ಎತ್ತಿನಹೊಳೆಯ ಎಡವಟ್ಟಿನ ಬೆನ್ನಲ್ಲೇ ಶರಾವತಿ ನೀರಿಗೆ ಕೈ ಹಾಕಲಾಗಿದೆ
ಕರಾವಳಿಯಲ್ಲಿ ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ ನೀರಿನ ಪೈಕಿ 24 ಟಿಎಂಸಿ ನೀರನ್ನು ಬೆಂಗಳೂರಿಗೆ ಒಯ್ಯುವ ಎತ್ತಿನಹೊಳೆ ಯೋಜನೆ ಈಗಾಗಲೇ ಅವಾಂತರಗಳ ಆಗರವಾಗಿದೆ. ಅವೈಜ್ಞಾನಿಕ ಯೋಜನೆಯೊಂದಕ್ಕೆ ಸಮ್ಮಿತಿಸಿದ ಸೂಚಿಸಿದ ಕರ್ಮಕ್ಕೆ ರಾಜ್ಯ ಸರ್ಕಾರ ಇದೀಗ ಬಿಳಿಯಾನೆಯೊಂದನ್ನು ಸಾಕುತ್ತಿದೆ. ಈ ಯೋಜನೆಯ ಕಾರಣದಿಂದಲೇ ಪಶ್ಚಿಮ ಘಟ್ಟದಲ್ಲಿ ಅನಾಹುತಗಳು ಸಂಭವಿಸುತ್ತಿದೆ. ಮತ್ತೊಂದು ನಮ್ದೇ ತೆರಿಗೆ ದುಡ್ಡು ಪೋಲಾಗುತ್ತಿದೆ.
ಈ ನಡುವೆ ರಾಜಧಾನಿ ಬೆಂಗಳೂರಿಗೆ ಶರಾವತಿ ನೀರನ್ನು ಒಯ್ಯುವ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲೇ ನೀರಿನ ಮೂಲಗಳನ್ನು ಹುಡುಕುವ ಮತ್ತು ಅಭಿವೃದ್ಧಿ ಪಡಿಸುವ ಪ್ರಯತ್ನಕ್ಕೆ ಕೈ ಹಾಕುವ ಬದಲು ಬೇರೆ ಜಿಲ್ಲೆಗಳ ಒಡಲಿನತ್ತ ಅಧಿಕಾರಿಗಳು ಕಣ್ಣು ನೆಟ್ಟಿದ್ದಾರೆ.
ಲಿಂಗನಮಕ್ಕಿ ಜಲಾಶಯದಲ್ಲಿ ವಿದ್ಯುಕ್ ಉತ್ಪಾದನೆ ನಂತರ ಸಮುದ್ರಕ್ಕೆ ಹರಿದು ಹೋಗುತ್ತಿರುವ ಸುಮಾರು 40 ಟಿಎಂಸಿ ನೀರನ್ನು ಬಳಸಿಕೊಂಡು ಬೆಂಗಳೂರಿನ ದಾಹ ಇಂಗಿಸುವುದು ಯೋಜನೆಯ ಉದ್ದೇಶ. ಈ ಸಂಬಂಧ ಕಾರ್ಯಸಾಧು ವರದಿ ನೀಡಲು ವಿಶ್ವೇಶ್ವರಯ್ಯ ಜಲ ನಿಗಮ ಟೆಂಡರ್ ಕರೆದಿದ್ದು, ಬೆಂಗಳೂರಿನ ಈಐ ಟೆಕ್ನೋಲಾಜಿಸಿಸ್ ಪ್ರೈವೇಟ್ ಕಂಪನಿ 73 ಲಕ್ಷಕ್ಕೆ ಟೆಂಡರ್ ಪಡೆದಿದೆ. ( ಎತ್ತಿನಹೊಳೆ ಯೋಜನೆಯ ಕಾರ್ಯಸಾಧು ವರದಿಯನ್ನು ಒಂದ್ಸಲ ಓದಿಕೊಳ್ಳಿ)
ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆಗಾಗಿ ನಿರ್ಮಿಸಿರುವ ಜಾಲ ಬಳಸಿಕೊಂಡು ಶರಾವತಿ ಯೋಜನೆ ಜಾರಿಗೊಳಿಸಬಹುದು ಅನ್ನೋದು ಅಧಿಕಾರಿಗಳ ಲೆಕ್ಕಚಾರ, ಮಾತ್ರವಲ್ಲದೆ ಬೆಂಗಳೂರು ಸೇರಿ ರಾಜ್ಯದ ಮಧ್ಯ ಕರ್ನಾಟಕ, ಹಾಗೂ ಪೂರ್ವ ಭಾಗದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸೋದು ಹಾಗೂ ಈ ಭಾಗದ ಕೆರೆ ಭರ್ತಿ ಮಾಡೋದು ಈ ಯೋಜನೆಯ ಉದ್ದೇಶವಂತೆ.
