ಅಯೋಧ್ಯೆ ಶ್ರೀರಾಮನ ನೆನಪಲ್ಲಿ ಮಗು ಪಡೆಯಲು ಸಿಸೇರಿಯನ್ ಹೆರಿಗೆಗೆ ಬೇಡಿಕೆ
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯುವ ದಿನಕ್ಕಾಗಿ ಇಡೀ ದೇಶ ಕಾಯುತ್ತಿದೆ. ಹಲವು ನೂರು ವರ್ಷಗಳ ಕನಸು ನನಸಾಗುವ ಕ್ಷಣಕ್ಕಾಗಿ ಭಾರತ ಎದುರು ನೋಡುತ್ತಿದೆ.
ಇದನ್ನೂ ಓದಿ : ದೇಶ ಟೀಕಿಸಿದವರ ಬಗ್ಗೆ ಕನ್ನಡದ ಸೆಲೆಬ್ರೆಟಿಗಳ ದಿವ್ಯ ಮೌನ – boycott maldives
ಈ ನಡುವೆ ಶ್ರೀರಾಮನ ವಿಗ್ರಹದ ಪ್ರಾಣಪ್ರತಿಷ್ಠೆಯ ದಿನದಂದೇ ತಮಗೆ ಹೆರಿಗೆ ಮಾಡಿಸಬೇಕು ಎಂದು ಅನೇಕ ಗರ್ಭಿಣಿಯರು ವೈದ್ಯರಿಗೆ ದುಂಬಾಲು ಬೀಳುತ್ತಿದ್ದಾರಂತೆ. ಇಂತಹುದೊಂದು ಕುತೂಹಲಕರ ಪ್ರಸಂಗ ಉತ್ತರ ಪ್ರದೇಶದ ಕಾನ್ಪುರದಿಂದ ವರದಿಯಾಗಿದೆ.
ಜನವರಿ 22 ರಂದು ಶುಭ ದಿನವಾಗಿದ್ದು, ಅಂದೇ ಮಗು ಜನಿಸಿದ್ರೆ ಶುಭಕರ ಮತ್ತು ಶ್ರೇಷ್ಟ ಎಂದು ಅನೇಕ ಮಹಿಳೆಯರು ಭಾವಿಸಿದ್ದಾರೆ. ಹೀಗಾಗಿಯೇ ಊ ಬೆಳವಣಿಗೆ ನಡೆದಿದೆ. ಕಾನ್ಪುರದ ಗಾಯತ್ರಿ ಶಂಕರ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಆಸ್ಪತ್ರೆಯಲ್ಲಿ ಜನವರಿ 22 ರಂದು 35 ಸಿಸೇರಿಯನ್ ಹೆರಿಗೆ ಮಾಡಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸ್ಥಳೀಯ ಸುದ್ದಿ ಸಂಸ್ಥೆಗೆ ಆಸ್ಪತ್ರೆಯ ( Ganesh Shankar Vidyarthi Memorial Medical College ) ಸ್ತ್ರೀರೋಗ ತಜ್ಞೆ ಡಾ. ಸೀಮಾ ದ್ವಿವೇದಿ ಮಾಹಿತಿ ಕೊಟ್ಟಿದ್ದಾರೆ.
Families of pregnant women want a child in the form of Lord Ram to be born in their homes. So, they are asking doctors to plan operations on January 22, the day of Ramlalla consecration in Ayodhya. If more operations have to be done on this day, the facilities are ready, said Dr Seema Dwivedi, Kanpur. The operations can be performed on women who are fit on that day, she said.
Discussion about this post