ಪೊಲೀಸ್ ನೇಮಕಾತಿ ಹಗರಣದಲ್ಲಿ ( psi scam Karnataka ) ಬಿಜೆಪಿ ಸಚಿವರಿದ್ದಾರೆ ಅನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಇದೀಗ ಸಿಐಡಿ ಪೊಲೀಸರು ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕರ ಪುತ್ರನೊಬ್ಬನ ಹೆಸರು ಉಲ್ಲೇಖಿತಗೊಂಡಿದೆ.
ಬೆಂಗಳೂರು : ದೇಶದಲ್ಲೇ ತಲ್ಲಣ ಮೂಡಿಸಿದ್ದ ಕರ್ನಾಟಕ ಪೊಲೀಸ್ ನೇಮಕಾತಿ ಹಗರಣಕ್ಕೆ ( psi scam Karnataka ) ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಇದೀಗ ಈ ಟ್ವಿಸ್ಟ್ ನಿಂದ ಮುಜುಗರಕ್ಕೆ ಒಳಗಾಗಲಿದೆ.
ಖಾಸಗಿ ಸುದ್ದಿ ವಾಹಿನಿಯೊಂದು ಈ ಸಂಬಂಧ ವರದಿ ಪ್ರಸಾರ ಮಾಡಿದ್ದು, ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಕಾಂಗ್ರೆಸ್ ಶಾಸಕನ ಪುತ್ರರ ಹೆಸರಿದೆ ಅಂದಿದೆ. ಈಗಾಗಲೇ ಬಂಧಿತನವಾಗಿರುವ ಆರ್ ಡಿ ಪಾಟೀಲ್ ( ರುದ್ರಪ್ಪ ದ್ಯಾಮಪ್ಪ ಪಾಟೀಲ್ ) ಕಾಂಗ್ರೆಸ್ ಶಾಸಕನ ಪುತ್ರನ ಹೆಸರನ್ನು ಬಹಿರಂಗಪಡಿಸಿದ್ದಾನೆ.
ಇದನ್ನೂ ಓದಿ : Vijay Mallya : ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ವಿಧಿಸಿದ ಸುಪ್ರೀಂಕೋರ್ಟ್
ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯ ಪ್ರಕಾರ ಅಪ್ಝಲ್ ಪುರ ಶಾಸಕ ಎಂ.ವೈ. ಪಾಟೀಲ್ ಪುತ್ರ ಅರುಣ್ ಕುಮಾರ್ ಪಾಟೀಲ್ ಈ ಹಗರಣದಲ್ಲಿ ಕಿಂಗ್ ಪಿನ್ ಅನ್ನಲಾಗಿದೆ. ಅಪ್ಪನ ಗನ್ ಮ್ಯಾನ್ ಹಯ್ಯಾಳಿ ದೇಸಾಯಿಯನ್ನು ಪಿಎಸ್ಐ ಮಾಡಲು ಅರುಣ್ ಪಾಟೀಲ್ ಈ ಅಕ್ರಮ ಎಸಗಿದ್ದರು ಎಂದು ಗೊತ್ತಾಗಿದೆ. ಜೊತೆಗೆ ಹಯ್ಯಾಳಿ ದೇಸಾಯಿ ಕಡೆಯಿಂದ 10 ಲಕ್ಷ ರೂಪಾಯಿ ಪಡೆದು ಅದನ್ನು ಅರುಣ್ ಕುಮಾರ್ ಪಾಟೀಲ್ ಗೆ ತಾನೇ ತಲುಪಿಸಿರುವುದಾಗಿ ಆರ್,ಡಿ.. ಪಾಟೀಲ್ ಹೇಳಿದ್ದು, ಈ 10 ಲಕ್ಷ ರೂಪಾಯಿ ಹಣವನ್ನು ಅರುಣ್ ಕುಮಾರ್ ಪಾಟೀಲ್ ಹಾಗೂ ಅವರ ತಮ್ಮ ಮಹಾಂತೇಶ್ ಪಾಟೀಲ್ ಹಂಚಿಕೊಂಡಿದ್ದಾರೆ ಎಂದು ರುದ್ರಪ್ಪ ದ್ಯಾಮಪ್ಪ ಪಾಟೀಲ್ ಹೇಳಿಕೆಯನ್ನು ಕೊಟ್ಟಿದ್ದಾನೆ.
