ಬಿಗ್ ಬಾಸ್ ಆಟ ಮುಗಿದಿದೆ. ಅತ್ಯಂತ ಕೆಟ್ಟ ಸೀಸನ್ ಇದು ಅಂದ್ರೆ ತಪ್ಪಿಲ್ಲ. ಆಟ ಮುಗಿದ ಮೇಲೂ ಮನೆಯಿಂದ ಹೊರ ಬಂದಿರುವ ಸದಸ್ಯರು ಇನ್ನೂ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ.
ಈ ನಡುವೆ ಚಕ್ರವರ್ತಿ ಮಾತನ್ನು ನಂಬಿ ನಾನು ಕೆಟ್ಟೆ ಎಂದು ಪ್ರಶಾಂತ್ ಸಂಬರಗಿ ವಿಷಾಧ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು 72 ದಿನದಲ್ಲಿ ಮೊದಲ 20 ದಿನ ಮಂಜು ಜೊತೆಗೆ ಚೆನ್ನಾಗಿದೆ ಅಕ್ಕ ಪಕ್ಕದ ಬೆಡ್ ನಾವಿಬ್ಬರೂ ಮಲಗಿದ್ದೇವು. ಪರಸ್ಪರ ಜೋಕ್ ಮಾಡುತ್ತಿದ್ದೇವು. ಮಾವ.. ಮಾವ ಅಂತಾ ಬಾಯಿ ತುಂಬಾ ಕರೆಯುತ್ತಿದ್ದ. ನಾನು ಕೂಡಾ ಹೆಣ್ಣು ಕೊಟ್ಟ ಮಾವನ ರೀತಿಯೇ ಆಡುತ್ತಿದ್ದೆ. ಅನೇಕ ಬಾರಿ ನನ್ನ ಬಕ್ರ ಮಾಡುತ್ತಿದ್ದ. ತುಂಬಾ ಖುಷಿಯಾಗಿದ್ದೆವು.
ಆದರೆ ಯಾವಾಗ ಚಕ್ರವರ್ತಿ ಒಳಗೆ ಬಂದರೋ, ಮಾವ ಅಂತಾ ಕರೆಸಿಕೊಳ್ಳಬೇಡ. ಅದು ತುಂಬಾ ನೆಗೆಟಿವ್ ಶಬ್ಧ. ಇಡೀ ಕರ್ನಾಟಕ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದೆ, ನಾನು ನೋಡಿಕೊಂಡು ಬಂದೆ, ಮಾವ ಅನ್ನುವುದು ಆಶ್ಲೀಲ ಪದ ದಂಧೆಗೆ ಬಳಸುವ ಪದ, ಹಾಗೆಲ್ಲಾ ಕರೆಸಿಕೊಳ್ಳಬೇಡ ಅಂದ್ರು.
ಜೊತೆಗೆ ಮಂಜು ನಿನ್ನ ಮುಂದೆ ಮಾತ್ರ ಚೆನ್ನಾಗಿದ್ದಾನೆ, ನಿನ್ನ ಹಿಂದೆ ಏನೆಲ್ಲಾ ಮಾತನಾಡುತ್ತಿದ್ದಾನೆ. ಟಿವಿಯಲ್ಲಿ ತೋರಿಸಿದ್ದಾರೆ ಎಂದು ಅವರು ಹೇಳಿದ್ರು. ಆದರೆ ಅವರು ಹೇಳಿದ್ದನ್ನು ನಾನು ನಂಬಬಾರದಾಗಿತ್ತು, ನಂಬಿ ಕೆಟ್ಟೆ ಎಂದು ಭಾವುಕರಾಗಿದ್ದಾರೆ.
Discussion about this post