ಈಗಿರುವ ಮಾಹಿತಿಗಳ ಪ್ರಕಾರ ಮುಂಗಾರು ಹಂಗಾಮಿನ ನಂತರ ಕಾಲುವೆಗಳ ಮೂಲಕ ನೀರು ಸಂಗ್ರಹ ಮಾಡುವ ಉದ್ದೇಶ ಹೊಂದಲಾಗಿದ್ದು, ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಮಾವಳ್ಳಿ ಗ್ರಾಮದ ಹತ್ತಿರ Pump House ನಿರ್ಮಿಸಿ 98 ಅಡಿ ನೀರನ್ನು ಮೇಲಕ್ಕೆ ಎತ್ತಲಾಗುತ್ತದೆ. ಅಲ್ಲಿಂದ 24 ಕಿಮೀ ದೂರ ಗುರುತ್ವಾಕರ್ಷಣೆ ಮೂಲಕ ಶಂಕದ ಹೊಳೆ ಸಂಪರ್ಕಿಸುವ ಕಣಿವೆ ಮುಖಾಂತರ ತೀರ್ಥಹಳ್ಳಿ ಸಮೀಪದ ತುಂಗಾನದಿಗೆ ನೀರನ್ನು ಬಿಡಲಾಗುವುದು. ಈ ಸಲುವಾಗಿ 5 ಕಿಮೀ ಸುರಂಗ ನಿರ್ಮಿಸುವ ಪ್ರಸ್ತಾಪವೂ ಇದೆ.
ತುಂಗಾದಿಂದ ಭದ್ರಾ ತನಕ ಈಗಾಗಲೇ ಭದ್ರಾ ಮೇಲ್ದಂಡೆ ಸಂಪರ್ಕಗಳಿದ್ದು ಅಲ್ಲಿಂದ ಹಿರಿಯೂರು ತಾಲೂಕಿನ ವಿವಿ ಸಾಗರದವರೆಗೂ ಕಾಲುವೆ ಮೂಲಕ ನೀರು ಹರಿದು ಬಂದು ವಿವಿ ಸಾಗರದಲ್ಲಿ ಶರಾವತಿ ನೀರು ಸಂಗ್ರಹವಾಗಲಿದೆ.
ಇದಾದ ನಂತರ ಭದ್ರಾ ಮೇಲ್ದಂಡೆಯ ತುಮಕೂರು ಶಾಕಾ ಕಾಲುವೆ ಮೂಲಕ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಸಮೀಪ ಬೋರನಕಣಿವೆ ಅಣೆಕಟ್ಟಿಗೆ ನೀರನ್ನು ಲಿಫ್ಟ್ ಮಾಡಿ ತಾಲೂಕಿನ ತಿಮ್ಮನಹಳ್ಳಿ ದಾಬಸ್ ಪೇಟೆ ಮೂಲಕ ಅರ್ಕಾವತಿ ನದಿಯ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಆದರೆ ಈ ಯೋಜನೆ ಇಂದಿನ ಯೋಜನೆಯಲ್ಲಿ ಹಲವಾರು ವರ್ಷಗಳ ಹಿಂದೆಯೇ ಅಧಿಕಾರಿಗಳು ಈ ಬಗ್ಗೆ ಕಡತ ಸಿದ್ದಪಡಿಸಿದ್ದರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಹರಿಯುವ ಶರಾವತಿಗೆ ಇನ್ಯಾವ ಕಂಟಕ ಕಾದಿದೆಯೋ ಅನ್ನುವ ಆತಂಕದಲ್ಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ವೇಳೆ ಮಲೆನಾಡಿಗರು ಬೆಂಗಳೂರಿನಲ್ಲಿ ವಾಸವಾಗಿದ್ದು ಶರಾವತಿಯನ್ನು ಬೆಂಗಳೂರಿಗೆ ಒಯ್ಯಲು ವಿರೋಧ ಯಾಕೆ ಅನ್ನೋ ಮಾತುಗಳು ಕೇಳಿ ಬಂದಿತ್ತು.