ಜೊತೆಗೆ ಎಂವೈ ಪಾಟೀಲ್ ಅವರಿಗೂ ಈ ವ್ಯವಹಾರ ಗೊತ್ತಿತ್ತು ಅಂದಿರುವ ರುದ್ರಪ್ಪ ದ್ಯಾಮಪ್ಪ ಪಾಟೀಲ್ ಪಿಎಸ್ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ನೆರಳಿದೆ ಅನ್ನುವುದಕ್ಕೆ ಸಾಕ್ಷಿ ಕೊಟ್ಟಿದ್ದಾನೆ.
Vijay Mallya : ನ್ಯಾಯಾಂಗ ನಿಂದನೆ ಪ್ರಕರಣ – ವಿಜಯ್ ಮಲ್ಯಗೆ ನಾಲ್ಕು ತಿಂಗಳು ಜೈಲು ವಿಧಿಸಿದ ಸುಪ್ರೀಂಕೋರ್ಟ್
ನವದೆಹಲಿ : 9 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂಕೋರ್ಟ್ ಶಾಕ್ ಕೊಟ್ಟಿದೆ. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ವಿಜಯ್ ಮಲ್ಯಗೆ 4 ತಿಂಗಳ ಜೈಲು ವಿಧಿಸಿದೆ.
2017ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಈ ಶಿಕ್ಷೆ ವಿಧಿಸಲಾಗಿದ್ದು, ಮದ್ಯದ ದೊರೆ ವಿಜಯ್ ಮಲ್ಯಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಜೊತೆಗೆ 2,000 ರೂ ದಂಡ ವಿಧಿಸಲಾಗಿದೆ. 2017ರಲ್ಲಿ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಮಲ್ಯ ಅವರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಈ ಹಣಕಾಸು ವರ್ಗಾವಣೆ ಸಂಬಂಧ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟ ಆರೋಪಕ್ಕೆ ಮಲ್ಯ ಗುರಿಯಾಗಿದ್ದರು. ಹೀಗಾಗಿ ನ್ಯಾಯಾಲಯದ ವಿಧಿಸಿದ ದಂಡವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇಡಬೇಕು. ತಪ್ಪಿದಲ್ಲಿ ಎರಡು ತಿಂಗಳ ಶಿಕ್ಷೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಇನ್ನು ಮಲ್ಯ ಅವರ ಮಕ್ಕಳಿಗೆ ಮಾಡಿದ 40 ಮಿಲಿಯನ್ ಡಾಲರ್ ವಹಿವಾಟು ಅನೂರ್ಜಿತವಾಗಿದ್ದು, ನಾಲ್ಕು ವಾರಗಳ ಒಳಗೆ ವಸೂಲಾತಿ ಅಧಿಕಾರಿಗೆ ಶೇ.8 ರಷ್ಟು ಬಡ್ಡಿಯೊಂದಿಗೆ ಈ ಮೊತ್ತವನ್ನು ಹಿಂದಿರುಗಿಸುವಂತೆಯೂ ಆದೇಶಿಸಿದೆ. ಒಂದು ವೇಳೆ ಮೊತ್ತ ಹಿಂತಿರುಗಿಸದಿದ್ದರೆ ಮಲ್ಯ ಅವರ ಆಸ್ತಿಯನ್ನು ಜಪ್ತಿ ಮಾಡುವ ಅಧಿಕಾರವನ್ನು ಸಂಬಂಧ ಪಟ್ಟ ಇಲಾಖೆಗೆ ನೀಡಿದೆ.
ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಮತ್ತು ಪಿ.ಎಸ್.ನರಸಿಂಹ ಅವರನ್ನೊಳಗೊಂಡ ಪೀಠದಿಂದ ಈ ಆದೇಶ ಹೊರ ಬಿದ್ದಿದೆ.
Discussion about this post