Praveen Nettaru murder case ಇಬ್ಬರು ಆರೋಪಿಗಳ ಬಂಧನದ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ
ಪುತ್ತೂರು : ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru murder case) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಸುಳ್ಯ ನಾವೂರಿನ ಅಬಿದ್ (22) ( Abid (22), son of Yakub, a resident of Mahamayi temple Navoor ) ಮತ್ತು ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್ (28) ( Naufal (28), son of Mohammed of Gaurihole,Bellare) ಎಂದು ಗುರುತಿಸಲಾಗಿದೆ.

ಈ ಬಗ್ಗೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದೇ ಪ್ರಕರಣ ಸಂಬಂಧ ಜುಲೈ 28 ರಂದು ಸವಣೂರಿನ ಜಾಕಿರ್ (29) ಮತ್ತು ಬೆಳ್ಳಾರೆಯ ಶಫೀಕ್ (27) ಎಂಬವರನ್ನು ಬಂಧಿಸಲಾಗಿತ್ತು. ಬಳಿಕ ಆಗಸ್ಟ್ 2 ರಂದು ಬೆಳ್ಳಾರೆ ಪಳ್ಳಿಮಜಲಿನ ಸದ್ದಾಂ (32) ಮತ್ತು ಹ್ಯಾರಿಸ್ (42) ಎಂಬವರನ್ನು ಬಂಧಿಸಲಾಗಿತ್ತು. ಈ ಮೂಲಕ ಬಂಧಿತರ ಸಂಖ್ಯೆ 6 ಕ್ಕೆ ಏರಿದೆ.

ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಈ ನಡುವೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ NIAಗೆ ಹಸ್ತಾಂತರವಾಗಿದ್ದು, ಮತ್ತಷ್ಟು ಕಠಿಣ ಕ್ರಮಗಳು ಜಾರಿಯಾಗುವ ಸಾಧ್ಯತೆಗಳಿದೆ.
Discussion about this post