ರೆಂಜೂಷಾ ಮೆನನ್ ( Renjusha Menon) ಸಾವು ಕಿರುತೆರೆ ಲೋಕವನ್ನು ಯೋಚಿಸುವಂತೆ ಮಾಡಿದೆ
ಜನಪ್ರಿಯ ಮಲಯಾಳಂ ಕಿರುತೆರೆ ಮತ್ತು ಸಿನಿಮಾ ನಟಿ ರೆಂಜೂಷಾ ಮೆನನ್ ( Renjusha Menon) ಸೋಮವಾರ ಬೆಳಿಗ್ಗೆ ತಿರುವನಂತಪುರಂನಲ್ಲಿರುವ ತಮ್ಮ ಫ್ಲಾಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 35 ವರ್ಷದ ಅವರು ನಟರೂ ಆಗಿರುವ ಪತಿ ಮನೋಜ್ ಅವರೊಂದಿಗೆ ಫ್ಲಾಟ್ನಲ್ಲಿ ವಾಸವಾಗಿದ್ದರು.
ಕೇರಳ ಮಾಧ್ಯಮಗಳ ವರದಿಯ ಪ್ರಕಾರ, ರೆಂಜೂಷಾ ಮೆನನ್ ( Renjusha Menon ) ಅವರದ್ದು ಆತ್ಮಹತ್ಯೆ ಅನ್ನುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಅನ್ನೋದು ಪೊಲೀಸರ ತನಿಖೆಯ ಬಳಿಕವೇ ಗೊತ್ತಾಗಬೇಕಾಗಿದೆ. ನಟಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎನ್ನಲಾಗಿದೆ.
ಇದನ್ನೂ ಓದಿ : Bigg Boss ಮನೆಗೆ ವರ್ತೂರು ಸಂತೋಷ್
ಕೊಚ್ಚಿ ಮೂಲದ ರೆಂಜೂಷಾ ಮೆನನ್ ಟಿವಿ ಧಾರಾವಾಹಿಗಳಿಗೆ ಪ್ರವೇಶಿಸುವ ಮೊದಲು ಟಿವಿ ಕಾರ್ಯಕ್ರಮಗಳ ನಿರೂಪಕಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ‘ಸ್ತ್ರೀ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಚ ಅವರು ಬಳಿಕ ಹತ್ತಾರು ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡಿದ್ದರು.
ಹಲವು ಧಾರಾವಾಹಿಗಳಲ್ಲಿ ನಟನೆ
‘ಸಿಟಿ ಆಫ್ ಗಾಡ್’ – City of God’ , ‘ಮರಿಕ್ಕುಂಡೋರು ಕುಂಜಾಡು’- Marykkundoru Kunjaadu, ‘ಬಾಂಬೆ ಮಾರ್ಚ್’- Bombay March, ‘ಕಾರ್ಯಸ್ಥಾನ’- Karyasthan, ‘ಒನ್ ವೇ ಟಿಕೆಟ್’ – One Way Ticket, ‘ಮತ್ತು ಅದ್ಭುತ ದ್ವೀಪ- Athbhutha Dweepu’ ಸೇರಿದಂತೆ ಹಲವಾರು ಸೀರಿಯಲ್ ಗಳಲ್ಲಿ ನಟಿಸಿದ್ದರು. ಜೊತೆಗೆ ಕೆಲ ಚಲನಚಿತ್ರಗಳಲ್ಲಿ ಪೋಷಕ ನಟಿಯಾಗಿಯೂ ಕಾಣಿಸಿಕೊಂಡಿದ್ದರು.
ಮಾತ್ರವಲ್ಲದೆ ಮೆನನ್ ಕೆಲವರು ಧಾರಾವಾಹಿಗಳಲ್ಲಿ ನಿರ್ಮಿಸಿದ್ದರೂ ಕೂಡಾ,ವೃತ್ತಿಪರ ಭರತನಾಟ್ಯ ನೃತ್ಯಗಾರರಾಗಿದ್ದ ಅವರಿಗೆ ಇತ್ತೀಚೆಗೆ ಅವಕಾಶಗಳ ಕೊರತೆ ಎದುರಾಗಿತ್ತು ಅನ್ನಲಾಗಿದೆ.
ನಿರ್ಮಾಪಕಿಯೂ ಹೌದು
ಕಳೆದ ತಿಂಗಳು ಮತ್ತೊಬ್ಬ ಮಲಯಾಳಂ ನಟಿ ಅಪರ್ಣಾ ನಾಯರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆಲ ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದ ಅಪರ್ಣಾ ತನ್ನ ಪತಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಬಣ್ಣದ ಲೋಕದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರಕರಣಗಳು ನಿಜಕ್ಕೂ ಆತಂಕಕಾರಿ.
Discussion about this post