ಬೆಂಗಳೂರು : ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ( Seemanth Kumar Singh ) ಕಾರ್ಯವೈಖರಿ ಬಗ್ಗೆ ಮೊನ್ನೆಯಿಂದ ಅಸಮಾಧಾನ ವ್ಯಕ್ತಪಡಿಸುತ್ತಿರುವ ಹೈಕೋರ್ಟ್ ಹಲವು ಮಹತ್ತರ ವಿಚಾರಗಳತ್ತ ಬೆಳಕು ಚೆಲ್ಲಿದೆ. ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಹೇಳಿದ ಮಾತುಗಳು ಮತ್ತು ಬೆಳವಣಿಗೆ ಜನ ಸಾಮಾನ್ಯರಲ್ಲಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
Seemanth Kumar Singh ಈ ನಡುವೆ ಗುರುವಾರ ಬೆಂಗಳೂರು ನಗರ ಡಿಸಿಯಾಗಿದ್ದ ಮಂಜುನಾಥ್ ಲಂಚ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮತ್ತೆ ಎಸಿಬಿ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿತು. ಹೈಕೋರ್ಟ್ ವಿಚಾರಣೆ ಬಳಿಕ ಡಿಸಿಯನ್ನು ಬಂಧಿಸಲಾಗಿದೆ. ಸಾಕ್ಷಿ ಸಿಕ್ಕ ತಕ್ಷಣ ಬಂಧನ ಮಾಡಬೇಕು ತಾನೇ. ನಾವು ಹೇಳುವ ತನಕ ಏನು ಮಾಡ್ತಾ ಇದ್ರಿ.
ಪರ್ಸನಲ್ ಅಸಿಸ್ಟೆಂಟ್ ಮಹೇಶ್ ಮೂಲಕ ಡಿಸಿ ಡೀಲ್ ಮಾಡಿದ್ದಾರೆ. ಮಹೇಶ್ ನೇಮಕಾತಿ ಆದೇಶ ಎಲ್ಲಿದೆ ಹಣ ಮಾಡುವ ಸಲುವಾಗಿಯೇ ಅವರನ್ನು ಸೇರಿಸಿಕೊಳ್ಳಲಾಗಿದೆ. ಖಾಸಗಿ ವ್ಯಕ್ತಿಯನ್ನು ಡಿಸಿ ತನ್ನ ಚೇಂಬರ್ ಗೆ ಬಿಟ್ಟು ಕೊಂಡ್ರು. ನಾನು ಗರಂ ಆದ ಮೇಲೆ ಮಂಜುನಾಥ್ ಮನೆ ಮೇಲೆ ದಾಳಿ ಮಾಡಲಾಗಿದೆ. ಮನೆಯಲ್ಲಿ ಏನು ಸಿಕ್ಕಿಲ್ಲವಂತಲ್ವಾ…ಎಂದು ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಪ್ರಶ್ನಿಸಿದರು.
ಇದನ್ನೂ ಓದಿ : PSI Exam Scam Amrut Paul : ಹರ್ಷನ ಕೊಲೆ ಆರೋಪಿಗಳಿಗೆ ಮೊಬೈಲ್ ಸಿಗುತ್ತದೆ… ಅಮೃತ ಪಾಲ್ ಗೆ ಎಣ್ಣೆ ಸಿಗಲ್ವ….
ಈ ನಡುವೆ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಕಾರ್ಯವೈಖರಿಗೆ ಬಗ್ಗೆ ಮಾತನಾಡಿದ ನ್ಯಾಯಮೂರ್ತಿಗಳು ನಮಗೆ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ. ಅವರು ಬಳ್ಳಾರಿ ಎಸ್ಪಿಯಾಗಿದ್ದ ವೇಳೆ ಸಿಬಿಐ ದಾಳಿ ನಡೆಸಿತ್ತು. ಸೀಮಂತ್ ಕುಮಾರ್ ಸಿಂಗ್ ಪ್ರತಿ ತಿಂಗಳು ಮಾಮೂಲಿ ಸ್ವೀಕರಿಸಿದ್ದಾರೆ ಎಂದು ಸಾಕ್ಷಿಗಳ ಹೇಳಿಕೆ ಇದೆ. ಆದರೆ ಸಿಬಿಐ ಈ ಬಗ್ಗೆ ಆಳವಾದ ತನಿಖೆ ನಡೆಸಿಲ್ಲ. ಅದಿರು ಸಾಗಾಟಕ್ಕೆ ಲಂಚ ಸ್ವೀಕರಿಸುತ್ತಿದ್ದರೆಂದು ಆರೋಪಿಸಲಾಗಿದ್ದರೂ, ಪ್ರತೀ ತಿಂಗಳು ಮಾಮೂಲಿ ಸ್ವೀಕರಿಸುತ್ತಾರೆ ಅನ್ನುವ ಸಾಕ್ಷಿಗಳ ಹೇಳಿಕೆ ಇದ್ದರೂ ಯಾವುದೇ ಕ್ರಮಕ್ಕೂ ಶಿಫಾರಸ್ಸು ಆಗಿರಲಿಲ್ಲ ಅಂದ ನ್ಯಾಯಮೂರ್ತಿಗಳು, ಆ ತನಿಖೆ ವರದಿಯನ್ನು ಸಲ್ಲಿಸಲು ಸಿಬಿಐಗೆ ಸೂಚಿಸಿದೆ. ತನಿಖಾ ವರದಿ ಬಾರದಿದ್ರೆ ಸಿಬಿಐ ಎಸ್ಪಿಯವರೇ ಹಾಜರಿರುವಂತೆ ಕೋರ್ಟ್ ಸೂಚಿಸಿದೆ.
