ಶೇಖ್ ಹಸೀನಾ ಭಾಷಣದ ಪ್ರತಿ ಪತ್ತೆ – ವರದಿ ನಿರಾಕರಿಸಿದ ಹಸೀನಾ ಪುತ್ರ
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ಹಿಂದೆ ಅಮೆರಿಕಾದ ಸಂಚಿದೆ ಅನ್ನೋ ಆರೋಪ ಕೇಳಿ ಬಂದಿದೆ. ಇದಕ್ಕೆ ಪೂರಕ ಅನ್ನುವಂತೆ ಬಾಂಗ್ಲಾದೇಶದ ಮಾಜಿ ಪ್ರಧಾನಿ ರಾಜೀನಾಮೆಗೂ ಮುನ್ನ ಮಾಡಬೇಕು ಅಂದುಕೊಂಡಿದ್ದ ಭಾಷಣದ ಪ್ರತಿ ಪತ್ತೆಯಾಗಿದೆ.
Sheikh Hasina could not deliver the speech as the protesters reached her doorstep and the country’s security officers advised to leave at the earliest.
ಬಾಂಗ್ಲಾದಲ್ಲಿ ಸರ್ಕಾರ ಬದಲಾವಣೆಯಲ್ಲಿ ಅಮೆರಿಕಾದ ಕೈವಾಡವಿದೆ. ದೇಶದ ಗಡಿಯಲ್ಲಿ ನೆಲೆ ಕಂಡುಕೊಳ್ಳಲು ಅಮೆರಿಕಾ ಪ್ರಯತ್ನಿಸುತ್ತಿದೆ. ಸಣ್ಣ ದ್ವೀಪಕ್ಕಾಗಿ ಅಮೆರಿಕ ನನ್ನನ್ನು ಕೆಳಗಿಳಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ ಶೇಖ್ ಹಸೀನಾ
ಇದನ್ನೂ ಓದಿ : ಬೆಂಗ್ಳೂರಿಗೆ ಶರಾವತಿ ನೀರು : ಕೈ ಬಿಟ್ಟ ಯೋಜನೆಗೆ ಮತ್ತೊಮ್ಮೆ ಸಮೀಕ್ಷೆ
ದೇಶದ ವಿದ್ಯಾರ್ಥಿಗಳ ಶವದ ಮೆರವಣಿಗೆ ತಡೆಯಲು ನಾನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದೆ. ಎಂದು ಹೇಳಲು ಶೇಖ್ ಹಸೀನಾ ಉದ್ದೇಶಿಸಿದ್ದರು ಅನ್ನೋದು ಸಿದ್ದಪಡಿಸಿದ್ದ ಭಾಷಣದಿಂದ ಗೊತ್ತಾಗಿದೆ.
ಬಾಂಗ್ಲಾದಲ್ಲಿ ಹಾಲಿ ಇರೋ ಸರ್ಕಾರವನ್ನು ಬದಲಾಯಿಸಿಲು ಅಮೆರಿಕಾ ಬಯಸಿತ್ತು. ದೇಶದ ತುತ್ತ ತುದಿಯಲ್ಲಿರುವ ಸೇಂಟ್ ಮಾರ್ಟೀನ್ ದ್ವೀಪದಲ್ಲಿ ಸೇನಾ ನೆಲೆ ಸ್ಥಾಪಿಸಲು ಅಮೆರಿಕಾ ಮುಂದಾಗಿತ್ತು. ಇದಕ್ಕೆ ಪ್ರತಿಪಕ್ಷ ಬಿಎನ್ಪಿಯ ಬೆಂಬಲವೂ ಇತ್ತು. ಆದರೆ ನಾನು ದೇಶದಲ್ಲಿ ಅಮೆರಿಕಾದ ಸೇನಾ ನೆಲೆ ಸ್ಥಾಪಿಸಲು ನಾನು ಅವಕಾಶ ಕೊಡಲಿಲ್ಲ.
ಒಂದು ವೇಳೆ ಅಮೆರಿಕಾದ ಸೇನಾ ನೆಲೆಗೆ ಅವಕಾಶ ಕೊಡುತ್ತಿದ್ರೆ ನಾನು ಅಧಿಕಾರದಲ್ಲಿ ಮುಂದುವರಿಯಬಹುದಿತ್ತು ಎಂದು ಶೇಖ್ ಹಸೀನಾ ಆರೋಪಿಸಿದ್ದಾರೆ.
ಈ ನಡುವೆ ಭಾಷಣದ ಪ್ರತಿ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಬಿಎನ್ಪಿ ಈ ಆರೋಪವನ್ನು ತಳ್ಳಿ ಹಾಕಿದೆ. ಜೊತೆಗೆ ಹಸೀನಾ ಪುತ್ರ ವಾಜೀದ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ನನ್ನ ತಾಯಿ ಈ ರೀತಿಯ ಪತ್ರವನ್ನೇ ಬರೆದಿಲ್ಲ ಎಂದು ಮಾಧ್ಯಮಗಳ ವರದಿಯನ್ನೇ ತಳ್ಳಿ ಹಾಕಿದ್ದಾರೆ.
Completely False And Fabricated,’ Sheikh Hasina’s Son Denies Resignation Statement Made By Mother