ಭಾರತೀಯರ ಪ್ರಾಣ ಹಿಂಡಲು ಬಂದಿರುವ ಚೀನಾ ವೈರಸ್ ಕೊರೋನಾ ಮಣಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಪಣ ತೊಟ್ಟಿದ್ದಾರೆ. ಭಾರತೀಯರ ರಕ್ಷಣೆಗೆ ಕಂಕಣ ಬದ್ಧರಾಗಿರುವ ಅವರು ಈ ಹಿಂದೆಯೂ ಕೊರೊನಾ ವಿಚಾರವಾಗಿ ದೇಶವನ್ನು ಉದ್ದೇಶಿಸಿ ಮೊದಲ ಬಾರಿ ಮಾತನಾಡಿ ಒಂದು ದಿನದ ಜನತಾ ಕರ್ಫ್ಯೂ ಹಾಕಿದ್ದರು.
ಇದಾದ ನಂತರ ಎರಡನೇ ಬಾರಿ ಮಾತನಾಡಿದ್ದ ಮೋದಿ 21 ದಿನ ದೇಶವವನ್ನು ಲಾಕ್ಡೌನ್ ಮಾಡುವುದಾಗಿ ಘೋಷಣೆ ಮಾಡಿದ್ದರು.
ಕೊರೋನಾ ವಿರುದ್ಧ ಮೋದಿ ಕೈಗೆತ್ತಿಕೊಂಡ ಕಾರ್ಯಾಚರಣೆಗೆ ಭಾರತೀಯರು ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಮೋದಿ ಅಂದ್ರೆ ಕೆಂಡ ಕಾರುತ್ತಿದ್ದ ಮಂದಿ ಲಾಕ್ ಡೌನ್ ಮನವಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇಶದ ಒಳಿತಿಗಾಗಿ ಲಾಕ್ ಡೌನ್ ಅನಿವಾರ್ಯ. ಆದರೂ ಕೆಲ ಮೂಢರಿಗೆ ಇದು ಅರ್ಥವಾಗಿಲ್ಲ. ಹೀಗಾಗಿ ಕೊರೋನಾ ಸಂಪೂರ್ಣ ಮಣಿಸಲು ಸಾಧ್ಯವಾಗಲಿಲ್ಲ.
ಈ ನಡುವೆ ಕೊರೋನಾ ಹೋರಾಟದಲ್ಲಿ ಭಾರತ ಗೆದ್ದೆ ಬಿಡ್ತು ಅನ್ನುವಷ್ಟರಲ್ಲಿ ದೆಹಲಿಯ ನಿಜಾಮುದ್ದೀನ್ ಕಡೆಯಿಂದ ಕೊರೋನಾ ಅಟಂ ಬಾಂಬ್ ಸಿಡಿದಿದೆ.
ಈ ನಡುವೆ ಇಂದು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು ನಾಳೆ ದೇಶದ ಜನತೆಯೊಂದಿಗೆ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.
ಹಾಗಾದ್ರೆ ನಾಳಿನ ಸಂದೇಶದಲ್ಲಿ ಏನಿರಲಿದೆ ಅನ್ನುವುದೇ ಈಗಿನ ಕುತೂಹಲ. ಒಟ್ಟಿನಲ್ಲಿ ಅದು ಕೊರೋನಾ ವಿರುದ್ಧದ ಮತ್ತೊಂದು ಹೋರಾಟ ಅನ್ನುವುದರಲ್ಲಿ ಸಂಶಯವಿಲ್ಲ
Discussion about this post