ಬಿಜೆಪಿ ಭದ್ರಕೋಟೆಯಯನ್ನು ಛಿದ್ರ ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ. ಮತ್ತೊಂದು ಭದ್ರಕೋಟೆಯನ್ನು ಮತ್ತೆ ಗಟ್ಟಿಯಾಗಿಸಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದೆ.
ಈ ನಡುವೆ ಮಂಗಳೂರಿಗೆ ನರೇಂದ್ರ ಮೋದಿ ಆಗಮಿಸಿದ್ದು. ಕೇಂದ್ರ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿ ಹಿಂತಿರುಗಿದ್ದಾರೆ.
ಈ ನಡುವೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ರಸ್ತೆ ಮಾರ್ಗವಾಗಿ ಕೇಂದ್ರ ಮೈದಾನಕ್ಕೆ ಆಗಮಿಸಿದ್ದಾರೆ. ರಸ್ತೆಯುದ್ದಕ್ಕೂ ನಿಂತಿದ್ದ ಅಭಿಮಾನಿಗಳನ್ನು ಕಂಡ ಮೋದಿಗೆ ಆತಂಕ ಶುರುವಾಗಿದ್ದು, ಅರೇ ಇಷ್ಟೊಂದು ಜನ ಇಲ್ಲಿ ನಿಂತಿದ್ದಾರೆ. ಇನ್ನೂ ಮೈದಾನದಲ್ಲಿ ಯಾರು ಇರ್ತಾರೆ. ನಾನು ಯಾರಿಗೆ ಭಾಷಣ ಮಾಡಲಿ ಎಂದು ಅವರು ಆತಂಕಿತರಾಗಿದ್ದರಂತೆ.

ಇದನ್ನು ಅವರು ತಮ್ಮ ಭಾಷಣದಲ್ಲೂ ಉಲ್ಲೇಖಿಸಿದ್ದು, ಕಾರಿನಲ್ಲಿ ಬರಬೇಕಾದರೆ ಮಾನವನ ಸರಪಳಿಯಲ್ಲ, ಮಾನವ ಗೋಡೆಯನ್ನೇ ನಿರ್ಮಿಸಲಾಗಿತ್ತು. ನಾನು ಇದನ್ನ ನೋಡಿ, ಇನ್ನೂ ಮೈದಾನದಲ್ಲಿ ಯಾರು ಇರ್ತಾರೆ ಎಂದು ಯೋಚಿಸಿದ್ದೇ, ಆದರೆ ಇಲ್ಲಿ ಬಂದು ನೋಡಿದ್ರೆ ನಿಜಕ್ಕೂ ಅಚ್ಚರಿಯಾಯ್ತು, ಜನ ಸಾಗರವನ್ನು ಕಂಡು ಮನ ತುಂಬಿ ಬಂತು ಅಂದಿದ್ದಾರೆ.

ಈ ನಡುವೆ ಮೈದಾನದ ಸುತ್ತಲಿನ ಮರ ಹತ್ತಿದ ಅಭಿಮಾನಿಗಳನ್ನು ಕಂಡು, ಅವರ ಕಾಳಜಿ ತೋರಿಸಿದ ಮೋದಿ, ನೀವೂ ಸುರಕ್ಷಿತರಾಗಿದ್ದೀರಿ ತಾನೇ, ಏನೂ ಆಗಲ್ಲ ತಾನೇ, ದಯವಿಟ್ಟು ಕೆಳಗಿಳಿಯಿರಿ ಎಂದು ವಿನಂತಿಸಿಕೊಂಡರು.
ಈ ಮೂಲಕ ಮಂಗಳೂರು ಗೆಲ್ಲುವ ಯತ್ನಕ್ಕೆ ಕೈ ಹಾಕಿದರು.