್ರೆಸ್ ನಾಯಕ ನಿರ್ವಹಿಸುತ್ತಿದ್ರೆ ಶಾಂತಿ ಕದಡುತ್ತಿರಲಿಲ್ಲ.
ಸಾವರ್ಕರ್ ಫ್ಲೆಕ್ಸ್ ವಿವಾದ ಬೆನ್ನಲ್ಲೇ ಬಟ್ಟೆ ಅಂಗಡಿ ಕಾರ್ಮಿಕ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಫ್ಲೆಕ್ಸ್ ವಿವಾದದಲ್ಲಿ ಚಾಕು ಚೂರಿಗಳು ಬಂದಿವೆ ಅಂದ್ರೆ ಇದರ ದೊಡ್ಡದೊಂದು ಷಡ್ಯಂತ್ಯವಿದೆ ಅನ್ನುವುದು ಸ್ಪಷ್ಟ.
ಇದನ್ನು ಓದಿ : Bigg Boss OTT : ಮೂಡ್ ಬಂದಿಲ್ಲ ಅಂದ್ರೆ 3 ದಿನವಾದ್ರೂ ಮಾಡಲ್ಲ : ಸುದೀಪ್ ಮುಂದೆ ಸೋನು ರಹಸ್ಯ ಬಯಲು
ಈ ನಡುವೆ ಶಿವಮೊಗ್ಗದಲ್ಲಿ ಶಾಂತಿ ಕದಡಿದ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಶಿವಮೊಗ್ಗಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಾವೇ ಬೀದಿಗಿಳಿದಿದ್ದು, ಬಾಲ ಕಟ್ ಮಾಡುವ ಎಚ್ಚರಿಕೆ ರವಾನಿಸಿದ್ದಾರೆ. ಸೋಮವಾರ ರಾತ್ರಿ ಲಾಠಿ ಹಿಡಿದು ಬೀದಿಗಿಳಿದ ಅವರು ಬಿಸಿ ಮುಟ್ಟಿಸಿದ್ದಾರೆ.
ಈ ನಡುವೆ ಪ್ರೇಮ್ ಸಿಂಗ್ ಗೆ ಚೂರಿದ ಪ್ರಕರಣ ಸಂಬಂಧ ಇಬ್ಬರು ದುಷ್ಕರ್ಮಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಜೆಸಿ ನಗರದ ನದೀಮ್ ಮತ್ತು ಬುದ್ಧನಗರದ ಅಬ್ದುಲ್ ರಹಮಾನ್ ಎಂದು ಗುರುತಿಸಲಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಗಣೇಶನ ಹಬ್ಬ ಕೂಡಾ ಆಗಮಿಸುತ್ತಿದೆ.ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ದೊಡ್ಡ ಹೊಣೆ ಪೊಲೀಸರ ಮೇಲಿದೆ. ಹೀಗಾಗಿ ಈಗ್ಲೇ ಪ್ರಕರಣ ನಿಭಾಯಿಸಲು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದು, ಸರ್ಕಾರಿ ಕೊಟ್ಟಿರುವ ಲಾಠಿ ಗಟ್ಟಿ ಇದೆ, ರಿವಾಲ್ವರ್ ನಲ್ಲಿ ಗುಂಡಿದೆ ಅನ್ನುವುದನ್ನು ಸಾಬೀತು ಮಾಡಿದ್ದಾರೆ.
Discussion about this post