ನವದೆಹಲಿ : ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತ ಮೈಲಿಗಲ್ಲು ಸ್ಥಾಪಿಸಿದ್ದು, 100 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಸಾಧನೆಯ ಹಿನ್ನಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇದು ಪ್ರತಿಯೊಬ್ಬ ಭಾರತೀಯನ ಯಶಸ್ಸು ಹೀಗಾಗಿ ನಾನು ದೇಶದ ಪ್ರತಿಯೊಬ್ಬರನ್ನೂ ಹೃದಯದಿಂದ ಅಭಿನಂದಿಸುತ್ತೇನೆ ಅಂದಿದ್ದಾರೆ.
ಇದೇ ವೇಳೆ ಬೇರೆ ದೇಶಗಳಲ್ಲಿ ನಡೆದ ಲಸಿಕಾ ಅಭಿಯಾನವನ್ನು ಪ್ರಸ್ತಾಪಿಸಿದ ಪ್ರಧಾನಿ, ಲಸಿಕೆ ಸಂಶೋಧನೆಯಲ್ಲಿ ಬೇರೆ ದೇಶಗಳು ಪರಿಣತಿ ಹೊಂದಿತ್ತು. ಭಾರತಕೂಡಾ ಲಸಿಕೆಗಾಗಿ ಬೇರೆ ದೇಶಗಳತ್ತ ಮುಖ ಮಾಡಿತ್ತು. ಹೀಗಾಗಿಯೇ ಕೊರೋನಾ ವಿರುದ್ಧ ಭಾರತಕ್ಕೆ ಹೋರಾಡಲು ಸಾಧ್ಯವೇ ಅನ್ನುವ ಪ್ರಶ್ನೆ ಎದ್ದಿತ್ತು. ಭಾರತ ಲಸಿಕೆ ಯಾವಾಗ ತರುತ್ತದೆ, ಅದಕ್ಕೆ ಹಣ ಎಲ್ಲಿಂದ ಅನ್ನುವ ಪ್ರಶ್ನೆಗಳನ್ನೂ ಎತ್ತಲಾಗಿತ್ತು. ಆಧರೆ ಈಗ 100 ಕೋಟಿ ಡೋಸ್ ಲಸಿಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ ಅಂದಿದ್ದಾರೆ.
100 ಕೋಟಿ ಲಸಿಕೆ ಕೇವಲ ಸಂಖ್ಯೆಯಲ್ಲ, ರಾಷ್ಟ್ರವಾಗಿ ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದು, ಮುಂಬರುವ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಿವಂತೆ ಮನವಿ ಮಾಡಿದ್ದಾರೆ. ಲಸಿಕೆಯ ಮೊದಲ ಡೋಸ್ ತೆಗೆದುಕೊಳ್ಳದ ಎಲ್ಲರಿಗೂ ಲಸಿಕೆ ಹಾಕಲು ಹೆಚ್ಚಿನ ಆದ್ಯತೆ ನೀಡಬೇಕಾಗಿದ್ದು. ಲಸಿಕೆ ಹಾಕಿಸಿಕೊಂಡವರು ಬೇರೆಯವರನ್ನು ಪ್ರೋತ್ಸಾಹಿಸಬೇಕು ಅಂದಿದ್ದಾರೆ.
Addressing the nation. Watch LIVE. https://t.co/eFdmyTnQZi
— Narendra Modi (@narendramodi) October 22, 2021
PM Modi address to nation Live Updates: Prime Minister Modi asks people to exercise caution during Diwali and other upcoming festivals, says masks have to become a part of life till the pandemic is over
Discussion about this post