ಕರಾವಳಿಯ ಬಿಜೆಪಿ ಶಾಸಕರ ವಿರುದ್ಧ ಬಿಜೆಪಿ ಕಾರ್ಯಕರ್ತರೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. (Praveen nettar murder) ಓಟು ಕೇಳಲು ನಾವು ಬೇಕು, ಚುನಾವಣೆ ಬಂದಾಗ ನಾವು ಬೇಕು, ಈಗ ಬೇಡ ಅಂದಿದ್ದಾರೆ
ಮಂಗಳೂರು : ಬಿಜೆಪಿ ಭದ್ರಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಶಾಸಕರ ವಿರುದ್ಧ ಸಿಡಿದೆದ್ದಿದ್ದಾರೆ. (Praveen nettar murder)ನಮ್ಮ ಶ್ರಮದಿಂದ ಗೆದ್ದವರು ನಮ್ಮನ್ನು ಮರೆತು ಬಿಟ್ರಲ್ಲ ಅನ್ನುವುದೇ ಇವರ ಆಕ್ರೋಶ.
ಮಂಗಳವಾರ ರಾತ್ರಿ ಬೆಳ್ಳಾರೆಯಲ್ಲಿ ಕೊಲೆಯಾದ ಪ್ರವೀಣ್ ನೆಟ್ಟಾರು (Praveen nettar murder) ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಾತ್ರಿಯೇ ಅವರು ಮೃತಪಟ್ಟಿದ್ದರು. ಈ ವೇಳೆ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ಪ್ರತಿಭಟನೆ ಕೂಡಾ ನಡೆಸಿದ್ದರು. ಈ ಸಂದರ್ಭದಲ್ಲಿ ಎಚ್ಚರಿಕೆ ಹೆಜ್ಜೆ ಇಟ್ಟ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ : Zee Kannada : ಯಕ್ಷಗಾನಕ್ಕೆ ಅವಮಾನ : ಝೀ ಕನ್ನಡ ವಿರುದ್ಧ ಸಿಡಿದೆದ್ದ ಕರಾವಳಿ
ಬಿಜೆಪಿ ಯುವ ಮುಖಂಡನ (Praveen nettar murder) ಕೊಲೆಯಾದ ಕಾರಣ, ಕರಾವಳಿಯ ಶಾಸಕರು, ಪಕ್ಷದ ಮುಖಂಡರು ಆಸ್ಪತ್ರೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ ಯಾರು ಕೂಡಾ ಕಾರ್ಯಕರ್ತರಿಗೆ ಸ್ಪಂದಿಸುವ ಕೆಲಸ ಮಾಡಲಿಲ್ಲ. ಬೆಳಗ್ಗೆ 10 ಗಂಟೆಗೆಲ್ಲಾ ಶಾಸಕರು ಪುತ್ತೂರಿಗೆ ಬರ್ತಾರೆ ಎಂದು ಹೇಳಲಾಗಿತ್ತು. ಆದರೆ ಯುವ ಮುಖಂಡನ ಪಾರ್ಥಿವ ಶರೀರ ನೋಡಲು ಯಾವ ಶಾಸಕನೂ ಬರಲಿಲ್ಲ.
ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಆಸ್ಪತ್ರೆ ಮುಂಭಾಗದಲ್ಲೇ ಶಾಸಕರ ಪರವಾಗಿ ಬಂದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ಪ್ರವೀಣ್ ಅವರ ಪಾರ್ಥಿವ ಶರೀರದ ಮೆರವಣಿಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಿಂದ ಹುಟ್ಟೂರು ತನಕ ಸಾಗಿದೆ. ಸಾಗುವ ಹಾದಿಯ ಅನೇಕ ಕಡೆಗಳಲ್ಲಿ ಜನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮತ್ತೆ ಹುಟ್ಟಿ ಬಾ ಎಂದು ಹರಸಿ ಹಾರೈಸಿದ್ದಾರೆ. ಆಗ್ಲೂ ಕಾರ್ಯಕರ್ತರ ಬೆವರ ಹನಿಯಿಂದ, ಕಾರ್ಯಕರ್ತರ ಶ್ರಮದಿಂದ ಗೆದ್ದವರ ಸುಳಿವು ಇರಲಿಲ್ಲ.
ಒಂದೆಡೆ ಪ್ರವೀಣ್ ನನ್ನು ಕಳೆದುಕೊಂಡ ನೋವು, ಮತ್ತೊಂದು ಕಡೆ ನಾಯಕರ ನಿರ್ಲಕ್ಷ್ಯದ ಬೇಸರ ಕಾರ್ಯಕರ್ತರಲ್ಲಿ ಮಡುಗಟ್ಟಿತ್ತು. ಅದು ಯಾವಾಗ ಸ್ಫೋಟಗೊಳ್ಳುತ್ತದೋ ಗೊತ್ತಿಲ್ಲ.
Discussion about this post