ಯಾರಾದ್ರೂ ಬೆಳೆಯುತ್ತಿದ್ದಾರೆ ಅಂದ್ರೆ ಅವರ ಕಾಲೆಳೆಯುವ ಪಾಪಿಗಳು ಜಗತ್ತಿನಲ್ಲಿದ್ದಾರೆ. ಉಳಿದವರ ಏಳಿಗೆಯನ್ನು ಕಂಡು ತಾವು ಬೆಳೆಯಬೇಕು ಅನ್ನುವ ಛಲ ಇವರಲ್ಲಿ ಮೂಡುವುದಿಲ್ಲ. ಬದಲಾಗಿ ಬೆಳೆಯುವವನನ್ನು ಕೆಳಗಿಳಿಸುವುದು ಹೇಗೆ ಅನ್ನುವುದೇ ಇವರಿಗೆ ಯೋಚನೆ.
ಬಿಗ್ ಬಾಸ್ ಮನೆಗೆ ಹೋದ ಸ್ಪರ್ಧಿಗಳ ಕಥೆಯೂ ಹಾಗಿದ್ದು ಹೀಗೆ, ಸ್ಪರ್ಧಿಗಳ ಪಾಸ್ಟ್ ಲೈಫ್ ಗಳನ್ನು ಕೆದಕಿದ ಕೆಲ ದುಷ್ಟರು, ಸಾಮಾಜಿಕ ಜಾಲತಾಣಗಳಲ್ಲಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಯತ್ನ ನಡೆಸಿದರು. ಫೋಟೋ ಹಿಂದಿನ ಅಸಲಿ ಕಥೆಯೇನು ಅನ್ನುವುದು ಅವರಿಗೆ ಬೇಕಿರಲಿಲ್ಲ, ಬದಲಾಗಿ ಈ ದುಷ್ಟರ ಕೂಟವೇ ಅದಕ್ಕೆ ಕಥೆ ಕಟ್ಟಿತು. ಹಾಗೇ ನೋಡಿದರೆ ಪಾಸ್ಟ್ ಲೈಫ್ ಕೆದಕುವ ಪಾಪಿಗಳಿಗೆ ಸರಿಯಾದ ಶಿಕ್ಷೆಯಾಗಲೇಬೇಕು.
ದಿವ್ಯಾ ಉರುಡುಗ ಅವರ ಪರಿಸ್ಥಿತಿಯೂ ಹೀಗೆ ಆಯ್ತು. ಕೊನೆಗೆ ಮಗಳ ಹೆಸರು ಕೆಡಿಸುವವರ ವಿರುದ್ಧ ಪೋಷಕರು ಕೋರ್ಟ್ ಮೆಟ್ಟಿಲು ಹತ್ತಬೇಕಾಗಿ ಬಂತು. ಕೆಲ ಟ್ರೋಲ್ ಪೇಜ್ ಗಳು ನೈತಿಕತೆಯನ್ನು ಮರೆತು ಈ ಪೋಟೋಗಳನ್ನು ಪ್ರಕಟಿಸಿತು. ಈ ನಡುವೆಈ ಫೋಟೋಗಳು ಲೀಕ್ ಆಗಿರುವುದರ ಹಿಂದೆ ಪ್ರಶಾಂತ್ ಸಂಬರಗಿ ಇದೆ ಅನ್ನುವ ಮಾತುಗಳು ಕೇಳಿ ಬಂತು. ಅದರಲ್ಲೂ ಬಿಗ್ ಬಾಸ್ ಮನೆಯಿಂದ ಹೊರ ಬಂದ ಚಂದ್ರಚೂಡ್ ಆಡಿದ ಮಾತುಗಳು ಪರೋಕ್ಷವಾಗಿ ಈ ಸಂಶಯ ಮೂಡಿಸುವಂತೆ ಮಾಡಿತ್ತು. ಈ ಸಂಶಯ ಮೂಡಿದ ಸಂದರ್ಭದಲ್ಲಿ ನಾನು ಪ್ರಶಾಂತ್ ಸಂಬರಗಿಯವರನ್ನು ಉಲ್ಲೇಖಿಸಿಲ್ಲ ಎಂದು ಚಂದ್ರಚೂಡ್ ಹೇಳಲಿಲ್ಲ ಕೂಡಾ.
ಈ ನಡುವೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಉರುಡುಗ ಫೋಟೋ ಹಿಂದೆ ತನ್ನ ಹೆಸರು ಬಂದಿರುವುದಕ್ಕೆ ಖಾಸಗಿ ವಾಹಿನಿಯೊಂದಕ್ಕೆ ಸ್ಪಷ್ಟನೆ ಕೊಟ್ಟಿರುವ ಪ್ರಶಾಂತ್ ಸಂಬರಗಿ, ನಾನು ಅಂತ ನೀಚ ಕೆಲಸ ಮಾಡುವುದಿಲ್ಲ. ಹಾಗೇ ಮಾಡುವುದರಿಂದ ನನಗೇನು ಲಾಭವೂ ಇಲ್ಲ, ಹಾಗೇ ಮಾಡಿದ ತಕ್ಷಣ ಅವರಿಗೆ ಬರುವ ಮತಗಳ ಸಂಖ್ಯೆಯೂ ಕಡಿಮೆಯಾಗುವುದಿಲ್ಲ.ಅಪಾದನೆ ಮಾಡುವವರು ಮಾಡ್ತಾರೆ, ತಾಕತ್ತಿದ್ರೆ ಆ ಬಗ್ಗೆ ಸಾಕ್ಷಿ ಇದ್ರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
Discussion about this post