2019ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಡಿಪಿಆರ್ ಸಿದ್ದಪಡಿಸಿತ್ತು. ಮಲೆನಾಡಿನ ಜನ ಇದನ್ನು ವಿರೋಧಿಸಿದ ಕಾರಣ ಪ್ರಸ್ತಾಪನೆಯನ್ನು ಕೈ ಬಿಡಲಾಗಿತ್ತು. 2019ರ ಡಿಪಿಆರ್ ಪ್ರಕಾರ ಲಿಂಗನಮಕ್ಕಿಯಿಂದ ನೀರನ್ನೆತ್ತಿ ಹೊಸನಗರದ ಅಣೆಕಟ್ಟಿಗೆ ಸಾಗಿಸಿ ಅಲ್ಲಿಂದ ಚಿಕ್ಕಮಗಳೂರಿನ ಯಗಚಿ ಜಲಾಶಯಕ್ಕೆ ತಲುಪಿಸಿ, ನಂತರ ಗೊರೂರು ಅಣೆಕಟ್ಟಿಗೆ ಒಯ್ದು, KRS ಮೂಲಕ ಬೆಂಗಳೂರಿಗೆ ಶರಾವತಿ ತಲುಪಿಸಲು ಉದ್ದೇಶಿಸಲಾಗಿತ್ತು. ಈ ಮೂಲಕ ಕಾವೇರಿ, ನೇತ್ರಾವತಿ, ಕುಮಾರಧಾರ ನಂತ್ರ ಶರಾವತಿಯನ್ನು ಬೆಂಗಳೂರಿಗೆ ತರೋದು ಉದ್ದೇಶ.
ಬೆಂಗಳೂರಿಗೆ ಶರಾವತಿ ನೀರನ್ನು ಹರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ 2019ರಲ್ಲಿ ಶಿವಮೊಗ್ಗ ಜಿಲ್ಲೆ ಬೆಂದ್ ನಡೆಸಲಾಗಿತ್ತು , ಹೀಗಾಗಿ ಯೋಜನೆ ಜಾರಿಯಿಂದ ಸರ್ಕಾರ ಹಿಂದಕ್ಕೆ ಸರಿದಿತ್ತು.
ಹಾಗಿದ್ದರೂ 2020ರ ಮಾರ್ಚ್ ತಿಂಗಳಲ್ಲಿ BBMP Council ಸಭೆಯಲ್ಲಿ ಮಾತನಾಡಿದ್ದ ಬೆಂಗಳೂರು ಜಲಮಂಜಳಿಯ ಅಗಿನ ಅಧ್ಯಕ್ಷ ತುಷಾರ್ ಗಿರಿನಾಥ್ ರಾಜಧಾನಿಯ ನೀರಿನ ಬವಣೆ ನೀಗಿಸುವ ಸಲುವಾಗಿ ಶರಾವತಿ ನದಿಯಿಂದ 30 ಟಿಎಂಸಿ ನೀರು ತರಲು ಬೆಂಗಳೂರು ಜಲಮಂಡಳಿಯು ಆಲೋಚಿಸಿದೆ ಅಂದಿದ್ದರು.
2028ಕ್ಕೆ ನೀರಿನ ಅಭಾವ ಉಂಟಾಗುವ ಹಿನ್ನೆಲೆಯಲ್ಲಿ ಶರಾವತಿಯಿಂದ ಯಗಚಿ ಅಥವಾ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಿ ಅಲ್ಲಿಂದ ನಗರಕ್ಕೆ 30 ಟಿಎಂಸಿ ನೀರು ತರಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ ಶರಾವತಿಯಿಂದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ, ಅಲ್ಲಿಂದ ಬೆಂಗಳೂರಿಗೆ ನೀರು ತರುವುದು ಸೂಕ್ತವೆನಿಸಿದೆ.
ಹೀಗಾಗಿ, ಅಲ್ಲಿಂದ ಮೊದಲ ಹಂತದಲ್ಲಿ 15 ಟಿಎಂಸಿ ನೀರು ತರಲು ತೀರ್ಮಾನಿಸಲಾಗಿದೆ. ಇದಕ್ಕೆ ಸಾಕಷ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ. ಈ ಯೋಜನೆಗೆ ಭೂಮಿ ಬಿಟ್ಟುಕೊಡುವ ಮಾರ್ಗ ಮಧ್ಯದಲ್ಲಿನ ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜನತೆಗೆ 5 ಟಿಎಂಸಿ ನೀರು ಒದಗಿಸುವ ಪ್ರಸ್ತಾವನೆಯೂ ಇದರಲ್ಲಿ ಇದೆ ಎಂದು ತಿಳಿಸಿದರು.
ಒಟ್ಟಿನಲ್ಲಿ ಮಲೆನಾಡಿನ ನೆಮ್ಮದಿ ಕೆಡಿಸಲು ಶರಾವತಿ ಯೋಜನೆ ಮತ್ತೊಮ್ಮೆ ಸಿದ್ದವಾಗಿದೆ. ಗಮನಾರ್ಹ ಅಂಶ ಅಂದ್ರೆ ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಮಾತನಾಡಿದ್ದ ಇಂಧನ ಸಚಿವ ಕೆಜೆ ಜಾರ್ಜ್ ನೀರಿನ ಅಗತ್ಯತೆಗಳನ್ನು ಪೂರೈಸಲು ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಿರುಗಿಸುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದೆ ಇಲ್ಲ ಅಂದಿದ್ದರು.