ದೊಡ್ಮನೆ ಹುಡುಗ ನಮ್ಮ ಜೊತೆಗಿಲ್ಲ, ಆದರೆ ಅವರ ಕೆಲಸ ಅವರ ಮಾತು ಅವರ ಸಾಧನೆ ನಮಗೆ ಪ್ರೇರಣೆ ( Puneeth Rajkumar Rakhi)
ನಟ, ದೊಡ್ಮನೆ ರಾಜಕುಮಾರ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಹಲವು ತಿಂಗಳುಗಳೇ ಕಳೆದರೂ ಅವರು ಜನಮಾನಸದಲ್ಲಿ ಅಜಾರಾಮರರಾಗಿದ್ದಾರೆ. ಅದಕ್ಕೆ ಸಾಕ್ಷಿ ಅನ್ನುವಂತೆ ಅನೇಕ ಉದಾಹರಣೆಗಳು ಸಿಗುತ್ತಿವೆ.( Puneeth Rajkumar Rakhi)
ವಿಶೇಷ ದಿನಗಳಂದು, ಹಬ್ಬ-ಹರಿದಿನಗಳಲ್ಲೂ ಪುನೀತ್ ಅವರ ನಾಮಸ್ಮರಣೆ ಇರುತ್ತದೆ. ಇದೀಗ ರಕ್ಷಾ ಬಂಧನದ ( raksha bandhan 2022) ಸಂಭ್ರಮ, ಮತ್ತೆ ಪುನೀತ್ ಅವರನ್ನು ಅಭಿಮಾನಿಗಳು ನೆನೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪುನೀತ್ ರಾಜ್ಕುಮಾರ್ ಅವರ ಫೋಟೋ ಇರುವ ಅಪ್ಪು ರಾಖಿ ಬಂದಿದ್ದು, ಪುನೀತ್ ರಾಖಿ ( Appu Rakhi) ಸದ್ದು ಮಾಡುತ್ತಿದೆ.
ಇದನ್ನು ಓದಿ : Freedom March : ಸಿದ್ದು ಬೆನ್ನಲ್ಲೇ ಡಿಕೆ ಶಕ್ತಿ ಪ್ರದರ್ಶನ : ಪ್ರಿಯಾಂಕ ವಾದ್ರಾ ಭಾಗಿ
ಎಲ್ಲೆಲ್ಲೂ ರಕ್ಷಾ ಬಂಧನದ ತಯಾರಿ ಜೋರಾಗಿದೆ. ಮಾರುಕಟ್ಟೆಗೆ ತರಹ ತರಹದ ರಾಖಿಗಳು ಲಗ್ಗೆ ಇಟ್ಟಿವೆ. ಈ ಬಾರಿ ಕಣ್ಮನ ಸೆಳೆಯುತ್ತಿರುವುದು ಪುನೀತ್ ರಾಜ್ಕುಮಾರ್ ಫೋಟೋ ಇರುವ ರಾಖಿಗಳು. ಇದನ್ನು ಕಂಡ ಅಪ್ಪು ಅಭಿಮಾನಿಗಳು, ಅಭಿಮಾನದಿಂದ ಈ ರಾಖಿಗಳನ್ನು ಖರೀದಿಸುತ್ತಿದ್ದಾರೆ.
ಒಟ್ಟಿನಲ್ಲಿ ಪುನೀತ್ ಫೋಟೋ ಇರುವ ರಾಖಿಗಳಿಂದ ರಕ್ಷಾ ಬಂಧನಕ್ಕೆ ವಿಶೇಷ ಕಳೆ ಬಂದತಾಗಿದೆ.
Discussion about this post