ಜಗತ್ತಿಗೆ ಕೊರೋನಾ ಹರಡಿದ ಚೀನಾ ಮಾನವ ಸಂಕುಲವನ್ನೇ ನಾಶ ಮಾಡುವ ವೈರಸ್ ಗಳ ತವರೂರಾಗಲಿದೆಯೇ, ಇಡೀ ವಿಶ್ವವನ್ನೇ ನಾಶ ಮಾಡುವ ಹೊಸ ಹೊಸ ವೈರಸ್ ಗಳ ತಾಣವಾಗಲಿದೆಯೇ ಅನ್ನುವ ಅನುಮಾನ ಇದೀಗ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಚೀನಾದ ಹಸಿಮಾಂಸ ಮಾರುಕಟ್ಟೆಯಲ್ಲಿ ಪತ್ತೆಯಾಗಿರುವ ಹೊಸ 18 ವಿಧದ ವೈರಸ್ ಗಳು.
ಕೊರೋನಾ ಹುಟ್ಟಿಕೊಂಡಿದೆ ಎನ್ನಲಾದ ಹಸಿ ಮಾಂಸ ಮಾರುಕಟ್ಟೆಯಲ್ಲೇ ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡ 18 ಸಸ್ತನಿ ವೈರಸ್ಗಳನ್ನು ಪತ್ತೆ ಹಚ್ಚಿದೆ. ಈ ಎಲ್ಲಾ ವೈರಸ್ ಗಳು ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಕಂಟಕ ತರಲಿದೆ ಅನ್ನುವುದೇ ಆತಂಕದ ವಿಚಾರ.
ಒಂದೇ ಒಂದು ವೈರಸ್ ನಿಂದ ಜಗತ್ತು ಎದುರಿಸದ ಸಂಕಷ್ಟ ಏನು ಅನ್ನುವುದನ್ನು ಬದುಕುಳಿದವರು ನೋಡಿದ್ದಾರೆ. ಇನ್ನು 18 ವಿಧದ ವೈರಸ್ ಗಳು ಅಟ್ಟಹಾಸ ಪ್ರಾರಂಭಿಸಿದರೆ ಕೇಳುವುದೇ ಬೇಡ.
Discussion about this post