ಮಂಗಳೂರು : ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿದ್ದ ರೋಹಿತ್ ಚಕ್ರತೀರ್ಥ ಅವರಿಗೆ ನಾಗರಿಕೆ ಸನ್ಮಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಇಂದು ಜೂನ್ 25 ರಂದು ಕೆನರಾ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸನ್ಮಾನ ಕಾರ್ಯಕ್ರಮದ ವಿರುದ್ಧ ಎಡಪಂಥೀಯ ಸಂಘಟನೆಗಳು ಕಿಡಿ ಕಾರಿತ್ತು. ಜೊತೆಗೆ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಕೂಡಾ ನೀಡಿತ್ತು. ಇನ್ನು ಬಿಲ್ಲವ ಸಮುದಾಯದ ಸಂಘಟನೆಗಳು ಕೂಡಾ ಈ ಸನ್ಮಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತ್ತು. ಪಠ್ಯದಲ್ಲಿ ನಾರಾಯಣ ಗುರುಗಳನ್ನು ಕಡೆಗಣಿಸಲಾಗಿದೆ ಅನ್ನುವ ವಿಚಾರ ಈಗಾಗಲೇ ಬಿಲ್ಲವರ ಕೆಂಗಣ್ಣಿಗೆ ಗುರಿಯಾಗಿದೆ.
ಕರಾವಳಿಯಲ್ಲಿ ಬಿಲ್ಲವ ಸಮುದಾಯದ ಮತಗಳು ನಿರ್ಣಾಯಕ ಆಗಿರುವುದರಿಂದ ಬಿಜೆಪಿ ನಾಯಕರು ಮುನ್ನೆಚ್ಚರಿಕೆಯಾಗಿ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ ಅನ್ನಲಾಗಿದೆ. ಮಾಹಿತಿಗಳ ಪ್ರಕಾರ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಪಠ್ಯ ಪುಸ್ತಕ ವಿಚಾರ ತಣ್ಣಗಾದ ಬಳಿಕ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಸಂಘಟಕರು ಚಿಂತಿಸಿದ್ದಾರೆ ಅನ್ನಲಾಗಿದೆ.
Discussion about this post