ಬೆಂಗಳೂರು : ಇಂದು ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಕಲಾ ವಿಭಾಗದಲ್ಲಿ ಇಬ್ಬರು, ವಾಣಿಜ್ಯ ವಿಭಾಗದಲ್ಲಿ ನಾಲ್ಕು ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ ನಾಲ್ಕು ಮಂದಿ ಅತ್ಯಧಿಕ ಅಂಕ ಪಡೆದು ಟಾಪರ್ಸ್ ಗಳಾಗಿ ಹೊರ ಹೊಮ್ಮಿದ್ದಾರೆ.
ಈ ನಡುವೆ ಕೆ.ಆರ್. ನಗರ ಶಾಸಕ ಅವರ ಪತ್ನಿ ಅನಿತಾ ಅವರು 30 ವರ್ಷಗಳ ನಂತ್ರ ಪಿಯುಸಿ ಪಾಸ್ ಆಗಿದ್ದಾರೆ. ಅನಿತಾ ಅವರು 418 ಅಂಕ ಪಡೆದಿದ್ದು, ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು.
1993ರಲ್ಲಿ SSLC ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಅವರು ನಂತ್ರ ಎಜುಕೇಶನ್ ಮುಂದುವರಿಸಿರಲಿಲ್ಲ. ಇದೀಗ ಖಾಸಗಿಯಾಗಿ ಪರೀಕ್ಷೆ ಬರೆದು ಪಿಯುಸಿಯಲ್ಲಿ ಉರ್ತೀರ್ಣರಾಗಿದ್ದಾರೆ.
ಸಾರಾ ಮಹೇಶ್ ಮತ್ತು ಅನಿತಾ ಅವರಿಗೆ ಇಬ್ಬರು ಮಕ್ಕಳಿದ್ದು, ಹಿರಿಯ ಪುತ್ರ ಧನುಷ್, MBBS ಮುಗಿಸಿದ್ದು, ಎಂಎಸ್ ಮಾಡುತ್ತಿದ್ದಾರೆ. ಕಿರಿಯ ಪುತ್ರ ಜಯಂತ್ ಉದ್ಯಮಿಯಾಗಿದ್ದಾರೆ.
ಅನಿತಾ ಅವರ ಸಾಧನೆಯನ್ನು ಮೆಚ್ಚಬೇಕು. ಇವರ ಸಾಧನೆ ಅನೇಕ ಹಿಂಜರಿಕೆಯನ್ನು ದೂರ ಮಾಡುವುದರಲ್ಲಿ ಸಂಶಯವಿಲ್ಲ.
Discussion about this post