ಬೆಂಗಳೂರು : ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿರುವ ಹಾಗೂ ನಿಜವಾದ ದೇಶಪ್ರೇಮಿಗಳು ನೋಡಲೇಬೇಕಾದ ಸಿನಿಮಾ ಎಂದು ಬಿಂಬಿತವಾಗಿರುವ ಕಾಶ್ಮೀರ ಫೈಲ್ಸ್ ಸಿನಿಮಾ ವೀಕ್ಷಣೆಗೆ ಶಾಸಕರನ್ನು ಕರ್ನಾಟಕ ಸರ್ಕಾರ ಆಹ್ವಾನಿಸಿತ್ತು.
ಈ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ಮೂಲಕ ಆಹ್ವಾನ ನೀಡಲಾಗಿತ್ತು. ಈ ವೇಳೆ ವಿವಾದಕ್ಕೆ ಸಿಲುಕಿ ಹಾಕಿಕೊಳ್ಳಲು ಇಚ್ಛಿಸದ ಸಿದ್ದರಾಮಯ್ಯ, ನನಗೆ ಹಿಂದಿ ಅರ್ಥವಾಗೋದಿಲ್ಲ ನಾನು ಸಿನಿಮಾ ನೋಡಲು ಹೋಗೋದಿಲ್ಲ. ಸಿನಿಮಾ ನೋಡುವ ಅಭ್ಯಾಸ ಕೂಡಾ ನನಗಿಲ್ಲ ಎಂದು ಜಾರಿಕೊಂಡಿದ್ದರು.
ಆದರೆ ಮಂಗಳವಾರ ವಿಧಾನಪರಿಷತ್ತಿನಲ್ಲಿ ಸಭಾಪತಿಗಳು ದಿ ಕಾಶ್ಮೀರ ಫೈಲ್ಸ್ ಸಿನಿಮಾ ನೋಡಲು ಸರ್ಕಾರದ ಪರವಾಗಿ ಆಹ್ವಾನ ನೀಡಿರುವುದಕ್ಕೆ ಕಾಂಗ್ರೆಸ್ ಸದಸ್ಯರು ಕೆಂಡಾಮಂಡಲರಾಗಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಹರಿಪ್ರಸಾದ್, ಕಾಶ್ಮೀರ ಫೈಲ್ಸ್ ದೊತೆ ಫರ್ಜಾನಾ ಹಾಗೂ ವಾಟರ್ ಮೂವಿ ತೋರಿಸಿ. ಸದನದಲ್ಲಿ ಕೆಲವರು ಬ್ಲೂ ಫಿಲ್ಮಂ ನೋಡಿದ್ದಾರೆ. ಅದನ್ನ ನೋಡಲಾಗುತ್ತಾ, ಸರ್ಕಾರಿ ಇರೋದು ಸಿನಿಮಾ ತೋರಿಸುವುದಕ್ಕೆಯೇ ಎಂದು ವಾಹ್ದಾಳಿ ನಡೆಸಿದರು. ಇದಕ್ಕೆ ದನಿಗೂಡಿಸಿದ ಮತ್ತೊಬ್ಬ ಕಾಂಗ್ರೆಸ್ ಶಾಸಕ ಸಲೀಂ ಆಹ್ಮದ್, ನಾವ್ ಅದ್ಯಾಕೆ ಚಲನಚಿತ್ರ ನೋಡಬೇಕು. ಅದ್ಯಾಕೆ ಬಲವಂತ ಮಾಡ್ತೀರಿ ಅಂದರು. ಮಾತ್ರವಲ್ಲದೆ ಸದನದ ಬಾವಿಗಿಳಿದ ಕಾಂಗ್ರೆಸ್ ಸದಸ್ಯರು, ಪ್ರತಿಭಟನೆ ನಡೆಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಸೋಮಶೇಖರ್, ಸಿನಿಮಾ ವೀಕ್ಷಣೆಗೆ ಬರುವುದು ಕಡ್ಡಾಯವಲ್ಲ. ಇಷ್ಟ ಇರುವವರು ಬರಬಹುದು ಅಂದರು. ಸಭಾಪತಿಗಳು ಕೂಡಾ ಕಡ್ಡಾಯವಲ್ಲ ಅಂದರು.
ಇನ್ನು ಸಂಜೆ ಸದನ ಕಲಾಪ ಮುಕ್ತಾಯವಾಗುತ್ತಿದ್ದಂತೆ ಬಸ್ ಏರಿದ ಬಿಜೆಪಿ ಸದಸ್ಯರು ಮಂತ್ರಿ ಮಾಲ್ ಗೆ ತೆರಳಿ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಉಪಸ್ಥಿತಿ ಇರಲಿಲ್ಲ.
Discussion about this post