ರಾಮನಗರ : ನಿಧಿ ಪಡೆಯುವ ಸಲುವಾಗಿ ಅಮಾಯಕ ಮಹಿಳೆಯ ಬಟ್ಟೆ ಬಿಚ್ಚಿ ಪೂಜೆ ನೆರವೇರಿಸಿ ಬಳಿಕ ಬಲಿ ಕೊಡಲು ಪ್ರಯತ್ನಿಸಿದ ಕರಾಳ ಘಟನೆ ರಾಮನಗರದ ಸಾತನೂರಿನಲ್ಲಿ ನಡೆದಿದೆ.
ಆದರೆ ಪೂಜೆ ನೆರವೇರಿಸಿ ಬಲಿ ಕೊಡಲು ಸಿದ್ದತೆಗಳಾಗುತ್ತಿರುವ ಸಂದರ್ಭದಲ್ಲಿ ಅದೃಷ್ಟ ಅನ್ನುವಂತೆ ಪೊಲೀಸರಿಗೆ ಮಾಹಿತಿ ತಲುಪಿದ್ದು, ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲಿಯಾಗಬೇಕಾಗಿದ್ದ ಕೂಲಿ ಕಾರ್ಮಿಕ ಮಹಿಳೆಯನ್ನು ರಕ್ಷಿಸಿದ್ದಾರೆ.
ಮಂಗಳವಾರ ತಡರಾತ್ರಿ ಕನಕಪುರ ತಾಲೂಕು, ಸಾತನೂರು ಹತ್ತಿರದ ಭೂಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಲಿಗಾಗಿ ಸಿದ್ದತೆ ನಡೆಸಿದ್ದ 6 ಮಂದಿಯನ್ನು ಬಂಧಿಸಲಾಗಿದೆ. ಬಂಧಿತರನ್ನು ತಮಿಳುನಾಡು ಮೂಲದ ಪಾರ್ಥಸಾರಥಿ,ನಾಗರಾಜು, ಶಶಿಕುಮಾರ್, ಲೋಕೇಶ್, ಮೋಹನ್, ಲಕ್ಷ್ಮಿ ನರಸಪ್ಪ ಎಂದು ಗುರುತಿಸಲಾಗಿದೆ. ಇಡೀ ಕೃತ್ಯದ ರೂವಾರಿ ಶಶಿಕುಮಾರ್ ಎಂದು ಗೊತ್ತಾಗಿದ್ದು, ಮಹಿಳೆಯನ್ನು ಬಲಿ ಕೊಟ್ಟರೆ ನಿಧಿ ತಾನಾಗಿಯೇ ಭೂಮಿಯಿಂದ ಹೊರಗೆ ಬರುತ್ತದೆ ಎಂದು ನಂಬಿಸಿದ್ದನಂತೆ.
Discussion about this post