ನವದೆಹಲಿ : ದೇಶವಾಸಿಗಳ ಭವಿಷ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಪ್ರಕಟಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದುವರಿದು ಮತ್ತೊಂದು ಮಹತ್ವದ ಯೋಜನೆ ಪ್ರಕಟಿಸಿದೆ. ಈ ಯೋಜನೆ ಪ್ರಕಾರ ತಿಂಗಳಿಗೆ 100 ರೂ ಹೂಡಿಕೆ ಮಾಡಿ ವಾರ್ಷಿಕ 72 ಸಾವಿರ ತನಕ ಪಿಂಚಣಿ ಪಡೆಯಬಹುದಾಗಿದೆ.
ಈ ಬಗ್ಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಸಂತೋಷ್ ಕುಮಾರ್ ಗಂಗವಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಶ್ರಮ ಯೋಗಿ ಮಾಂದನ್ Pradhan Mantri Shram Yogi Maandhan Yojana ಹೆಸರಿನ ಯೋಜನೆ ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳಿಗೆ ಈ ರಾಷ್ಟೀಯ ಪಿಂಚಣಿ ಯೋಜನೆ ಲಭ್ಯ ಅಂದಿದ್ದಾರೆ.
30 ವರ್ಷವಾಗಿರುವ ವ್ಯಕ್ತಿ ಈ ಯೋಜನೆಗೆ ಸೇರಿದರೆ ಅವರು ಮಾಸಿಕ 100 ರೂ ಕಟ್ಟಬೇಕಾಗುತ್ತದೆ. ಅಂದರೆ ಒಂದು ವರ್ಷದಲ್ಲಿ 1200 ರೂಪಾಯಿ, 60 ವರ್ಷದ ತನಕ ಅವರು 36 ಸಾವಿರ ರೂಪಾಯಿ ಕಟ್ಟಬೇಕಾಗುತ್ತದೆ. 61ನೇ ವರ್ಷದಿಂದ ಅವರಿಗೆ 36 ಸಾವಿರ ವಾರ್ಷಿಕ ಪಿಂಚಣಿ ಲಭ್ಯವಾಗುತ್ತದೆ. ದಂಪತಿಗಳು ಈ ಯೋಜನೆಗೆ ಸೇರಿಕೊಂಡರೆ ವಾರ್ಷಿಕ 72 ಸಾವಿರ ರೂ ಪಿಂಚಣಿ ಸಿಗಲಿದೆ.
ಇನ್ನು ಈ ಯೋಜನೆಗೆ ಸೇರಿಕೊಳ್ಳಬಯಸುವವರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಕೇವಲ ಆಧಾರ್ ಹಾಗೂ ಉಳಿತಾಯ ಖಾತೆಗಳಿದ್ದರೆ ಕೆಲವೇ ನಿಮಿಷಗಳಲ್ಲಿ ಈ ಯೋಜನೆಯ ಸದಸ್ಯರಾಗಬಹುದಾಗಿದೆ. ಈ ಬಗ್ಗೆ Pradhan Mantri Shram Yogi Maandhan Yojana ವೆಬ್ ಸೈಟ್ ನಲ್ಲಿ ಮಾಹಿತಿಗಳು ಲಭ್ಯವಿದೆ.
Discussion about this post