ಬೊಮ್ಮಾಯಿ ರಾಜೀನಾಮೆ ಕೊಟ್ಟ ಮರು ದಿನವೇ ಉದ್ಯೋಗವನ್ನೂ ಕಳೆದುಕೊಳ್ಳಬೇಕಾಗುತ್ತದೆ ( praveen nettar )
ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಿಸಿದಂತೆ ದುಷ್ಕರ್ಮಿಗಳ ಷಡ್ಯಂತ್ಯಕ್ಕೆ ಬಲಿಯಾದ ಬಿಜೆಪಿ ಯುವಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ತಮ್ಮ ಕಚೇರಿಯಲ್ಲಿ ಕೆಲಸ ಕೊಡಿಸಿದ್ದಾರೆ. ಈ ಸಂಬಂಧ ಆದೇಶ ಕೂಡಾ ಹೊರ ಬಿದ್ದಿದ್ದು, 30, 350 ರೂಪಾಯಿ ಮಾಸಿಕ ವೇತನವನ್ನೂ ನಿಗದಿಗೊಳಿಸಲಾಗಿದೆ. ( praveen nettar)
ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಗ್ರೂಪ್ ಸಿ ಹುದ್ದೆಯನ್ನು ನಿಭಾಯಿಸಲಿದ್ದಾರೆ.
2022ರ ಜುಲೈ 26 ರಂದು ಅಮಾಯಕ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಕಾರಣವಿಲ್ಲದೆ ಕೊಲೆ ಮಾಡಿದ್ದರು. ದುಷ್ಕರ್ಮಿಗಳ ಪೈಶಾಚಿಕ ಕೃತ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತ್ರವಲ್ಲದೆ ಬಿಜೆಪಿ ನಾಯಕರ ವಿರುದ್ಧವೇ ಕಾರ್ಯಕರ್ತರು ತಿರುಗಿ ಬಿದ್ದಿದ್ದರು. ನಳಿನ್ ಕುಮಾರ್ ಕಟೀಲು ಅವರ ಕಾರು ಬಡುಮೇಲಾಗುವುದೊಂದು ಬಾಕಿ ಇತ್ತು. ಅಷ್ಟೇ ಅಲ್ಲದೆ ನೆಟ್ಟಾರು ಅಂತಿಮ ದರ್ಶನಕ್ಕೆ ಬಂದ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಲಾಠಿ ರುಚಿ ಬೇರೆ ತೋರಿಸಿತ್ತು.
ಇದೀಗ ನೆಟ್ಟಾರು ಪತ್ನಿಗೆ ಉದ್ಯೋಗ ಕೊಟ್ಟಿರುವುದನ್ನು ದೊಡ್ಡ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಕಾರ್ಯಕರ್ತರ ಹಿತರಕ್ಷಣೆಗೆ ಬಿಜೆಪಿ ಬದ್ಧ ಎಂದು ಹೇಳಲಾಗಿದೆ. ಹಾಗಾದ್ರೆ ಪಕ್ಷಕ್ಕಾಗಿ ದುಡಿದು ಮಡಿದ ಉಳಿದ ಕಾರ್ಯಕರ್ತರ ಮನೆಯವರು ಮಾಡಿದ ಪಾಪವೇನು ಅನ್ನುವ ಸಣ್ಣ ಅಸಮಾಧಾನದ ದನಿಯೊಂದು ಕೇಳಲಾರಂಭಿಸಿದೆ.
ಮತಾಂಧರಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಎಂ. ಅವರನ್ನು ಮುಖ್ಯಮಂತ್ರಿ ಶ್ರೀ @BSBommai ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
— BJP Karnataka (@BJP4Karnataka) September 29, 2022
ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಬಿಜೆಪಿ. pic.twitter.com/P0Xl3F4vmb
ಅದೇನೆ ಇರಲಿ ಆದರೆ ನೆಟ್ಟಾರು ಪತ್ನಿಗೆ ಕೊಟ್ಟಿರುವ ಉದ್ಯೋಗದ ಅವಧಿ ಎಲ್ಲಿ ತನಕ. ಈಗಾಗಲೇ ಮುಖ್ಯಮಂತ್ರಿ ಸಚಿವಾಲಯದಲ್ಲಿ 115 ಮಂದಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲರೂ ಮಾನ್ಯ ಮುಖ್ಯಮಂತ್ರಿಯವರ ಪದಾವಧಿ ಎಲ್ಲಿ ತನಕ ಇರುತ್ತದೋ ಅಥವಾ ಮುಂದಿನ ಆದೇಶದ ತನಕ ಮಾತ್ರ ಅವರು ಸಿಎಂ ಕಚೇರಿಯಲ್ಲಿ ಗುತ್ತಿಗೆ ನೌಕರರಾಗಿರುತ್ತಾರೆ. ಬೊಮ್ಮಾಯಿವವರು ಅಧಿಕಾರದಿಂದ ಕೆಳಗಳಿಯುತ್ತಿದ್ದಂತೆ ಗುತ್ತಿಗೆ ನೌಕರರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಿಡುಗಡೆ ಮಾಡುತ್ತಿದೆ. ಬಿಡುಗಡೆ ಮಾಡದೆ ಇದ್ದರೂ ಮುಂದಿನ ದಿನಗಳಲ್ಲಿ ಬಿಜೆಪಿಯೇತರ ಮುಖ್ಯಮಂತ್ರಿ ಅಥವಾ ಬೊಮ್ಮಾಯಿ ಹೊರತು ಪಡಿಸಿ ಬೇರೆ ಮುಖ್ಯಮಂತ್ರಿಗಳು ಬಂದರೆ ಈ 115 ಮಂದಿಯನ್ನು ಮುಂದುವರಿಸೋದಿಲ್ಲ. ತಮ್ಮ ಕಡೆಯವರನ್ನು ಅವರು ನೇಮಿಸಿಕೊಳ್ಳುತ್ತಾರೆ. ಅಲ್ಲಿಗೆ ಅವರೆಲ್ಲರೂ ಉದ್ಯೋಗ ಕಳೆದುಕೊಳ್ಳುತ್ತಾರೆ.
ಹಾಗಾದ್ರೆ ಒಂದ್ಸಲ ಯೋಚಿಸಿ ನೆಟ್ಟಾರು ಪತ್ನಿಗೆ ಕೊಟ್ಟಿರುವ ಉದ್ಯೋಗದ ಭವಿಷ್ಯವೇನು. ಅದೇನೂ ಸರ್ಕಾರಿ ಉದ್ಯೋಗವಲ್ಲ, ಶಾಶ್ವತ ಉದ್ಯೋಗವಲ್ಲ.
Discussion about this post