ಬಿಗ್ ಬಾಸ್ ಆಟ ಅಂದ್ರೆ ಹೀಗೆ, ಮುಖದ ಹಿಂದಿನ ಮುಖವಾಡವನ್ನು ಕಳಚುವುದೇ ಆಟದ ರಹಸ್ಯ.ಮಹಾಮನೆ ಪ್ರವೇಶಿಸುವ ಮುನ್ನ ಅದೆಷ್ಟೇ ಸ್ಟ್ಯಾಟರ್ಜಿ ಮಾಡಿಕೊಂಡು ಹೋಗಿರಲಿ, ಮನೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಅಸಲಿ ಮುಖ ಪರಿಚಯವಾಗಿ ಬಿಡುತ್ತದೆ.ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಂಡ ಪ್ರಶಾಂತ್ ಸಂಬರಗಿ ಕಥೆಯೂ ಹೀಗೆ ಆಗಿದೆ.
ಈ ವ್ಯಕ್ತಿ ಹೊರಗಡೆ ಇದ್ದಷ್ಟು ದಿನ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿತ್ತು. ಅರ್ಜುನ್ ಸರ್ಜಾ ಪರ ನಿಂತ ರೀತಿ ಇರಬಹುದು, ಡ್ರಗ್ಸ್ ರಾಣಿಯರೆಂದು ಕರೆಸಿಕೊಂಡವರ ವಿರುದ್ಧದ ಹೋರಾಟವಿರಬಹುದು. ಆದರ ಈಗ ಬಿಗ್ ಬಾಸ್ ಮನೆಗೆ ಹೋದವರೇ ಇದೀಗ ಟ್ರೋಲ್ ಪೇಜ್ ಗಳಿಂದ ಹಿಗ್ಗಾಮುಗ್ಗಾ ಉಗಿಸಿಕೊಳ್ಳಲಾರಂಭಿಸಿದ್ದಾರೆ.
ಸಾಮಾಜಿಕ ಹೋರಾಟಗಾರ ಎಂದು ಕರೆಸಿಕೊಂಡವರು ಸಮಾಜಕ್ಕೆ ಆದರ್ಶವಾಗಿರಬೇಕಿತ್ತು. ಆದರೆ ದಿವ್ಯಾ ಉರುಡುಗ ಅನ್ನುವ ಹುಡುಗಿಯೊಂದಿಗೆ ಅವರು ನಡೆದುಕೊಂಡ ರೀತಿ, ಈ ಹುಡುಗಿಯೊಂದಿಗೆ ಕುಳಿತ ಶೈಲಿ ವೀಕ್ಷಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಮೊದಲ ದಿನವೇ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ನಾಮಿನೇಟ್ ಮಾಡುವ ಸಂದರ್ಭದಲ್ಲಿ, ಮಂಜು ಪಾವಗಡ ಅವರನ್ನು ಸಂಬರಗಿ ಅಧಿಕ ಪ್ರಸಂಗಿ ಎಂದು ಕರೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜನರನ್ನು ರಂಜಿಸಬಲ್ಲ ವ್ಯಕ್ತಿಯನ್ನೇ ಅಧಿಕ ಪ್ರಸಂಗಿ ಎಂದು ಕರೆದಿದ್ದು ವೀಕ್ಷಕರಿಗೆ ಕಿರಿ ಕಿರಿ ಉಂಟು ಮಾಡಿದೆ. ಹಾಗಾದ್ರೆ ದಿವ್ಯಾ ಉರುಡುಗ ಅವರನ್ನು ಎತ್ತಿಕೊಂಡು ಹೋಗಿದ್ದು ಅಧಿಕ ಪ್ರಸಂಗವಲ್ಲವೇ, ಪರಿಚಯವಾದ ಮೊದಲ ದಿನವೇ ದಿವ್ಯಾ ಅವರೊಂದಿಗೆ ಸಿಕ್ಕಾಪಟ್ಟೆ ಆತ್ಮೀಯತೆ ತೋರಿದ್ದು ಅಧಿಕ ಪ್ರಸಂಗವಲ್ಲವೇ ಎಂದು ಜನ ಪ್ರಶ್ನಿಸುತ್ತಿದ್ದಾರೆ. ತಾನೊಬ್ಬ ದೊಡ್ಡ ವಾಸ್ತು ತಜ್ಞನಂತೆ ಪೋಸು ಕೊಟ್ಟಿರುವ ಸಂಬರಗಿ ವಿರುದ್ಧ ಟ್ರೋಲ್ ಗಳ ಸುರಿಮಳೆಯಾಗುತ್ತಿದೆ.
Discussion about this post