ಇರಲಾರದೆ ಇರುವೆ ಬಿಟ್ಟುಕೊಂಡರು ಅನ್ನುವುದು ಇದೀಗ ಕುಮಾರಸ್ವಾಮಿಯವರ ಪರಿಸ್ಥಿತಿ. ನಿಖಿಲ್ ಸೋಲಿನ ನೋವಿನಿಂದ ಹೊರ ಬಂದು ಮುಂದಿನ ಚುನಾವಣೆಯಲ್ಲಿ ನಿಖಿಲ್ ಗೆಲುವಿಗೆ ರಣತಂತ್ರವನ್ನು ಕುಮಾರಸ್ವಾಮಿ ರೂಪಿಸಬೇಕಾಗಿತ್ತು. ಅದನ್ನು ಬಿಟ್ಟು ಹಳೆಯ ಗಾಯ ಮತ್ತೆ ಕೆದಕಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ಕೆ.ಆರ್.ಎಸ್ ಡ್ಯಾಮ್ ವಿಚಾರದಲ್ಲಿ ಸುಮಲತಾ ಕೊಟ್ಟ ಹೇಳಿಕೆ ಬಗ್ಗೆ ತನಿಖೆಗೆ ಆಗ್ರಹಿಸಿದ್ರೆ ಕುಮಾರಸ್ವಾಮಿ ದೊಡ್ಡ ವ್ಯಕ್ತಿಯಾಗಿ ಹೋಗಿರುತ್ತಿದ್ರು, ಅದ್ರೆ ಸುಮಲತಾ ಅವರನ್ನು ಮಲಗಿಸುವ ಹೇಳಿಕೆ ಕೊಟ್ಟು ತಪ್ಪು ಮಾಡಿದ್ದಾರೆ.ಜೊತೆಗೆ ಡ್ಯಾಮ್ ಸುತ್ತಮುತ್ತಲ ಪ್ರದೇಶದ ಅಕ್ರಮ ಗಣಿಗಾರಿಕೆ ವಿಚಾರವೂ ಮುನ್ನಲೆಗೆ ಬರುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ದಿವಂಗತ ಅಂಬರೀಶ್ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ರೆಬಲ್ ಸ್ಟಾರ್ ಅಭಿಮಾನಿಗಳ ಆಕ್ರೋಶಕ್ಕೂ ತುತ್ತಾಗಿದ್ದಾರೆ. ಸುಮಲತಾ ಅವರನ್ನು ರಾಜಕೀಯವಾಗಿ ಎದುರಿಸುವ ಬದಲು ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದೇ ಕುಮಾರಸ್ವಾಮಿಯವರಿಗೆ ಭವಿಷ್ಯದಲ್ಲಿ ದೊಡ್ಡ ಹೊಡೆತ ನೀಡಿದರೂ ಅಚ್ಚರಿ ಇಲ್ಲ.
ಈ ನಡುವೆ ರಾಕ್ ಲೈನ್ ವೆಂಕಟೇಶ್ ಹಾಗೂ ಸುಮಲತಾ ಅಂಬರೀಶ್ ಬಗ್ಗೆ ಸಂಬಂಧ ಕಲ್ಪಿಸಲು ಕುಮಾರಸ್ವಾಮಿ ಯತ್ನಿಸಿದ್ದರು ಅನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಕ್ ಲೈನ್ ಅವರೇ ಮಾತನಾಡಿದ್ದು, ಕುಮಾರಸ್ವಾಮಿ ಅವರು ಆಡಿಯೋ ವಿಡಿಯೋ ಬಾಂಬ್ ಎಂದು ಬೆದರಿಕೆ ಹಾಕುವುದು ಹೊಸದಲ್ಲ.
ಮಂಡ್ಯ ಚುನಾವಣೆಯ ಸಂದರ್ಭದಲ್ಲಿ ನಾವೆಲ್ಲ ಚುನಾವಣಾ ಪ್ರಚಾರದ ಸಲುವಾಗಿ ಹೋಟೆಲ್ ನಲ್ಲಿ ಉಳಿದುಕೊಂಡಿದ್ದೆವು. ಈಗ ನಾನು ಹಾಗೂ ಸುಮಲತಾ ಹೋಟೆಲ್ ಗೆ ತೆರಳುತ್ತಿದ್ದ ದೃಶ್ಯಗಳನ್ನು ಹೋಟೆಲ್ ನ ಸಿಸಿ ಕ್ಯಾಮಾರಾದಿಂದ ಪಡೆದು ಆ ದೃಶ್ಯಗಳ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದರು. ಅದಕ್ಕೆ ಅಶ್ಲೀಲ ಚಿತ್ರ ಸೇರಿಸಿ ದುರ್ಬಳಕೆಗೆ ಯೋಜಿಸಿದ್ದರು. ಇಗನ್ನು ಅವರ ವಾಹಿನಿಯಲ್ಲಿದ್ದ ಅಂಬರೀಷ್ ಅಭಿಮಾನಿಯೇ ನನಗೆ ಹೇಳಿದ್ದರು ಎಂದು ಬಾಂಬ್ ಸಿಡಿಸಿದ್ದಾರೆ.
ಒಂದು ವೇಳೆ ರಾಕ್ ಲೈನ್ ಮಾಡಿದ ಆರೋಪದಲ್ಲಿ ಹುರುಳಿತ್ತು, ಸತ್ಯಾಂಶವಿದೆ ಅನ್ನುವುದಾದ್ರೆ ಇತಂಹುದೊಂದು ಯೋಜನೆ ಮಾಡಿದವರನ್ನು ಕರುನಾಡು ಎಂದಿಗೂ ಕ್ಷಮಿಸುವುದಿಲ್ಲ.
Discussion about this post