ಎಸಿಬಿ ಕಾರ್ಯವೈಖರಿಗೆ ಮತ್ತೆ ಹೈಕೋರ್ಟ್ ಗರಂ : ಅಪೂರ್ಣ ಬಿ ರಿಪೋರ್ಟ್ ಮಾಹಿತಿ ಕಂಡು ನ್ಯಾ. ಹೆಚ್.ಪಿ. ಸಂದೇಶ್ ಕೆಂಡಾಮಂಡಲ
ಬೆಂಗಳೂರು : ಎಸಿಬಿ ಕಾರ್ಯವೈಖರಿಗೆ ಸಂಬಂಧಿಸಿದಂತೆ (karnataka high court ACB) ಹೈಕೋರ್ಟ್ ಮತ್ತೆ ಚಾಟಿ ಬೀಸಿದೆ. ಕಳೆದ ಕೆಲವು ದಿನಗಳಿಂದ ಈ ಸಂಬಂಧ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಇವತ್ತು ಕೂಡಾ ಕೆಂಡಮಂಡಲರಾಗಿದ್ದಾರೆ.
ಎಸಿಬಿ ಈ ತನಕ ಹಾಕಿರುವ ಬಿ ರಿಪೋರ್ಟ್ ಗಳ ಬಗ್ಗೆ ವಕೀಲರು ನೀಡಿದ ವರದಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ಸಹಿ ಇಲ್ಲದ ಅಪೂರ್ಣ ಮಾಹಿತಿಯನ್ನು ನೋಡಿ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಎಸಿಬಿ ಪರ ವಕೀಲರು 99 ಬಿ ರಿಪೋರ್ಟ್ ಗಳ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಆ ಸಂಖ್ಯೆ 105ಕ್ಕೆ ಏರಿತು.
ಆಗ ಅಸಮಾಧಾನಗೊಂಡ ನ್ಯಾಯಾಧೀಶರು, ನಾನು ಪದೇ ಪದೇ ಎಸಿಬಿಗೆ ಹೇಳಬೇಕಾ, ಸರಿಯಾಗಿ ಮಾಹಿತಿಯನ್ನು ಯಾಕೆ ಕೊಡುತ್ತಿಲ್ಲ. ನನಗೆ ಆಟ ಆಡುತ್ತಿರುವ ಬಗ್ಗೆ ಎಲ್ಲವೂ ಗೊತ್ತಿದೆ. 2022ರ ಬಿ ರಿಪೋರ್ಟ್ ಗಳು ಎಲ್ಲಿದೆ. ADGP ರಕ್ಷಿಸಲು ಬಿ ರಿಪೋರ್ಟ್ ಮಾಹಿತಿ ನೀಡಿಲ್ಲ. ಮಾರ್ಚ್ ಜೂನ್ ತಿಂಗಳಲ್ಲಿ ಬಿ ರಿಪೋಟ್ ಸಲ್ಲಿಸಲಾಗಿದೆ. ನೀವು ಹೀಗೆ ಆಟವಾಡುತ್ತಿರುವುದು ಗೊತ್ತಿದ್ದು ಈ ಮಾಹಿತಿಗಳನ್ನು ಕೇಳಲಾಗಿದೆ ಎಂದು ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ( HP Sandesh ) ಗರಂ ಆಗಿದ್ದಾರೆ.
ಈ ನಡುವೆ ಎಫ್ ಐ ಆರ್ ರದ್ದು ಕೋರಿ ಐಎಎಸ್ ಅಧಿಕಾರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದ್ದು, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿದೆ. ಪೊಲೀಸ್ ನೇಮಕಾತಿ ಹಗರಣದ ಪ್ರಕರಣದ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಲಾಗಿದೆ.
Discussion about this post