ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಗೆ ಇನ್ನು ಮೂರು ದಿನಗಳು ಬಾಕಿ. ಈಗಾಗಲೇ ಮೋದಿ ಸ್ವಾಗತಕ್ಕೆ ಸಕಲ ಸದ್ದತೆಗಳಾಗಿದ್ದು, ಪ್ರಧಾನಿ ಬರುತ್ತಿರುವ ಹಿನ್ನಲೆಯಲ್ಲಿ ರಸ್ತೆಗಳಿಗೆಲ್ಲಾ ಡಾಂಬರು ಭಾಗ್ಯ ಸಿಕ್ಕಿದೆ.
ಈ ನಡುವೆ ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ವಾರ್ತಾ ಇಲಾಖೆಯಿಂದ ಆದೇಶವೊಂದು ಹೊರ ಬಿದ್ದಿದ್ದು, ಪ್ರಧಾನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಪಾಸ್ ಪಡೆದಿರುವ ಪತ್ರಕರ್ತರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಈ ಆದೇಶದ ಕಾರಣ, ಸಿಎಂ ಬಸವರಾಜ ಬೊಮ್ಮಾಯಿ, ಅವರ ಸಂಪುಟ ಸಹೋದ್ಯೋಗಿಗಳು, ಬಿಜೆಪಿ ಮುಖಂಡರು, ಪೊಲೀಸ್ ಅಧಿಕಾರಿಗಳು ಕೊರೋನಾ ಟೆಸ್ಟ್ ಗೆ ಒಳಗಾಗಬೇಕಾಗಿದೆ.
ಈ ನಡುವೆ ಮೈಸೂರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಎರಡು ಡೋಸ್ ಲಸಿಕೆ ಪಡೆದ ಸರ್ಟಿಫಿಕೆಟ್ ಹೊಂದಿದ್ರೆ ಸಾಕು ಎಂದು ಸೂಚಿಸಲಾಗಿದೆ. ಬೆಂಗಳೂರಿಗೊಂದು ಮೈಸೂರಿಗೊಂದು ರೂಲ್ಸ್ ತಂದಿರುವುದು ಇದೀಗ ಗೊಂದಲಕ್ಕೆ ಕಾರಣವಾಗಿದೆ.
Discussion about this post